For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಕಾಲಿನ್ ಮೆಕ್‌ಡೊನಾಲ್ಡ್ ನಿಧನ

Former Australia Cricketer Colin Mcdonald passes away aged 92

ಮೆಲ್ಬರ್ನ್: ಆಸ್ಟ್ರೇಲಿಯಾ ಟೆಸ್ಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಕಾಲಿನ್ ಮೆಕ್‌ಡೊನಾಲ್ಡ್ ಅವರು ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಪರ ಮೆಕ್‌ಡೊನಾಲ್ಡ್ ಅವರು 1952ರಿಂದ 1961ರ ವರೆಗೆ 47 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರು.

1952ರ ಜೂನ್ 25-29ರ ವರೆಗೆ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್‌ ವಿರುದ್ಧದ ಟೆಸ್ಟ್‌ ಪಂದ್ಯದೊಂದಿಗೆ ಕಾಲಿನ್ ಮೆಕ್‌ಡೊನಾಲ್ಡ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆವತ್ತು 32+62 ರನ್‌ ಬಾರಿಸಿದ್ದರು.

ತನ್ನ ಕಾಲದಲ್ಲಿ ಪ್ರಮುಖ ಆರಂಭಿಕ ಬ್ಯಾಟ್ಸ್‌ಮನ್‌ ಅನಿಸಿದ್ದ ಮೆಕ್‌ಡೊನಾಲ್ಡ್, 47 ಟೆಸ್ಟ್ ಪಂದ್ಯಗಳಲ್ಲಿ 39.32ರ ಸರಾಸರಿಯಂತೆ 3107 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕಗಳು ಮತ್ತು 17 ಅರ್ಧ ಶತಕಗಳು ಸೇರಿವೆ. 192 ಪ್ರಥಮರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿರುವ 40.48ರ ಸರಾಸರಿಯಲ್ಲಿ 11375 ರನ್ ಗಳಿಸಿದ್ದಾರೆ.

ಕ್ರಿಕೆಟ್ ವೃತ್ತಿ ಬದುಕು ಮುಗಿಸಿದ ಬಳಿಕ ಮೆಕ್‌ಡೊನಾಲ್ಡ್ ಅವರು ಟೆನಿಸ್‌ನ ಆಡಳಿತಾ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಆ ಬಳಿಕ ಕ್ರಿಕೆಟ್ ಕಾಮೆಂಟೇಟರ್ ಆಗಿಯೂ ಕೆಲಸ ಮಾಡಿದ್ದರು. ಮೆಕ್‌ ಡೊನಾಲ್ಡ್ ಅವರು ಕಡೇ ಪಂದ್ಯ ಆಡಿದ್ದು 1961ರಲ್ಲಿ ಇಂಗ್ಲೆಂಡ್ ವಿರುದ್ಧ.

Story first published: Monday, January 11, 2021, 15:39 [IST]
Other articles published on Jan 11, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+