ಆಸೀಸ್ ಮಾಜಿ ಸ್ಪಿನ್ನರ್ ಮ್ಯಾಕ್‌ಗಿಲ್‌ರಿಂದ ಅಪಹರಣ ಆರೋಪ

ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಸ್ಟುವರ್ಟ್ ಮ್ಯಾಕ್‌ಗಿಲ್ ಅಪಹರಣವಾಗಿದ್ದರಂತೆ. ಬಂದೂಕುಧಾರಿ ಮೂವರು ವ್ಯಕ್ತಿಗಳು ಕಳೆದ ತಿಂಗಳು ಏಪ್ರಿಲ್ 14ರಂದು ಮ್ಯಾಕ್‌ಗಿಲ್ ಅವರನ್ನು ಅಪಹರಿಸಿ ಸುಮಾರು ಒಂದು ಗಂಟೆಯ ಕಾಲ ಜೊತೆಗಿರಿಸಿಕೊಂಡಿದ್ದರಂತೆ. ಆ ಬಳಿಕ ಬಿಡುಗಡೆ ಮಾಡಿದ್ದರಂತೆ. ಇದನ್ನು ಸ್ವತಃ ಮ್ಯಾಕ್‌ಗಿಲ್ ಹೇಳಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಕಳೆದ ತಿಂಗಳು ಮೂವರು ಬಂದೂಕುಧಾರಿ ವ್ಯಕ್ತಿಗಳು ಸ್ಟುವರ್ಟ್ ಮ್ಯಾಕ್‌ಗಿಲ್ ಅವರನ್ನು ಅಪಹರಿಸಿ ಆ ಬಳಿಕ ಬಿಡುಗಡೆ ಮಾಡಿದ್ದರು. ಈ ಘಟನೆ ಸಿಡ್ನಿಯಲ್ಲಿ ನಡೆದಿತ್ತು ಎಂದು ಮ್ಯಾಕ್‌ಗಿಲ್ ಆರೋಪಿಸಿದ್ದಾರೆ. ಮ್ಯಾಕ್‌ಗಿಲ್‌ಗೀಗ 50ರ ಹರೆಯ.
ಆಸ್ಟ್ರೇಲಿಯಾದ ಬೇರೆ ಬೇರೆ ಮಾಧ್ಯಮಗಳ ಪ್ರಕಾರ, ಮ್ಯಾಕ್‌ಗಿಲ್ ಅಪಹರಣಕ್ಕೆ ಸಂಬಂಧಿಸಿ ಒಟ್ಟು 4 ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮ್ಯಾಕ್‌ಗಿಲ್ ಅವರನ್ನು ಆಸ್ಟ್ರೇಲಿಯಾದ ಬ್ರಿಂಗಲ್ ಎಂಬಲ್ಲಿಗೆ ಕರೆದೊಯ್ದು ಅವರ ಮೇಲೆ ಇನ್ನಿಬ್ಬರು ಸೇರಿ ಹಲ್ಲೆ ನಡೆಸಿದ್ದರು ಎಂದು ನ್ಯೂಸೌತ್‌ವೇಲ್ಸ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಆಸ್ಟ್ರೆಲಿಯಾ ಪರ ಸ್ಟುವರ್ಟ್ 1998ರಿಂದ 2008ರ ವರೆಗೆ 44 ಟೆಸ್ಟ್ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. 208 ವಿಕೆಟ್‌ಗಳು ಮ್ಯಾಕ್‌ಗಿಲ್‌ಗೆ ಲಭಿಸಿದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications