Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆತನಿಗೆ ಮತ್ತೆ ಪುಟಿದೇಳುವ ಸಾಮರ್ಥ್ಯವಿದೆ: ಕೊಹ್ಲಿ ಫಾರ್ಮ್ ಬಗ್ಗೆ ರಿಕಿ ಪಾಂಟಿಂಗ್ ಹೇಳಿಕೆ

Former Australian Legend Ricky Ponting Made A Big Statement About Virat Kohlis Form

ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ರನ್ ಗಳಿಸಲು ಪರದಾಡುತ್ತಿರುವ ವಿರಾಟ್ ಕೊಹ್ಲಿ ಬಗ್ಗೆ ರಿಕಿ ಪಾಂಟಿಂಗ್ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ನಲ್ಲಿದ್ದರೂ ರಿಕಿ ಪಾಂಟಿಂಗ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಫಾರ್ಮ್ ಕಳೆದುಕೊಂಡಿದ್ದರೂ ವಿರಾಟ್ ಕೊಹ್ಲಿ ಅದ್ಭುತವಾಗಿ ಫಾರ್ಮ್ ಕಂಡುಕೊಂಡಿದ್ದಾರೆ, ತಮ್ಮ ಸಾಮರ್ಥ್ಯವೇನು ಎನ್ನುವುದನ್ನು ಅವರು ಈಗಾಗಲೇ ತೋರಿಸಿದ್ದಾರೆ ಎಂದು ಪಾಂಟಿಂಗ್ ಹೇಳಿದರು.

ಜನವರಿಯಲ್ಲಿ ನಡೆದ ಏಕದಿನ ಸರಣಿಯಲ್ಲಿ ಶತಕಗಳನ್ನು ಗಳಿಸಿದ ವಿರಾಟ್ ಕೊಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ದೊಡ್ಡ ಮೊತ್ತವನ್ನು ಗಳಿಸುವಲ್ಲಿ ವಿಫಲವಾಗಿದ್ದಾರೆ. ಐದು ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 111 ರನ್ ಗಳಿಸಿದ್ದಾರೆ. ಆದರೂ ಕೊಹ್ಲಿ ಟಿ20 ಮತ್ತು ಏಕದಿನ ಮಾದರಿಯಲ್ಲಿ ಮಾಡಿದಂತೆ ಟೆಸ್ಟ್‌ನಲ್ಲಿ ಕೂಡ ವಾಪಸಾತಿ ಮಾಡುತ್ತಾರೆ ಎಂದು ಪಾಂಟಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐಸಿಸಿ ರಿವ್ಯೂನಲ್ಲಿ ಮಾತನಾಡಿದ ರಿಕಿ ಪಾಂಟಿಂಗ್ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ವಿರಾಟ್ ಕೊಹ್ಲಿ ವಿಚಾರದಲ್ಲಿ ನಾನು ಪದೇ ಪದೇ ಹೇಳಿದ್ದೇನೆ. ಚಾಂಪಿಯನ್ ಆಟಗಾರರು ವಾಪಸಾಗಲು ಯಾವಗಲೂ ಒಂದು ದಾರಿಯನ್ನು ಹುಡುಕಿಕೊಳ್ಳುತ್ತಾರೆ. ಅವರು ಸದ್ಯ ರನ್ ಗಳಿಸದೇ ಇರಬಹುದು ಆದರೆ ಅವರು ಮತ್ತೆ ಫಾರ್ಮ್ ಕಂಡುಕೊಳ್ಳುತ್ತಾರೆ" ಎಂದು ಪಾಂಟಿಂಗ್ ಹೇಳಿದ್ದಾರೆ.

Former Australian Legend Ricky Ponting Made A Big Statement About Virat Kohlis Form

ಬಹುತೇಕ ಎಲ್ಲರೂ ವಿಫಲರಾಗಿದ್ದಾರೆ

"ನೀವೊಬ್ಬ ಅತ್ಯುತ್ತಮ ಬ್ಯಾಟರ್ ಆಗಿರುವಾಗ ರನ್ ಗಳಿಸದೇ ಕಷ್ಟಪಡುತ್ತಿರುವಾಗಿ, ಅದರ ಬಗ್ಗೆ ನಿಮಗೇ ಚೆನ್ನಾಗಿ ತಿಳಿದಿರುತ್ತದೆ. ನಾನು ಈ ಬಗ್ಗೆ ಯೋಚನೆ ಮಾಡುವುದಿಲ್ಲ, ವಿರಾಟ್ ಕೊಹ್ಲಿ ಮತ್ತೆ ಪುಟಿದೇಳುವ ವಿಶ್ವಾಸವಿದೆ" ಎಂದು ಪಾಂಟಿಂಗ್ ಹೇಳಿದ್ದಾರೆ.

ಭಾರತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದರೂ, ಯಾವೊಬ್ಬ ಬ್ಯಾಟರ್‍ ಕೂಡ ಸ್ಥಿರವಾದ ಪ್ರದರ್ಶನ ನೀಡಿಲ್ಲ. ಎರಡೂ ತಂಡಗಳ ಬ್ಯಾಟರ್‌ಗಳು ಉತ್ತಮ ಫಾರ್ಮ್ ಪ್ರದರ್ಶಿಸಲು ಮತ್ತು ದೊಡ್ಡ ಮೊತ್ತವನ್ನು ಗಳಿಸಲು ವಿಫಲರಾಗಿದ್ದಾರೆ. ಹಲವು ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಿರುವುದನ್ನು ಪ್ರಶ್ನಿಸಲಾಗುತ್ತಿದೆ.

ಎರಡೂ ತಂಡಗಳ ಯಾವುದೇ ಬ್ಯಾಟರ್ ಫಾರ್ಮ್ ಬಗ್ಗೆ ಮಾತನಾಡುವುದು ಕಷ್ಟ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ. ಭಾರತದಲ್ಲಿ ಪಿಚ್‌ಗಳು ಬ್ಯಾಟಿಂಗ್ ಮಾಡಲು ಕಷ್ಟಕರವಾಗಿರುವುದರಿಂದ ಬ್ಯಾಟರ್ ನನ್ನು ದೂಷಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Former Australian Legend Ricky Ponting Made A Big Statement About Virat Kohlis Form

ಬ್ಯಾಟಿಂಗ್ ಮಾಡುವುದು ಕಷ್ಟ

"ಈ ಟೆಸ್ಟ್ ಸರಣಿಯಲ್ಲಿ ಯಾರೊಬ್ಬ ಬ್ಯಾಟರ್ ಫಾರ್ಮ್ ಅನ್ನು ನೋಡಬಾರು. ಈ ಸರಣಿ ಬ್ಯಾಟರ್ ಗಳಿಗೆ ಸಂಪೂರ್ಣ ದುಃಸ್ವಪ್ನವಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಸೋತ ನಂತರ ಮೂರನೇ ಟೆಸ್ಟ್‌ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದೆ. ಬ್ಯಾಟಿಂಗ್ ಮಾಡುವುದು ಎಷ್ಟು ಕಷ್ಟ ಎನ್ನುವುದನ್ನು ಮೂರು ಟೆಸ್ಟ್‌ಗಳಲ್ಲಿ ನೋಡಿದ್ದೇವೆ" ಎಂದು ಹೇಳಿದರು.

"ಅಸಮವಾದ ಬೌನ್ಸ್‌ನಿಂದಾಗಿ ನೀವು ವಿಕೆಟ್‌ನಲ್ಲಿ ನಂಬಿಕೆ ಕಳೆದುಕೊಳ್ಳುತ್ತೀರಿ, ಹಾಗೇನಾದರೂ ಆದರೆ ಬ್ಯಾಟಿಂಗ್ ಮಾಡುವುದು ಇನ್ನೂ ಕಷ್ಟವಾಗುತ್ತದೆ. ಸಾಕಷ್ಟು ತಾಳ್ಮೆಯಿಂದ ಬ್ಯಾಟಿಂಗ್ ಮಾಡಬೇಕಾಗುತ್ತದೆ" ಎಂದು ಅವರು ಹೇಳಿದರು.

Story first published: Tuesday, March 7, 2023, 5:35 [IST]
Other articles published on Mar 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+