Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಂಗ್ಲಾ ಮಾಜಿ ನಾಯಕ ಹಬೀಬುಲ್ ಬಶರ್‌ಗೆ ಕೊರೊನಾ ಪಾಸಿಟಿವ್

Former Bangladesh captain Habibul Bashar tests positive for coronavirus

ಧಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಹಬೀಬುಲ್ ಬಶರ್‌ಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಈಗವರು ಮನೆಯಲ್ಲಿದ್ದು ಕ್ವಾರಂಟೈನ್ ಪಾಲಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಬಶರ್ ಸದ್ಯ ಬಾಂಗ್ಲಾ ರಾಷ್ಟ್ರೀಯ ತಂಡದ ಆಯ್ಕೆದಾರರಾಗಿದ್ದಾರೆ. ಈ ವಾರದಲ್ಲಿ ಬಾಂಗ್ಲಾ ಟೆಸ್ಟ್ ನಾಯಕ ಮೊಮಿನುಲ್ಲ ಹಕ್ ಮತ್ತು ಆಲ್ ರೌಂಡರ್ ಮೊಹಮದುಲ್ಲ ರಿಯಾದ್ ಕೊರೊನಾ ಸೋಂಕಿಗೀಡಾಗಿದ್ದರು. ಅವರಿಂದ ಸೋಂಕು ಬಶರ್‌ಗೂ ತಗುಲಿತ್ತು ಎಂದು ತಿಳಿದು ಬಂದಿದೆ.

ಬಾಂಗ್ಲಾ ಟ್ರಿಬ್ಯೂನ್ ಜೊತೆ ಮಾತನಾಡಿದ ಹಬೀಬುಲ್, 'ನಾನು ತುಂಬಾ ಜಾಗರೂಕನಾಗಿದ್ದೆ. ಆದರೂ ನನಗೆ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ ನಾವೇನೂ ಮಾಡುವಂತಿಲ್ಲ. ಕೊರೊನಾ ನಮ್ಮನ್ನು ಯಾರನ್ನು ಬಿಟ್ಟು ಹೋಗುವಂತೆ ಕಾಣಿಸುತ್ತಿಲ್ಲ,' ಎಂದಿದ್ದಾರೆ.

'ನನಗೆ ಸೋಮವಾರದಿಂದ ಜ್ವರವಿತ್ತು. ಪರೀಕ್ಷಿಸಿದಾಗ 102 ಡಿಗ್ರೀ ಇತ್ತು. ಅದು ಮಂಗಳವಾರವೂ ಮುಂದುವರೆಯಿತು. ಹೀಗಾಗಿ ನಾನು ಬುಧವಾರ ಪರೀಕ್ಷೆ ನಡೆಸಿದೆ. ನನಗೆ ಸಂಜೆ ಫಲಿತಾಂಶ ಸಿಕ್ಕಿತು,' ಎಂದು ಹಬೀಬುಲ್ ಮಾಹಿತಿ ನೀಡಿದ್ದಾರೆ.

Story first published: Saturday, November 14, 2020, 9:53 [IST]
Other articles published on Nov 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+