ಬಾಂಗ್ಲಾ ಮಾಜಿ ಕ್ರಿಕೆಟರ್ ನಫೀಸ್ ಇಕ್ಬಾಲ್‌ಗೆ ಕೊರೊನಾವೈರಸ್ ಪಾಸಿಟಿವ್

ಧಾಕಾ, ಜೂನ್ 20: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ಆಟಗಾರ, ಬಾಂಗ್ಲಾ ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್ ಅವರ ಅಣ್ಣ ನಫೀಸ್ ಇಕ್ಬಾಲ್‌ಗೆ ಕೊರೊನಾವೈರಸ್ ಸೋಂಕು ತಗುಲಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ತನಗೆ ಮಾರಕ ಕೊರೊನಾವೈರಸ್ ಸೋಂಕು ತಗುಲಿರುವುದಾಗಿ ಸ್ವತಃ ನಫೀಸ್ ಇಕ್ಬಾಲ್ ಖಾತರಿಪಡಿಸಿದ್ದಾರೆ ಎಂದು 'ದ ಡೈಲಿ ಸ್ಟಾರ್' ದಿನಪತ್ರಿಕೆ ವರದಿ ಮಾಡಿದೆ. ನಫೀಸ್ ಈಗ ಚಿತ್ತಗಾಂಗ್‌ನ ತನ್ನ ನಿವಾಸದಲ್ಲಿ ಐಸೊಲೇಶನ್‌ನಲ್ಲಿದ್ದಾರೆ ಎನ್ನಲಾಗಿದೆ.
ಬಲಗೈ ಅರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ನಫೀಸ್ ಇಕ್ಬಾಲ್, ಬಾಂಗ್ಲಾದೇಶ ಪರ 2003ರಲ್ಲಿ ಪಾದಾರ್ಪಣೆ ಮಾಡಿದ್ದರು. ಆದರೆ 2006ರಿಂದಲೂ ನಫೀಸ್ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿಲ್ಲ. 34ರ ಹರೆಯದ ನಫೀಸ್, ಬಾಂಗ್ಲಾ ಪರ 11 ಟೆಸ್ಟ್, 16 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 518 ಮತ್ತು 309 ರನ್ ಗಳಿಸಿದ್ದಾರೆ.
ಕಳೆದ ತಿಂಗಳು ಬಾಂಗ್ಲಾದ ಮಾಜಿ ಪ್ರಥಮದರ್ಜೆ ಕ್ರಿಕೆಟರ್ ಆಶಿಕೂರ್ ರಹಮಾನ್‌ಗೆ ಕೊರೊನಾ ವೈರಸ್ ಪಾಸಿಟಿವ್ ಆಗಿತ್ತು. ಇನ್ನು ಪಾಕಿಸ್ತಾನದ ಮೂವರು ಕ್ರಿಕೆಟಿಗರಾದ ಶಾಹಿದ್ ಅಫ್ರಿದಿ, ತೌಫೀಕ್ ಉಮರ್ ಮತ್ತು ಜಾಫರ್ ಸರ್ಫರಾಜ್‌ಗೆ ಕೊರೊನಾವೈರಸ್ ತಗುಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications