ಆತ್ಮಹತ್ಯೆಗೆ ಶರಣಾದ ಬಾಂಗ್ಲಾದೇಶದ ಅಂಡರ್ 19 ಮಾಜಿ ಕ್ರಿಕೆಟರ್

ಢಾಕಾ, ನ.17: ಬಾಂಗ್ಲಾದೇಶ ಪರ ಅಂಡರ್ 19 ಕ್ರಿಕೆಟ್ ಆಡಿದ್ದ ಮಾಜಿ ಆಟಗಾರರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮೃತ ಮಾಜಿ ಕ್ರಿಕೆಟರ್ ಹೆಸರು ಮೊಹಮ್ಮದ್ ಸೊಜಿಬ್. ದುರ್ಗ್ ಪುರ್ ನಿವಾಸಿಯಾಗಿದ್ದ ಸೊಜಿಬ್ ಗಿನ್ನೂ 21 ವರ್ಷ.
ಬಲಗೈ ಬ್ಯಾಟ್ಸ್ ಮನ್ ಆಗಿದ್ದ ಸೊಜಿಬ್ ಮೂರು ಪ್ರಥಮ ದರ್ಜೆ ಪಂದ್ಯಗಳನಾಡಿದ್ದರು. 2017-18ರಲ್ಲಿ ಢಾಕಾ ಪ್ರೀಮಿಯರ್ ಲೀಗ್ ನಲ್ಲಿ ಶಿನೇಪುಕರ್ ಕ್ರಿಕೆಟ್ ಕ್ಲಬ್ ಪರ ಆಡಿದ್ದರು.
''ಸೊಜಿಬ್ ಪ್ರತಿಭಾವಂತ ಕ್ರಿಕೆಟರ್ ಆಗಿದ್ದರು, ಅವರ ನಿಧನದ ಬಗ್ಗೆ ಕೇಳಿ ತೀವ್ರ ಆಘಾತವಾಗಿದೆ, ನನಗೆ ನಿಜಕ್ಕೂ ನಂಬಲಾಗುತ್ತಿಲ್ಲ, ಓಪನಿಂಗ್ ಬ್ಯಾಟ್ಸ್ ಮನ್ ಹಾಗೂ ಮಧ್ಯಮ ವೇಗಿಯಾಗಿ ಶಿನೇಪುಕರ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದರು'' ಎಂದು ಬಾಂಗ್ಲಾದೇಶ ಕ್ರಿಕೆಟ್ ಕ್ಲಬ್ ನಿರ್ದೇಶಕ ಖಾಲಿದ್ ಮೊಹಮ್ಮದ್ ಸ್ಮರಿಸಿದ್ದಾರೆ.
2017ರಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಯುವ ಕ್ರಿಕೆಟರ್ ನಡುವಿನ ಮೂರು ಏಕದಿನ ಪಂದ್ಯಗಳಲ್ಲೂ ಸೊಜಿಬ್ ಪಾಲ್ಗೊಂಡಿದ್ದರು. 2018ರ ಅಂಡರ್ 19 ವಿಶ್ವಕಪ್ ತಂಡದ ಬದಲಿ ಆಟಗಾರರಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications