Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಿಸಿಸಿಐ ಮಾಜಿ ಆಯ್ಕೆದಾರ ಕಿಶನ್ ರುಂಗ್ತಾ ಕೊರೊನಾವೈರಸ್‌ಗೆ ಬಲಿ

Former BCCI selector Kishan Rungta dies of Coronavirus

ಜೈಪುರ್: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಆಯ್ಕೆ ಸಮಿತಿಯಲ್ಲಿದ್ದ ಕಿಶನ್ ರುಂಗ್ತಾ ಕೊರೊನಾವೈರಸ್‌ಗೆ ಬಲಿಯಾಗಿದ್ದಾರೆ. ಜೈಪುರ್‌ನ ಆಸ್ಪತ್ರೆಯಲ್ಲಿ ಕಿಶನ್ ಕೊನೆಯುಸಿರೆಳೆದಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಬಿಸಿಸಿಐ ಹಿರಿಯ ಆಡಳಿತಾಧಿಕಾರಿಯಾಗಿದ್ದ ಕಿಶನ್ ರುಂಗ್ತಾಗೆ ಕಳೆದ ವಾರ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಶನಿವಾರ (ಮೇ 2) ರುಂಗ್ತಾ ಸಾವನ್ನಪ್ಪಿದ್ದಾರೆ. ಬಿಸಿಸಿಐ ಮೂಲ ಈ ಸಂಗತಿಯನ್ನು ಪಿಟಿಐಗೆ ಖಾತರಿಪಡಿಸಿದೆ.

'ರಾಜಸ್ಥಾನ್‌ನ ಮಾಜಿ ಪ್ರಥಮದರ್ಜೆ ಕ್ರಿಕೆಟರ್ ಮತ್ತು ಬಿಸಿಸಿಐ ಮಾಜಿ ಆಯ್ಕೆದಾರರಾಗಿದ್ದ ಕಿಶನ್ ರುಂಗ್ತಾ ಅವರು ಕೋವಿಡ್-19ನಿಂದ ಸಾವನ್ನಪ್ಪಿದ್ದಾರೆ,' ಎಂದು ಬಿಸಿಸಿಐ ಮೂಲ ತಿಳಿಸಿದೆ. ರುಂಗ್ತಾ ಅವರು 1998ರಲ್ಲಿ ಸೆಂಟ್ರಲ್‌ ಝೋನ್‌ನಿಂದ ರಾಷ್ಟ್ರೀಯ ಆಯ್ಕೆದಾರರಾಗಿದ್ದರು.

1953ರಿಂದ 1970ರ ವರೆಗೆ 59 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ್ದ ರುಂಗ್ತಾ 2717 ರನ್ ಗಳಿಸಿದ್ದರು. ರುಂಗ್ತಾ ಅವರ ದಿವಂಗತ ಅಣ್ಣ ಕೂಡ 1970ರಲ್ಲಿ ಬಿಸಿಸಿಐ ಖಜಾಂಚಿಯಾಗಿದ್ದರು.

Story first published: Monday, May 3, 2021, 9:19 [IST]
Other articles published on May 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+