Faf du Plessis: ಬೆಂಗಳೂರು ಅಭಿಮಾನಿಗಳ ಅಭಿಮಾನಕ್ಕೆ ಫಾಫ್ ಅಕ್ಷ ರೂಪ
IPL 2025 ರ ಮೆಗಾ ಹರಾಜು ಪ್ರಕ್ರಿಯೆಯು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಭಿಮಾನಿಗಳಿಗೆ ಸಂತೋಷ ಮತ್ತು ಬೇಸರ ತಂದಿದೆ. ಮುಂದಿನ ಐಪಿಎಲ್ ಆವೃತ್ತಿಗೆ ಆರ್‌ಸಿಬಿ ಫ್ರಾಂಚೈಸಿ ಹೊಸ ಬಲಿಷ್ಠ ತಂಡವನ್ನು ಕಟ್ಟಿದೆ. ಈ ಹಿಂದೆ ತಂಡದಲ್ಲಿದ್ದ ಸ್ಟಾರ್ ಆಟಗಾರರನ್ನು ಆರ್‌ಸಿಬಿ ಫ್ರಾಂಚೈಸಿ ಕೈಬಿಟ್ಟಿದೆ. ಇದು ಆರ್‌ಸಿಬಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಆರ್‌ಸಿಭಿ ಸ್ಟಾರ್ ಆಟಗಾರರಾದ ಮೊಹಮದ್ಮ ಸಿರಾಜ್, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿಲ್ ಜ್ಯಾಕ್ಸ್ ಅವರನ್ನು ಐಪಿಎಲ್ 2025ರ ಟೂರ್ನಿಗೆ ಉಳಿಸಿಕೊಂಡಿಲ್ಲ. ಈ ಎಲ್ಲಾ ಆಟಗಾರರು ಆರ್‌ಸಿಬಿ ಅಭಿಮಾನಿಗಳ ಸಾಕಷ್ಟು ಪ್ರೀತಿಗೆ ಪಾತ್ರರಾಗಿದ್ದರು. ಹೀಗಾಗಿ ಈ ಸ್ಟಾರ್ ಆಟಗಾರರನ್ನು ಮುಂದಿನ ಐಪಿಎಲ್‌ನಲ್ಲಿ ಆರ್‌ಸಿಬಿ ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಆರ್‌ಸಿಬಿಗೆ ಆರ್‌ಸಿಬಿ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಭಾವನ್ಮಾತಕ ವಿದಾಯ ಹೇಳಿದ್ದಾರೆ.

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿ ತಮ್ಮ ನಾಯಕ ಫಾಫ್ ಡು ಪ್ಲೆಸಿಸ್ ಅವರಿಗೆ ಆರ್‌ಟಿಎಂ ಬಳಸುವ ಅವಕಾಶವನ್ನು ಹೊಂದಿತ್ತು. ಆದರೆ ಆರ್‌ಸಿಬಿ ಯಾಕೋ ಮನಸ್ಸು ಮಾಡಲಿಲ್ಲ. ಪರಿಣಾಮ ಫಾಫ್ ಅವರು ಮೂಲ 2 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು. ಹೀಗಾಗಿ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಅವರು ನೀಲಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಆರ್‌ಸಿಬಿ ಅಭಿಮಾನಿಗಳಿಗೆ ಫಾಫ್ ಡು ಪ್ಲೆಸಿಸ್ ಗುಡ್ ಬೈ ಹೇಳಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
'ಆರ್‌ಸಿಬಿಯೊಂದಿಗೆ ನನ್ನ ಅಧ್ಯಾಯ ಮುಕ್ತಾಯವಾಗಿದೆ. ಇದನ್ನು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ. ಆರ್‌ಸಿಬಿ ಜೊತೆಗಿನ ಅದ್ಭುತ ನೆನಪುಗಳಿಂದ ಹೊರ ಬರಲು ತುಂಬ ದಿನಬೇಕಾಗುತ್ತದೆ. ನಾನು ಮೂರು ವರ್ಷಗಳ ಹಿಂದೆ ಆರ್‌ಸಿಬಿಗೆ ಬಂದಾಗ ನನ್ನ ಮುಂದಿನ ಭವಿಷ್ಯದ ಬಗ್ಗೆ ನನಗೆ ತಿಳಿದಿರಲಿಲ್ಲ. ಆದರೆ ನಾನು ಬೆಂಗಳರನ್ನು ಪ್ರೀತಿಸುತ್ತೇನೆ. ಈ ಮೂರು ವರ್ಷಗಳನ್ನು ತುಂಬಾ ವಿಶೇಷವಾಗಿಸಿದ್ದಕ್ಕಾಗಿ ಈ ನೆನಪುಗಳನ್ನು ಕೊಂಡೊಯ್ಯುತ್ತೇನೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ್ದು ನನ್ನ ವೃತ್ತಿಜೀವನದ ರೋಚಕ ಅನುಭವಗಳಲ್ಲಿ ಒಂದಾಗಿದೆ. ಆರ್‌ಸಿಬಿ ಅಭಿಮಾನಿಗಳ ಶಕ್ತಿ, ಉತ್ಸಾಹ ಮತ್ತು ಬೆಂಬಲ ವಿಶೇಷವಾಗಿದೆ ಎಂದು ಫಾಫ್ ಡು ಪ್ಲೆಸಿಸ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಕಾಮೆಂಟ್‌ಗಳ ಮೂಲಕ ಪ್ರೀತಿ ತೋರಿಸಿದ್ದಾರೆ.
ಫಾಫ್ ಡು ಪ್ಲೆಸಿಸ್ ಕಳೆದ 3 ವರ್ಷಗಳಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದಾರೆ. ಕಳೆದ ಬಾರಿಯ ಐಪಿಎಲ್ 2024ರಲ್ಲಿ ಆರ್‌ಸಿಬಿ ಅನ್ನು ಪ್ಲೇಆಫ್‌ಗೆ ಕರೆದೊಯ್ದರು. ಅಲ್ಲದೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದ ಅವರು 438 ರನ್ ಗಳಿಸಿದ್ದರು. ಐಪಿಎಲ್ 2023 ರಲ್ಲಿ ಅವರು ಆರ್‌ಸಿಬಿ ಪರ 700ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications