ಕೊಹ್ಲಿ ಸಂಬಳದ ಮೇಲೆ ಕುಂಬ್ಳೆ ಕಣ್ಣು ಹಾಕಿದ್ರಾ?
ಬೆಂಗಳೂರು, ಜೂನ್ 23: ವಿರಾಟ್ ಕೊಹ್ಲಿ ಹಾಗೂ ಅನಿಲ್ ಕುಂಬ್ಳೆ ನಡುವಿನ ಕಿತ್ತಾಟದ ಅಸಲಿ ಸಮಸ್ಯೆ ಬಗ್ಗೆ ಬಿಸಿಸಿಐನ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ. ಆದರೆ, ತಮ್ಮ ವೇತನದ ಬಗ್ಗೆ ಅಷ್ಟೇ ಅಲ್ಲ ಎಲ್ಲಾ ಕ್ರಿಕೆಟರ್ಸ್, ಸಹಾಯಕ ಸಿಬ್ಬಂದಿಗಳ ವೇತನ, ಗುತ್ತಿಗೆ ಬಗ್ಗೆ ಸಂಪೂರ್ಣ ಬದಲಾವಣೆ ತರಲು ಯತ್ನಿಸಿದ್ದರು.
ಆಟಗಾರರ ಗುತ್ತಿಗೆಗೆ ಸಂಬಂಧಿಸಿದಂತೆ ಅಂದಿನ ಕೋಚ್ ಅನಿಲ್ ಕುಂಬ್ಳೆ 19 ಪುಟಗಳ ಶಿಫಾರಸುಗಳನ್ನು ನೀಡಿದ್ದರು. ಇದರಲ್ಲಿ ಮುಖ್ಯವಾಗಿ ಕಂಡು ಬಂದಿದ್ದು-ನಾಯಕನಿಗೆ ಸಿಗುವ ಸಂಭಾವನೆಯ ಶೇ 60ರಷ್ಟು ಮೊತ್ತ ಮುಖ್ಯಕೋಚ್ ಗೆ ಸಿಗಬೇಕು' ಎಂಬುದು ಕುಂಬ್ಳೆ ವಾದವಾಗಿತ್ತು.
ಇದರಂತೆ, ತಂಡದ ಕೋಚ್ ಆಗಿದ್ದ ವೇಳೆ ಕುಂಬ್ಳೆ ವಾರ್ಷಿಕ 6.5ಕೋಟಿ ವೇತನ ಪಡೆದುಕೊಳ್ಳುತ್ತಿದ್ದರು. ಅದನ್ನು 7.5 ಕೋಟಿಗೆ ಹೆಚ್ಚಿಸಬೇಕು ಎಂಬುದು ಅವರ ಮನವಿಯಾಗಿತ್ತು ಎನ್ನಲಾಗಿದೆ.
ಮೇ 21ರಂದು ಸಿಒಎ ಅಧಿಕಾರಿಗಳೊಂದಿಗೆ ಅನಿಲ್ ಕುಂಬ್ಳೆ ಚರ್ಚೆ ನಡೆಸಿದ್ದರು. ಕ್ರಿಕೆಟ್ ಆಟಗಾರರ ಸಂಭಾವನೆ ಕುರಿತು ಚರ್ಚಿಸಿದ್ದರು.
ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆಗೆ ದೇಶೀ ಕ್ರಿಕೆಟಿಗರ ಹಣಕಾಸಿನ ಸಮಸ್ಯೆಯ ಬಗ್ಗೆ ಬಿಸಿಸಿಐ ಗಮನಕ್ಕೆ ತರುವಂತೆ ಭಜ್ಜಿ ಪತ್ರ ಬರೆದಿದ್ದರು.

ಕುಂಬ್ಳೆ ಶಿಫಾರಸು
* ದೇಶಿ ಕ್ರಿಕೆಟ್, ಟೀಂ ಇಂಡಿಯಾದ ಆಟಗಾರರ ಗುತ್ತಿಗೆ ಕುರಿತಂತೆ ಕುಂಬ್ಳೆ ಅವರು 19 ಪುಟಗಳ ವರದಿ ನೀಡಿದ್ದರು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
* ಆಟಗಾರರ ಫಿಟ್ನೆಸ್ ಆಧಾರದ ಮೇಲೆ ಕೇಂದ್ರ ಗುತ್ತಿಗೆಯಂತೆ ಶೇ 20ರಷ್ಟು ಮೊತ್ತವನ್ನು ಫಿಟ್ನೆಸ್ ಗುಣಮಟ್ಟ ನೋಡಿಕೊಂಡು ವೇರಿಯಬಲ್ ಪೇ(ಕಾರ್ಯಕ್ಷಮತೆಗೆ ತಕ್ಕಂತೆ ಮೊತ್ತ) ನೀಡಬೇಕು ಎಂದು ಕುಂಭ್ಳೆ ಹೇಳಿದ್ದಾರೆ.

ಐಪಿಎಲ್ ಸಂದರ್ಭದಲ್ಲಿ ಸಭೆ
* ಐಪಿಎಲ್ ವೇಳೆ ಮೇ21ರಂದು ಕ್ರಿಕೆಟ್ ನಿರ್ವಹಣ ಮಂಡಳಿಗೆ ನೀಡಿದ ಪತ್ರದಲ್ಲಿ ವಿಸ್ತಾರವಾಗಿ ಎಲ್ಲವನ್ನು ಕುಂಬ್ಳೆ ವಿವರಿಸಿದ್ದಾರೆ. ಆಟಗಾರರ ಸಂಬಳ, ಗುತ್ತಿಗೆ ಪುನರ್ ರಚನೆ ಎಂಬ ಶೀರ್ಷಿಕೆ ಅಡಿಯಲ್ಲರುವ ಈ ಬೇಡಿಕೆಗಳು ಮುಂದಾಲೋಚನೆಯಿಂದ ಇಂಜಿನಿಯರ್ ರೊಬ್ಬ ಹಾಕಿಕೊಟ್ಟ ನೀಲನಕ್ಷೆಯಂತೆ ತೋರುತ್ತದೆ.
* ಈ ವರದಿಯ 12ನೇ ಪುಟದಲ್ಲಿ ಟೀಂನ ಸಹಾಯಕ ಸಿಬ್ಬಂದಿಯ ವೇತನ ಪರಿಷ್ಕರಣೆ ಬಗ್ಗೆ ಬರೆದಿದ್ದಾರೆ.

ಇದು ಕೊಹ್ಲಿಗೆ ಅಪಥ್ಯವಾಗಿದೆ.
* ನಾಯಕನಿಗೆ ಸಿಗುವ ಸಂಬಳದ ಶೇ 60ರಷ್ಟು, ಈಗಿನ ಲೆಕ್ಕದಂತೆ 6.5 ಕೋಟಿ ರು ನಿಂದ 7.5 ಕೋಟಿ ರುಗೆ ಏರಿಕೆ ಯಾಗಬೇಕು. ಶೇ 30ರಷ್ಟು ಸಂಬಳ, ತಂಡದ ಫಲಿತಾಂಶದ ಮೇಲೆ ವೇರಿಯಬಲ್ ಬೋನಸ್ ಸಿಗಬೇಕು. ಎಂದಿದ್ದಾರೆ. ಈ ಮೂಲಕ ನಾಯಕ ಕೂಡಾ ಉತ್ತಮ ಫಲಿತಾಂಶ ನೀಡಿದರೆ ಮಾತ್ರ ಬೋನಸ್ ಗೆ ಅರ್ಹ ಎಂದು ಪ್ರತಿಪಾದಿಸಿದ್ದಾರೆ. ಇದು ಕೊಹ್ಲಿಗೆ ಅಪಥ್ಯವಾಗಿದೆ.

ಎರಡು ಹುದ್ದೆ ಬಗ್ಗೆ
ಟೀಂ ಇಂಡಿಯಾದ ಗುತ್ತಿಗೆಯಲ್ಲಿರುವ ಕೋಚ್ ಗಳು ಐಪಿಎಲ್ ನಲ್ಲಿ ಕೋಚ್ ಆಗಿದ್ದರೆ ತಪ್ಪೇನಿಲ್ಲ. ಐಪಿಎಲ್ ನಲ್ಲಿ ಆಡಲು ಆಟಗಾರರಿಗೆ ಗುತ್ತಿಗೆಯಿಂದ 2 ತಿಂಗಳು ವಿನಾಯಿತಿ ಸಿಗುವುದಾದ್ರೆ ಕೋಚ್ ಗಳಿಗೂ ಸಿಗಲಿ ಎಂದಿದ್ದಾರೆ. ಇದರ ಜತೆಗೆ ಕಂಪನಿಗಳಲ್ಲಿ ಇರುವಂತೆ ಭವಿಷ್ಯ ನಿಧಿ, ಗ್ರ್ಯಾಚುಟಿ ಮಾದರಿ ವ್ಯವಸ್ಥೆ ಕಲ್ಪಿಸಿ ಆಟಗಾರರಿಗೆ ನಿವೃತ್ತಿ ಬದುಕು ಹಸನುಗೊಳಿಸಲು ಕುಂಬ್ಳೆ ಯೋಜನೆ ಹಾಕಿಕೊಂಡಿದರು. ಸಂಜಯ್ ಬಂಗಾರ್ ಸಂಬಳ 1 ಕೋಟಿ ರು ನಿಂದ 2.25 ಕೋಟಿ ರುಹಾಗೂ ಆರ್ ಶ್ರೀಧರ್ ಗೆ 1.75 ಕೋಟಿ ಸಿಗಬೇಕು. ಎಂದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications