For Quick Alerts
ALLOW NOTIFICATIONS  
For Daily Alerts
 

Ajit Agarkar: ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ನೇಮಕ

ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನಿರೀಕ್ಷೆಯಂತೆ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಅವರು ಮಂಗಳವಾರ, ಜುಲೈ 4ರಂದು ನೇಮಕಗೊಂಡಿದ್ದಾರೆ.

ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಪುರುಷರ ಆಯ್ಕೆ ಸಮಿತಿ ಆಯ್ಕೆಗಾರನ ಒಂದು ಸ್ಥಾನಕ್ಕಾಗಿ ಅರ್ಜಿದಾರರನ್ನು ಸಂದರ್ಶಿಸಿತು. ಈ ಮೂವರು ಸದಸ್ಯರ ಸಿಎಸಿಯು ಅಜಿತ್ ಅಗರ್ಕರ್ ಅವರನ್ನು ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಸರ್ವಾನುಮತದಿಂದ ಶಿಫಾರಸು ಮಾಡಿತು.

Ajit Agarkar Appoints As Selection Committee Chief

ಭಾರತ ತಂಡದ ಮಾಜಿ ಆಲ್‌ರೌಂಡರ್ ಅಜಿತ್ ಅಗರ್ಕರ್ ದೇಶೀಯ ಕ್ರಿಕೆಟ್‌ನಲ್ಲಿ 110 ಪ್ರಥಮ ದರ್ಜೆ, 270 ಲಿಸ್ಟ್ ಎ, ಮತ್ತು 62 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಇನ್ನು ಭಾರತ ತಂಡದ ಪರ 26 ಟೆಸ್ಟ್‌ ಪಂದ್ಯಗಳು, 191 ಏಕದಿನ ಪಂದ್ಯಗಳು ಮತ್ತು 4 ಟಿ20 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಮಾಜಿ ವೇಗಿ ಅಜಿತ್ ಅಗರ್ಕರ್ ಅವರು 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡದ ಭಾಗವಾಗಿದ್ದರು.

2000ರಲ್ಲಿ ಜಿಂಬಾಬ್ವೆ ವಿರುದ್ಧ 21 ಎಸೆತಗಳಲ್ಲಿ ಅರ್ಧಶತಕ ಬಾರಿಸುವುದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಭಾರತೀಯ ಬ್ಯಾಟರ್‌ನಿಂದ ವೇಗವಾಗಿ ಅರ್ಧಶತಕ ಗಳಿಸಿದ ದಾಖಲೆಯನ್ನು ಅಜಿತ್ ಅಗರ್ಕರ್ ಈಗಲೂ ಹೊಂದಿದ್ದಾರೆ.

ಇನ್ನು ಅಜಿತ್ ಅಗರ್ಕರ್ ಅವರು ಕೇವಲ 23 ಪಂದ್ಯಗಳಲ್ಲಿ ವೇಗವಾಗಿ 50 ಏಕದಿನ ವಿಕೆಟ್‌ಗಳ ಮೈಲಿಗಲ್ಲನ್ನು ಸಾಧಿಸುವ ಮೂಲಕ, ಸುಮಾರು ಒಂದು ದಶಕದ ಕಾಲ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದರು.

ಅಜಿತ್ ಅಗರ್ಕರ್ ಅವರು ಕ್ರಿಕೆಟ್‌ ವೃತ್ತಿಜೀವನದ ನಂತರ ಅವರು ಮುಂಬೈ ತಂಡದ ಮುಖ್ಯ ಆಯ್ಕೆಗಾರರಾಗಿ ನೇಮಕಗೊಂಡರು. ಆ ಬಳಿಕ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸಹಾಯಕ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡರು.

ಕ್ರಿಕೆಟ್ ಸಲಹಾ ಸಮಿತಿಯು ಅಜಿತ್ ಅಗರ್ಕರ್ ಅವರನ್ನು ಹಿರಿತನದ ಆಧಾರದ (ಒಟ್ಟು ಟೆಸ್ಟ್ ಪಂದ್ಯಗಳ ಸಂಖ್ಯೆ) ಮೇಲೆ ಪುರುಷರ ಆಯ್ಕೆ ಸಮಿತಿಯ ಅಧ್ಯಕ್ಷರ ಪಾತ್ರಕ್ಕೆ ಶಿಫಾರಸು ಮಾಡಿದೆ.

ಭಾರತ ಪುರುಷರ ಕ್ರಿಕೆಟ್ ಆಯ್ಕೆ ಸಮಿತಿ:
ಅಜಿತ್ ಅಗರ್ಕರ್ (ಅಧ್ಯಕ್ಷ), ಶಿವಸುಂದರ್ ದಾಸ್, ಸುಬ್ರೋತೊ ಬ್ಯಾನರ್ಜಿ, ಸಲೀಲ್ ಅಂಕೋಲಾ, ಶ್ರೀಧರನ್ ಶರತ್.

Story first published: Tuesday, July 4, 2023, 22:17 [IST]
Other articles published on Jul 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+