ಕಿಚ್ಚ ಸುದೀಪ್ ನಟನೆ ನನಗಿಷ್ಟ ಎಂದ ಅನಿಲ್ ಕುಂಬ್ಳೆ!
ಬೆಂಗಳೂರು, ಸೆ. 19: ಕ್ರಿಕೆಟ್ ಲೋಕದ ದಿಗ್ಗಜ, ಟೀಂ ಇಂಡಿಯಾದ ಮಾಜಿ ನಾಯಕ, ಸ್ಪಿನ್ ಮಾಂತ್ರಿಕ, ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆ ಅವರು ಕನ್ನಡ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಸೆ.18ರಂದು ದಿವಂಗತ ಡಾ. ವಿಷ್ಣುವರ್ಧನ್ ಅವರ ಜನ್ಮದಿನೋತ್ಸವವನ್ನು ಸ್ಮರಿಸಿ, ಕುಂಬ್ಳೆ ಅವರು ಟ್ವೀಟ್ ಮಾಡಿದ್ದರು. ವಿಷ್ಣು ಅವರು ಅದ್ಭುತ ವ್ಯಕ್ತಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದರು.

ಕ್ರಿಕೆಟ್ ಪ್ರೇಮಿಯಾಗಿದ್ದ ವಿಷ್ಣುವರ್ಧನ್ ಅವರು ತಮ್ಮ ಸ್ನೇಹ ಬಳಗದ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸುತ್ತಿದ್ದರು. ಇದಕ್ಕೆ ಅನಿಲ್ ಕುಂಬ್ಳೆ ಅವರು ಅಗತ್ಯ ಸಲಹೆ, ಸೂಚನೆ, ನೆರವು ನೀಡಿದ್ದರು. ಹೀಗೆ ಇಬ್ಬರ ನಡುವೆ ಸ್ನೇಹ ಬಾಂಧವ್ಯ ಬೆಳೆದಿತ್ತು. ವಿಷ್ಣು ಅವರನ್ನು ಸ್ಮರಿಸಿ ಟ್ವೀಟ್ ಮಾಡಿದ ಅನಿಲ್ ಕುಂಬ್ಳೆ ಅವರಿಗೆ ಸಾರ್ವಜನಿಕರೊಬ್ಬರು ಒಂದು ಪ್ರಶ್ನೆಯನ್ನು ಕೇಳಿದ್ದಾರೆ.
ನೀವು ಕೊನೆ ಬಾರಿಗೆ ನೋಡಿದ ಕನ್ನಡ ಸಿನಿಮಾ ಯಾವುದು? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಕುಂಬ್ಳೆ, ಹೆಬ್ಬುಲಿ ಇತ್ತೀಚೆಗೆ ನೋಡಿದ ಚಿತ್ರ ಹಾಗೂ ನನಗೆ ಸುದೀಪ್ ಅಭಿನಯ ತುಂಬಾ ಇಷ್ಟ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications