ಭಾರತ ಟಿ20 ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ಹೊಸ ಕ್ರಮಾಂಕ ಸೂಚಿಸಿದ ಮಾಜಿ ಕ್ರಿಕೆಟಿಗ

ಐಪಿಎಲ್ 15ನೇ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಗುಜರಾತ್ ಟೈಟನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಚೊಚ್ಚಲ ಆವೃತ್ತಿಯಲ್ಲಿಯೇ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಈ ಸಾಧನೆಗೆ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆಯೂ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಹಾರ್ದಿಕ್ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಹಾರ್ದಿಕ್ ಪಾಂಡ್ಯಗೆ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಹೊಸ ಕ್ರಮಾಂಕವನ್ನು ಸೂಚಿಸಿದ್ದಾರೆ. ಐಪಿಎಲ್ ಪ್ರದರ್ಶನದ ಹಿನ್ನೆಲೆಯಲ್ಲಿ ಈ ಕ್ರಮಾಂಕ ಪಾಂಡ್ಯಗೆ ಚುಟುಕು ಕ್ರಿಕೆಟ್‌ನಲ್ಲಿ ಸೂಕ್ತವಾಗಿ ಹೊಂದಿಕೊಳ್ಳುತ್ತದೆ ಎಂದು ವಿವರಿಸಿದ್ದಾರೆ ಡೇನಿಯಲ್ ವೆಟ್ಟೋರಿ.

ಐಪಿಎಲ್‌ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಮಿಂಚಿದ ಪಾಂಡ್ಯ
ಹಾರ್ದಿಕ್ ಪಾಂಡ್ಯ ಈವರೆಗೆ ಕೆಳ ಕ್ರಮಾಂಕದಲ್ಲಿ ಮಾತ್ರವೇ ಆಡುತ್ತಿದ್ದರು. ಭಾರತೀಯ ತಂಡದಲ್ಲಿ ಅಥವಾ ಈ ಹಿಂದಿನ ಆವೃತ್ತಿಯವರೆಗೆ ಮುಂಬೈ ಇಂಡಿಯನ್ಸ್ ಪರವಾಗಿ ಆಡುತ್ತಿದ್ದಾಗಲೂ ಕೆಳ ಕ್ರಮಾಂಕದಲ್ಲಿ ಫಿನಿಷರ್ ಆಗಿ ಕಣಕ್ಕಿಳಿಯುತ್ತಿದ್ದರು ಹಾರ್ದಿಕ್ ಪಾಂಡ್ಯ. ಈ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುದ್ದ ಪಾಂಡ್ಯಕೆ ಅದೇ ಸೂಕ್ತವಾದ ಕ್ರಮಾಂಕ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಜಿಟಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ಹಾರ್ದಿಕ್ ತನ್ನ ಮೇಲೆಯೇ ಪ್ರಯೋಗ ಮಾಡಿಕೊಂಡರು, ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಪಾಂಡ್ಯ ತಂಡದ ಪರವಾಗಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಹಾರ್ದಿಕ್ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿದ್ದು ತಂಡಕ್ಕೆ ದೊಡ್ಡ ಮಟ್ಟದಲ್ಲಿ ಯಶಸ್ಸು ನೀಡಿತು.

ಭಾರತ ತಂಡದ ಪರವಾಗಿಯೂ 4ನೇ ಕ್ರಮಾಂಕದಲ್ಲಿ ಆಡಲಿ
ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಹಾರ್ದಿಕ್ ನೀಡಿದ ಪ್ರದರ್ಶನಕ್ಕೆ ಡೇನಿಯಲ್ ವೆಟ್ಟೋರಿ ಮಾರು ಹೋಗಿದ್ದಾರೆ. ಭಾರತದ ಟಿ20 ತಂಡದಲಲ್ಇಯೂ ಹಾರ್ದಿಕ್ ಪಾಂಡ್ಯ ನಾಲ್ಕನೇ ಕ್ರಮಾಂಕದಲ್ಲಿಯೇ ಕಣಕ್ಕಿಳಿಯಲಿ, ಅದು ಅವರಿಗೆ ಅತ್ಯಂತ ಸೂಕ್ತವಾದ ಕ್ರಮಾಂಕ ಎಂದು ವೆಟ್ಟೋರಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಆಯ್ಕೆಯನ್ನು ಭಾರತೀಯ ತಂಡದ ಥಿಂಕ್ ಟ್ಯಾಂಕ್ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

4ನೇ ಕ್ರಮಾಂಕಕ್ಕೆ ಹುಡುಕಾಟ
ಇನ್ನು ಟೀಮ್ ಇಂಡಿಯಾ ಟಿ20 ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಸೂಕ್ತ ಆಟಗಾರನನ್ನು ಕಂಡುಕೊಳ್ಳಲು ತಂಡ ಪರದಾಡುತ್ತಿದೆ. ಇತ್ತೀಚಿನ ಕೆಲ ಸರಣಿಗಳಲ್ಲಿ ಈ ಕ್ರಮಾಂಕ ತಲೆ ಕೆಡಿಸಿದೆ. ರಿಷಭ್ ಪಂತ್, ಶ್ರೇಯಸ್ ಐಯ್ಯರ್, ಸೂರ್ಯಕುಮಾರ್ ಯಾದವ್ ಸೇರಿದಂತೆ ಕೆಲ ಆಟಗಾರರನ್ನು ಈ ಕ್ರಮಾಂಕದಲ್ಲಿ ಆಡಿಸಿ ಪರೀಕ್ಷಿಸಲಾಗಿದೆ. ಯಾರು ಕೂಡ ಈ ಸ್ಥಾನಕ್ಕೆ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗಿಲ್ಲ. ಹೀಗಾಗಿ ಪಾಂಡ್ಯಗೆ ಈ ಅವಕಾಶ ನೀಡಿದರೆ ಉತ್ತಮ ಎಂಬುದು ಅಭಿಮಾನಿಗಳ ಅಭಿಪ್ರಾಯವೂ ಆಗಿದೆ.

ಐಪಿಎಲ್‌ನಲ್ಲಿ ಅಬ್ಬರಿಸಿದ ಹಾರ್ದಿಲ್
ಈ ಬಾರಿಯ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಆಡಿದ 15 ಪಂದ್ಯಗಳಲ್ಲಿ ಪಾಂಡ್ಯ 44.27ರ ಸರಾಸರಿಯಲ್ಲಿ 287 ರನ್‌ಗಳನ್ನು ಗಳಿಸಿದ್ದಾರೆ. 131.27ರಷ್ಟು ಸ್ಟ್ರೈಕ್‌ರೇಟ್‌ನಲ್ಲಿ ಪಾಂಡ್ಯ ಬ್ಯಾಟ್ ಬೀಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಕೂಡ ಟೂರ್ನಿಯಲ್ಲಿ 8 ವಿಕೆಟ್ ಸಂಪಾದಿಸಿರುವ ಪಾಂಡ್ಯ ಫೈನಲ್ ಪಂದ್ಯದಲ್ಲಿ 17 ರನ್‌ಗಳನ್ನು ನೀಡಿ 3 ವಿಕೆಟ್ ಸಂಪಾದಿಸುವ ಮೂಲಕ ಬೌಲಿಂಗ್‌ನಲ್ಲಿಯೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications