ಮನೆಯಲ್ಲಿ ಕೊರೊನಾ ಪ್ರಕರಣ: ಐಸೊಲೇಶನ್‌ನಲ್ಲಿ ಗೌತಮ್ ಗಂಭೀರ್

ನವದೆಹಲಿ: ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಸೆಲ್ಫ್ ಐಸೊಲೇಶನ್‌ನಲ್ಲಿದ್ದಾರೆ. ತನ್ನ ಮನೆಯಲ್ಲಿ ಕೊರೊನಾ ಪ್ರಕರಣ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಗಂಭೀರ್ ಕ್ವಾರಂಟೈನ್‌ನಲ್ಲಿದ್ದಾರೆ. ಕೋವಿಡ್-19 ಪರೀಕ್ಷೆ ಮಾಡಿಕೊಂಡಿರುವ ಗಂಭೀರ್ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರ ಗಂಭೀರ್ ಸದ್ಯ ಪೂರ್ವ ದೆಹಲಿಯಲ್ಲಿ ಲೋಕಸಭಾ ಎಂಪಿಯಾಗಿದ್ದಾರೆ. ಮನೆಯಲ್ಲಿ ಕೊರೊನಾ ಪ್ರಕರಣ ಕಾಣಿಸಿಕೊಂಡಿತ್ತು ಎಂದಷ್ಟೇ ಹೇಳಿರುವ ಗಂಭೀರ್, ಸೋಂಕು ತಗುಲಿರುವುದು ಯಾರಿಗೆಂದು ಹೇಳಿಕೊಂಡಿಲ್ಲ.
'ಮನೆಯಲ್ಲಿ ಕೊರೊನಾ ಕೇಸ್ ಕಾಣಿಸಿರುವುದರಿಂದ ನಾನು ಐಸೊಲೇಶನ್‌ನಲ್ಲಿದ್ದೇನೆ. ಕೊರೊನಾ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ. ಎಲ್ಲರೂ ಕೊರೊನಾ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಿ. ಮಾರ್ಗಸೂಚಿಗಳನ್ನು ಹಗುರವಾಗಿ ಕಾಣಬೇಡಿ,' ಎಂದು ಗಂಭೀರ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ದೆಹಲಿಯಲ್ಲಿ ಗುರುವಾರ (ನವೆಂಬರ್ 5) ಸುಮಾರು 6,700 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿತ್ತು. ದೆಹಲಿಯಲ್ಲಿ ಈಗ ಸೋಂಕಿತರ ಒಟ್ಟು ಸಂಖ್ಯೆ 4.16 ಲಕ್ಷವಿದ್ದರೆ, ಸಾವುನೋವಿಗೀಡಾದವರು 66 ಮಂದಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications