ಕೊಹ್ಲಿ, ಗೈಲ್, ರೈನಾ ಅಲ್ಲ.. ಶ್ರೀಕಾಂತ್ ಪ್ರಕಾರ ಐಪಿಎಲ್‌ನ ಮೌಲ್ಯಯುತ ಆಟಗಾರ ಯಾರು ಗೊತ್ತಾ!

ಕಳೆದ 13 ಆವೃತ್ತಿಗಳಲ್ಲಿ ಐಪಿಎಲ್ ಸಾಕಷ್ಟು ದಿಗ್ಗಜ ಆಟಗಾರರನ್ನು ಕಂಡಿದೆ. ಅದೆಷ್ಟೋ ಅದ್ಭುತ ಇನ್ನಿಂಗ್ಸ್‌ಗಳು ಅಭಿಮಾನಿಗಳನ್ನು ರಂಜಿಸಿದೆ. ಆದರೆ ಕಳೆದ 13 ಆವೃತ್ತಿಗಳಲ್ಲಿ ಅತ್ಯಂತ ಮೌಲ್ಯಯುತ ಆಟಗಾರ ಯಾರು ಎಂಬುದನ್ನು ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಹೇಳಿದ್ದಾರೆ.
ಹೌದು, ಕ್ರಿಸ್ ಶ್ರಿಕಾಂತ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ನರ್ ರಶೀದ್ ಖಾನ್ ಐಪಿಎಲ್ ಇತಿಹಾಸದ ಅತ್ಯಂತ ಮೌಲ್ಯಯುತ ಆಟಗಾರ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ರಶೀದ್ ಖಾನ್ ನೀಡಿದ ಅದ್ಭುತ ಪ್ರದರ್ಶನದ ಬಳಿಕ ಶ್ರೀಕಾಂತ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ರಶೀದ್ ಪ್ರದರ್ಶನಕ್ಕೆ ಶ್ರೀಕಾಂತ್ ಮೆಚ್ಚುಗೆ
ಚುಟುಕು ಕ್ರಿಕೆಟ್‌ನಲ್ಲಿ ಅದ್ಭುತ ದಾಳಿಯ ಮೂಲಕ ರಶೀದ್ ಖಾನ್ ಕಳೆದ ಹಲವು ವರ್ಷಗಳಿಂದ ಮಿಂಚುತ್ತಿದ್ದಾರೆ. ಐಪಿಎಲ್‌ನಲ್ಲಿಯೂ ಈ ಸ್ಥಿರ ಪ್ರದರ್ಶನವನ್ನು ನೀಡಿಕೊಂಡು ಬಂದಿದ್ದಾರೆ. ವಿಕೆಟ್ ಪಡೆಯುವ ಜೊತೆಗೆ ರನ್ ನಿಯಂತ್ರಣ ಮಾಡುವಲ್ಲಿ ರಶೀದ್ ಖಾನ್ ತಂಡಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿಯೂ ರಶೀದ್ ಖಾನ್ ವಿಕೆಟ್ ಪಡೆಯುವಲ್ಲಿ ವಿಫಲವಾಗಿದ್ದರೂ ಕೂಡ ಅದ್ಭುತವಾದ ಬೌಲಿಂಗ್ ದಾಳಿ ಮಾಡಿದ ರೀತಿಗೆ ಶ್ರೀಕಾಂತ್ ಪ್ರಶಂಸೆಯ ಸುರಿಮಳೆಗೈದಿದ್ದಾರೆ.

ಟ್ವಿಟ್ ಮೂಲಕ ಶ್ಲಾಘನೆ
"ರಶೀದ್ ಖಾನ್ ನೀವು ಐಪಿಎಲ್ ಇತಿಹಾಸದ ಅತ್ಯಂತ ಮೌಲ್ಯಯುತವಾದ ಬೌಲರ್. ಮುಂಬೈ ವಿರುದ್ಧ ಮಾಡಿದ ಅಮೋಘ ಬೌಲಿಂಗ್ ದಾಳಿಯಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ಮುಂಬೈ ತಂಡವನ್ನು 150ರ ಸನಿಹದಲ್ಲಿ ಕಟ್ಟಿಹಾಕಲು ಸಾಧ್ಯವಾಗಿದೆ. ಈ ಮೂಲಕ ರೋಮಾಂಚನಕಾರಿ ಪಂದ್ಯಗಳಿಗೆ ಚೆಪಾಕ್ ಅಂಗಳ ಕೇಂದ್ರ ಬಿಂದುವಾಗಿದೆ" ಎಂದು ಶ್ರೀಕಾಂತ್ ಹೇಳಿದ್ದಾರೆ.

ಸತತ 3ನೇ ಸೋಲು
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತಾದರೂ ಬ್ಯಾಟಿಂಗ್‌ನಲ್ಲಿ ವೈಫಲ್ಯತೆಯನ್ನು ಕಂಡಿತು. ಆರಂಭಿಕ ಜೋಡಿ ಜಾನಿ ಬೈರ್‌ಸ್ಟೋವ್ ಹಾಗೂ ಡೇವಿಡ್ ವಾರ್ನರ್ ಅದ್ಭುತ ಪ್ರದರ್ಶನ ನೀಡಿದರಾದರೂ ಈ ಜೋಡಿ ಬೇರ್ಪಟ್ಟ ನಂತರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಯಾವುದೇ ಆಟಗಾರನಿಂದಲೂ ಬಾರದ ಕಾರಣ ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಸತತ ಮೂರನೇ ಸೋಲು ಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications