For Quick Alerts
ALLOW NOTIFICATIONS  
For Daily Alerts
 

ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕಾರು ಅಫಘಾತ

Former Cricketer Mohammad Azharuddins car met with an accident in Soorwal, Rajasthan

ಜೈಪುರ: ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕಾರು ಅಪಘಾತಕ್ಕೀಡಾಗಿದೆ. ರಾಜಸ್ಥಾನ್‌ನ ಸೂರ್‌ವಾಲ್‌ನಲ್ಲಿ ಅಜರ್ ಕಾರು ಅಪಘಾತಕ್ಕೆ ಒಳಗಾಗಿದೆ. ಕ್ರಿಕೆಟ್ ಬಳಿಕ ರಾಜಕೀಯಕ್ಕಿಳಿದಿದ್ದ ಅಝರುದ್ದೀನ್ ಕಾಂಗ್ರೆಸ್ ಎಂಪಿ ಆಗಿದ್ದರು.

ಬುಧವಾರ (ಡಿಸೆಂಬರ್ 30) ಬೆಳಗ್ಗೆ ಅಜರುದ್ದೀನ್ ಕಾರು ಅಪಘಾತಕ್ಕೊಳಗಾಗಿದ್ದಾಗಿ ತಿಳಿದುಬಂದಿದೆ. ಅಪಘಾತದಿಂದ ಕಾರು ನುಜ್ಜುಗುಜ್ಜಾಗಿದೆ. ಆದರೆ ಅಜರ್ ಗೆ ಯಾವುದೇ ಅಪಾಯವಾಗಿಲ್ಲ ಎಂದು ಅವರ ಪಿಎ ತಿಳಿಸಿದ್ದಾರೆ. ಅಝರ್ ಜೊತೆಗೆ ಬೇರೆ ಯಾರಿದ್ದರು ಅನ್ನೋದು ಇನ್ನೂ ಗೊತ್ತಾಗಿಲ್ಲ.

ರಾಜಸ್ಥಾನ್‌ನ ರಂತಂಬೋರ್‌ನಿಂದ ಅಜರ್ ಅವರು ತನ್ನ ಕುಟುಂಬಸ್ಥರ ಜೊತೆ ವಾಪಸ್ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಪಘಾತದ ಬಳಿಕ ಅಜರ್ ಅವರನ್ನು ಬೇರೊಂದು ಕಾರಿನಲ್ಲಿ ಹೋಟೆಲ್‌ಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

57ರ ಹರೆಯದ ಅಜರ್, ಭಾರತದ ಪರ 99 ಟೆಸ್ಟ್, 334 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್‌ನಲ್ಲಿ 6215 ರನ್, ಏಕದಿನದಲ್ಲಿ 9378 ರನ್ ಬಾರಿಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಕಾರು ಲಾಲ್‌ಸೋಟ್ ಕೋಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೊಳಗಾಗಿದ್ದಾಗಿ ತಿಳಿದುಬಂದಿದೆ.

Story first published: Thursday, December 31, 2020, 10:26 [IST]
Other articles published on Dec 31, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+