ಮೇ 24 ಶುಕ್ರವಾರ, 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತೆರೆ ಕಾಣಲು ಸಜ್ಜಾಗಿದೆ. ಈ ಸಮಯದಲ್ಲಿ ಹಲವು ದಿಗ್ಗಜ ಕ್ರಿಕೆಟಿಗರು ನಿವೃತ್ತಿ ಹೊಂದುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ.
ಈಗಾಗಲೇ ರಾಯಲ್ ಚಾಲೆಂಲಜರ್ಸ್ ಬೆಂಗಳೂರು (ಆರ್‌ಸಿಬಿ) ವಿಕೆಟ್‌ಕೀಪರ್ ಮತ್ತು ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಐಪಿಎಲ್‌ನಿಂದ ನಿವೃತ್ತಿ ತೆಗೆದುಕೊಂಡಿರುವ ಬಗ್ಗೆ ಘೋಷಣೆ ಮಾಡಿದ್ದಾರೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮಾಜಿ ನಾಯಕ ಎಂಎಸ್ ಧೋನಿ ಕೂಡ ಐಪಿಎಲ್ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಸಾಧ್ಯತೆಗಳಿವೆ.

ಇದರೊಂದಿಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ಕ್ರಿಕೆಟ್ ಬದುಕಿಗೆ ವಿದಾಯ ಹೇಳುತ್ತಾರೆ ಎಂಬ ವಿಚಾರಗಳು ಚರ್ಚೆಯಲ್ಲಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರೋಹಿತ್ ಶರ್ಮಾ ಅವರು ಏನಾದರೂ ಸಾಧಿಸಿಯೇ ನಿವೃತ್ತಿ ಹೊಂದುತ್ತೇನೆ ಎಂಬ ಮಾತುಗಳನ್ನಾಡಿದ್ದಾರೆ.
ಇತ್ತೀಚೆಗೆ ವಿರಾಟ್ ಕೊಹ್ಲಿ ಅವರು ಸಹಾ ನಾನು ನಿವೃತ್ತಿ ಹೊಂದಿದರೆ ಕೆಲಕಾಲ ಎಲ್ಲಿಯೂ ಕಾಣಿಸಿಕೊಳ್ಳಲುವುದಿಲ್ಲ ಎಂದು ಬಹಿರಂಗವಾಗಿಯೇ ನುಡಿದ್ದಾರೆ. ಈ ಮಾತುಗಳು ಅಭಿಮಾನಿಗಳ ಎದೆಯಲ್ಲಿ ನಾಟಿದ್ದು, ಕೊಹ್ಲಿ ನಿವೃತ್ತಿ ತೆಗೆದುಕೊಳ್ಳದಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಅದಾಗ್ಯೂ, ವಿರಾಟ್ ಕೊಹ್ಲಿ ಅವರ ನಿವೃತ್ತಿ ವಿಚಾರ ಇದೀಗಾ ಹೊಸ ತಿರುವು ಪಡೆದುಕೊಂಡಿದೆ. ಏಕೆಂದರೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅವರು ಕೊಟ್ಟಿರುವ ಕಾರಣ ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಆತಂಕ ತರಿಸಿದೆ.

ಭಾರತದ ಆಟಗಾರರು ಸಾಮಾನ್ಯವಾಗಿ 39-40 ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಾರೆ. ಕೊಹ್ಲಿಗೆ 35 ವರ್ಷ, ಆದರೆ ಕೊಹ್ಲಿ ಫಿಟ್‌ನೆಸ್ ಗಮನಿಸಿದರೆ, 40ನೇ ವಯಸ್ಸಿನಲ್ಲಿ ನಿವೃತ್ತರಾದ ಮೊದಲ ಭಾರತೀಯ ಕ್ರಿಕೆಟಿಗರಾಗಬಹುದು.
ಆದರೆ ಇದಕ್ಕಿಂತ ಮುಂಚೆಯೇ ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆಯುವ ನಿರೀಕ್ಷೆಗಳನ್ನು ತಳ್ಳಿಹಾಕುವಂತ್ತಿಲ್ಲ. ಎರಡು ಚಿಕ್ಕ ಮಕ್ಕಳ ತಂದೆಯಾಗಿರುವುದರಿಂದ ಕೊಹ್ಲಿಯ ಬದಲಾಗುತ್ತಿರುವ ಜೀವನವನ್ನು ವಾನ್ ಅರ್ಥಮಾಡಿಕೊಂಡು ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.
ಕೊಹ್ಲಿ ಅವರು ತಮ್ಮ ಮಗ ಅಕಾಯ್‌ನ ಜನನದ ಕಾರಣದಿಂದ ಐಪಿಎಲ್‌ಗೂ ಮುನ್ನ ತವರಿನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್‌ಗಳ ಸರಣಿಯನ್ನು ಮಿಸ್ ಮಾಡಿಕೊಂಡಿದ್ದರು.
ಇದು ಸ್ವಲ್ಪ ಮಟ್ಟಿಗೆ ಕ್ರಿಕೆಟ್‌ಗಿಂತ ಕುಟುಂಬಕ್ಕೆ ಆದ್ಯತೆ ನೀಡಲು ಕೊಹ್ಲಿ ಪ್ರಾರಂಭಿಸಿದ್ದಾರೆ ಎಂಬುದು ತಿಳಿಸುತ್ತದೆ. ಆದ್ದರಿಂದ ಕೊಹ್ಲಿ ಕನಿಷ್ಠ ಐದು ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಮುಂದುವರಿಯಲು ನಿರ್ಧರಿಸಿರುವಂತೆ ತೋರುತ್ತಿದೆ ಎಂದು ಮೈಕಲ್ ವಾನ್ ಹೇಳಿದ್ದಾರೆ.
ಐಪಿಎಲ್ 2024ರಲ್ಲಿ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆಡಿದ 15 ಪಂದ್ಯಗಳಲ್ಲಿ 741 ರನ್‌ಗಳನ್ನು ಹೊಡೆದು ಆರೆಂಜ್ ಹೊಂದಿದ್ದಾರೆ. ಒಂದು ಶತಕ ಹಾಗು 5 ಅರ್ಧಶತಕಗಳು ಕೊಹ್ಲಿ ಬ್ಯಾಟ್‌ನಿಂದ ಬಂದಿವೆ. 113 ಅತ್ಯುತ್ತಮ ಸ್ಕೋರ್ ಆಗಿದೆ.
ಅಲ್ಲದೆ ಐಪಿಎಲ್ ನಲ್ಲಿ 8000 ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಸದ್ಯ ರಾಜಸ್ಥಾನ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಸೋತು ಟೂರ್ನಿಯಿಂದ ಹೊರಗುಳಿದಿದೆ.