Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಶೀಘ್ರದಲ್ಲೇ ವಿರಾಟ್‌ ಕೊಹ್ಲಿ ಅದ್ಭುತ ಇನ್ನಿಂಗ್ಸ್‌ ಆಡಲಿದ್ದಾರೆ; ಮಾಜಿ ಕ್ರಿಕೆಟಿಗ ಭವಿಷ್ಯ!

ಜೂನ್ 15 ಶನಿವಾರ, ಟೀಮ್‌ ಇಂಡಿಯಾ 2024ರ ಟಿ20 ವಿಶ್ವಕಪ್‌ನ ಸೂಪರ್-8 ಹಂತಕ್ಕೆ ತಲುಪಿದೆ. ಆದರೆ ವಿರಾಟ್ ಕೊಹ್ಲಿ ಈ ಟೂರ್ನಮೆಂಟ್‌ನಲ್ಲಿ ಇಲ್ಲಿಯವರೆಗೆ ತಮ್ಮ ಶೈಲಿಯಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಿಲ್ಲ.

ಆಡಿರುವ ಮೂರು ಪಂದ್ಯಗಲ್ಲಿ ಕೊಹ್ಲಿ ಎರಡಂಕಿ ದಾಟಲು ಪರದಾಡಿದ್ದಾರೆ. ಅಲ್ಲದೆ ನಾಯಕ ರೋಹಿತ್‌ ಶರ್ಮಾ ಜೊತೆಗೆ ಆರಂಭಿಕನಾಗಿ ಕಣಕ್ಕೀಳಿಯುತ್ತಿದ್ದಾರೆ. ಆರಂಭಿಕನಾಗಿಯೂ ಕೂಡ ಕೊಹ್ಲಿ ಯಶ ಕಂಡಿಲ್ಲ.

Former cricketer predicts Virat Kohli to play brilliant innings in T20 World Cup 2024

ಗ್ರೂಪ್ ಹಂತದ ಮೊದಲ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕ್ರಮವಾಗಿ 1, 4 ಮತ್ತು 0 ರನ್ ಗಳಿಸಿದ್ದು, ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ವಿರಾಟ್‌ ಕೊಹ್ಲಿ ಇಲ್ಲಿಯವರೆಗೂ ಅಬ್ಬರಿಸಿಲ್ಲ.

ಕಳೆದ ಟಿ20 ವಿಶ್ವಕಪ್‌ ಆವೃತ್ತಿಯಲ್ಲಿ ಕೊಹ್ಲಿ 296 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ನ್ಯೂಯಾರ್ಕ್‌ನ ಕ್ಲಿಷ್ಟಕರ ಪಿಚ್‌ನಲ್ಲಿ ವಿರಾಟ್ ರನ್‌ ಗಳಿಸಲು ಸಾಕಷ್ಟು ಹೋರಾಟ ನಡೆಸುತ್ತಿರುವುದು ಕಂಡುಬಂದಿದೆ.

ಆದರೆ ಈಗ ಸ್ಥಳ ಬದಲಾಗಿದೆ. ಭಾರತವು ಶನಿವಾರ ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿ ತನ್ನ ಅಂತಿಮ ಗುಂಪು ಹಂತದ ಪಂದ್ಯವನ್ನು ಕೆನಡಾ ವಿರುದ್ಧ ಆಡಲಿದೆ. ಇದರ ಬೆನ್ನಲ್ಲೆ ವಿರಾಟ್ ಕೊಹ್ಲಿ ಶೀಘ್ರದಲ್ಲೇ ಉತ್ತಮ ಇನ್ನಿಂಗ್ಸ್ ಆಡಲಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಭವಿಷ್ಯ ನುಡಿದ್ದಾರೆ.

Former cricketer predicts Virat Kohli to play brilliant innings in T20 World Cup 2024

ಮಾಧ್ಯಮಯೊಂದರಲ್ಲಿ ಮಾತನಾಡಿರುವ ಸಂಜಯ್‌ ಬಂಗಾರ ಅವರು, 'ವಿರಾಟ್ ಕೊಹ್ಲಿ ನ್ಯೂಯಾರ್ಕ್ ಲೆಗ್‌ನಲ್ಲಿ ರನ್ ಗಳಿಸಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಬೇರೆ ಯಾವುದೇ ಬ್ಯಾಟರ್‌ ಈ ಟ್ರ್ಯಾಕ್‌ನಲ್ಲಿ ಹೆಚ್ಚು ರನ್ ಗಳಿಸಲು ಸಾಧ್ಯವಾಗಿಲ್ಲ.

ಇದು ಕಷ್ಟಕರವಾದ ಪಿಚ್ ಆಗಿದ್ದು, ಈಗ ಸ್ಥಳವನ್ನು ಬದಲಾವಣೆ ಆಗಲಿದೆ. ಬಳಿಕ ಕೊಹ್ಲಿ ಶೀಘ್ರದಲ್ಲೇ ದೊಡ್ಡ ಸ್ಕೋರ್ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ವಿಶ್ವಕಪ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರ ಕೊಹ್ಲಿ.

ಟೂರ್ನಿಯು ಮುಂದಿನ ಹಂತಕ್ಕೆ ಬಂದರೆ, ಭಾರತ ತಂಡದ ಆ ಸ್ಪರ್ಧಾತ್ಮಕ ಮನೋಭಾವವು ಮತ್ತೆ ಹೊರಹೊಮ್ಮಲು ಪ್ರಾರಂಭಿಸುತ್ತದೆ. ಆಗ ಕೊಹ್ಲಿ ಅವರು ತಮ್ಮ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಲು ಪ್ರಾರಂಭಿಸುತ್ತಾರೆ ಎಂದು ಹೇಳಿದರು.

Former cricketer predicts Virat Kohli to play brilliant innings in T20 World Cup 2024

ಟಿ20 ವಿಶ್ವಕಪ್‌ನ ಸೂಪರ್‌-8 ರಲ್ಲಿ ಭಾರತದ ಪಂದ್ಯಗಳು

ಭಾರತ ತನ್ನ ಮೊದಲ ಪಂದ್ಯವನ್ನು ಸೂಪರ್-8 ರಲ್ಲಿ ಜೂನ್ 20 ರಂದು ಬಾರ್ಬಡೋಸ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡಲಿದೆ. ಟೀಮ್‌ ಇಂಡಿಯಾ ತನ್ನ ಎರಡನೇ ಪಂದ್ಯವನ್ನು ಜೂನ್ 22 ರಂದು ಆಂಟಿಗುವಾದಲ್ಲಿ ಆಡಲಿದ್ದು, ಯಾವ ತಂಡ ಎಂಬುದು ಇನ್ನು ತಿಳಿದಿಲ್ಲ.

ಆದರೆ ಡಿ ಗುಂಪುನಲ್ಲಿ ಎರಡನೇ ಸ್ಥಾನದಲ್ಲಿರುವ ತಂಡವನ್ನು ಭಾರತ ಎದುರಿಸಲಿದೆ. ಈ ತಂಡವನ್ನು ಬಾಂಗ್ಲಾದೇಶ ಎನ್ನಲಾಗುತ್ತಿದೆ.
ಇದಾದ ನಂತರ ಭಾರತವು ತನ್ನ ಸೂಪರ್-8 ಹಂತದ ಮೂರನೇ ಪಂದ್ಯವನ್ನು ಜೂನ್ 24 ರಂದು ಸೇಂಟ್ ಲೂಸಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.

Story first published: Saturday, June 15, 2024, 7:28 [IST]
Other articles published on Jun 15, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+