For Quick Alerts
ALLOW NOTIFICATIONS  
For Daily Alerts
 

ರೋಹಿತ್, ಕೊಹ್ಲಿ ಅಲ್ಲ: ಭಾರತದ ಟಿ20 ವಿಶ್ವಕಪ್ ಭರವಸೆಗೆ 2 ಆಟಗಾರರನ್ನು ಆಯ್ಕೆ ಮಾಡಿದ ರವಿಶಾಸ್ತ್ರಿ

ಇದೇ ಜೂನ್‌ 2ರಿಂದ ಯುಎಸ್ಎ ಮತ್ತು ಕೆರಿಬಿಯನ್‌ನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಭಾರತ ತಂಡದ ವಿಶ್ವಕಪ್ ಭರವಸೆಗೆ ಪ್ರಮುಖ ಆಟಗಾರರಾಗಿ ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಅವರನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಆಯ್ಕೆ ಮಾಡಿದ್ದಾರೆ.

ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಟಿ20 ಕ್ರಿಕೆಟ್ ಪಂದ್ಯಾವಳಿಗಾಗಿ ಭಾರತದ 15 ಸದಸ್ಯರ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಅವರನ್ನು ಆಯ್ಕೆ ಮಾಡಲಾಗಿದೆ.

Former Cricketer Ravi Shastri Picks 2 Players for India s T20 World Cup 2024 hopes

ಇಂಗ್ಲೆಂಡ್ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ದಾಖಲೆಯ ರನ್‌ಗಳೊಂದಿಗೆ ಅಗ್ರ ಫಾರ್ಮ್‌ನಲ್ಲಿದ್ದರೆ, ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶಿವಂ ದುಬೆ ಆಡಿದ 11 ಪಂದ್ಯಗಳಲ್ಲಿ 26 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ ಮತ್ತು ಬ್ಯಾಟ್‌ನೊಂದಿಗೆ ಉತ್ತಮ ಫಾರ್ಮ್‌ನಲ್ಲಿದ್ದಾರೆ.

"ನೀವು ಗಮನಿಸಬೇಕಾದ ಇಬ್ಬರು ಟ್ಯಾಲೆಂಟ್‌ಗಳು ಮತ್ತು ಇಬ್ಬರೂ ಎಡಗೈ ಆಟಗಾರರು. ಇಬ್ಬರೂ ತಮ್ಮ ಮೊದಲ ಟಿ20 ವಿಶ್ವಕಪ್ ಆಡುತ್ತಿದ್ದಾರೆ. ಅದರಲ್ಲಿ ಒಬ್ಬರು ಯಶಸ್ವಿ ಜೈಸ್ವಾಲ್. ಆತನ ಬಗ್ಗೆ ನಮಗೆ ಸಾಕಷ್ಟು ತಿಳಿದಿದೆ. ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದರು, ಅಗ್ರ ಕ್ರಮಾಂಕದಲ್ಲಿ ಸ್ಫೋಟಕ ಎಡಗೈ ಆಟಗಾರ. ಆತ ನಿರ್ಭೀತ ಮತ್ತು ದೊಡ್ಡ ಶಾಟ್‌ಗಳನ್ನು ಆಡುತ್ತಾನೆ," ಎಂದು ಭಾರತದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಐಸಿಸಿಗೆ ತಿಳಿಸಿದರು.

ರವಿಶಾಸ್ತ್ರಿ ಅವರು ಟಿ20 ವಿಶ್ವಕಪ್ ಭಾರತೀಯ ತಂಡದಲ್ಲಿ ಇನ್ನೊಬ್ಬ ಪ್ರಮುಖ ಆಟಗಾರನಾಗಿ ಆಲ್‌ರೌಂಡರ್ ಶಿವಂ ದುಬೆ ಅವರನ್ನು ಆಯ್ಕೆ ಮಾಡಿದರು.

"ದಯವಿಟ್ಟು, ಮಧ್ಯಮ ಕ್ರಮಾಂಕದಲ್ಲಿ ಯಾರಾದರೂ ಶಿವಂ ದುಬೆ ಅವನನ್ನು ಗಮನಿಸಿ. ಏಕೆಂದರೆ ಅವನು ಸ್ಫೋಟಕ, ವಿನಾಶಕಾರಿ ಮತ್ತು ಅವನು ಪಂದ್ಯ ವಿಜೇತ ಆಟಗಾರ. ಆತ ಮೋಜಿಗಾಗಿ ಸಿಕ್ಸರ್ ಬಾರಿಸುತ್ತಾರೆ ಮತ್ತು ಸ್ಪಿನ್ ಬೌಲಿಂಗ್‌ ವಿರುದ್ಧ ವೀರಾವೇಶದಿಂದ ಬ್ಯಾಟ್ ಬೀಸುತ್ತಾರೆ," ಎಂದು ಭಾರತದ ಮಾಜಿ ಕ್ರಿಕೆಟಿಗ ಹೇಳಿದರು.

"ಶಿವಂ ದುಬೆ ಕೆರಿಬಿಯನ್‌ನಲ್ಲಿ ದ್ವೀಪದಿಂದ ದ್ವೀಪಕ್ಕೆ ಕೆಲವು ಚೆಂಡುಗಳನ್ನು ಬಾರಿಸುತ್ತಾನೆ, ಅವನು ಅಂತಹ ಆಟಗಾರ. ಅವನು ಸಿಕ್ಸರ್‌ಗಳನ್ನು ದೊಡ್ಡದಾಗಿ ಹೊಡೆಯುತ್ತಾನೆ. ನಾನು ಹೇಳಿದಂತೆ ಸ್ಪಿನ್ ಬೌಲಿಂಗ್ ವಿರುದ್ಧ ಸಿಡಿದೇಳುತ್ತಾನೆ. ಅಲ್ಲದೆ, ವೇಗದ ಬೌಲರ್‌ಗಳ ವಿರುದ್ಧವೂ ಸ್ಫೋಟಕ ಬ್ಯಾಟಿಂಗ್ ಮಾಡುತ್ತಾನೆ".

Former Cricketer Ravi Shastri Picks 2 Players for India s T20 World Cup 2024 hopes

"ಶಿವಂ ದುಬೆ ಆಡುವ ರೀತಿಯನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಅವರು ಆ ಐದನೇ, ಆರನೇ ಕ್ರಮಾಂಕದಲ್ಲಿ ಪ್ರಮುಖವಾಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ತಂಡವು ಸಂಕಷ್ಟದಲ್ಲಿದ್ದಾಗ ಯಾರಾದರೂ 20-25 ಎಸೆತಗಳಲ್ಲಿ ಪಂದ್ಯವನ್ನು ಬದಲಾಯಿಸಬೇಕೆಂದು ನೀವು ಬಯಸುತ್ತಿದ್ದರೆ, ಶಿವಂ ದುಬೆ ಇರಬೇಕಾದ ಆಟಗಾರ," ಎಂದು ರವಿಶಾಸ್ತ್ರಿ ತಿಳಿಸಿದರು.

ಐಪಿಎಲ್ 2024ರಲ್ಲಿ ಶಿವಂ ದುಬೆ ಆಡಿದ 11 ಪಂದ್ಯಗಳಲ್ಲಿ 40ಕ್ಕಿಂತ ಹೆಚ್ಚು ಸರಾಸರಿ ಮತ್ತು 170.73ರ ಸ್ಟ್ರೈಕ್ ರೇಟ್‌ನಲ್ಲಿ 350 ರನ್‌ ಗಳಿಸಿದ್ದಾರೆ.

2024ರ ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.

ಮೀಸಲು ಆಟಗಾರರು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಅವೇಶ್ ಖಾನ್

Story first published: Wednesday, May 8, 2024, 19:24 [IST]
Other articles published on May 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+