T20 World Cup 2024: ಟಿ20 ವಿಶ್ವಕಪ್‌ಗೆ 15 ಸದಸ್ಯರ ಭಾರತ ತಂಡ ಆಯ್ಕೆ ಮಾಡಿದ ಎಸ್ ಶ್ರೀಶಾಂತ್
ಸದ್ಯ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಗಿದ ಐದು ದಿನಗಳ ನಂತರ, ಅಂದರೆ 1ರಿಂದ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದ್ದು, ಇದಕ್ಕಾಗಿ ಆಟಗಾರರ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದೆ.
ಐಸಿಸಿ ಟಿ20 ವಿಶ್ವಕಪ್‌ಗೆ ತಂಡವನ್ನು ಸಲ್ಲಿಸುವ ಮೇ 1ರ ಗಡುವು ಸಮೀಪಿಸುತ್ತಿರುವಂತೆಯೇ, ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ಗೆ ಕರೆದುಕೊಂಡು ಹೋಗಬೇಕಾದ ಭಾರತ ತಂಡದ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ.

ಇದೇ ವೇಳೆ ಭಾರತದ ಮಾಜಿ ವೇಗದ ಬೌಲರ್ ಎಸ್. ಶ್ರೀಶಾಂತ್ ಅವರು ಭಾರತ ತಂಡದ ಆಯ್ಕೆಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಮತ್ತು 2024ರ ಟಿ20 ವಿಶ್ವಕಪ್‌ಗೆ 15 ಸದಸ್ಯರ ಭಾರತ ತಂಡವನ್ನು ಶನಿವಾರ ಹೆಸರಿಸಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಎಸ್ ಶ್ರೀಶಾಂತ್ ಅವರು ಮುಂಬರುವ ಟಿ20 ವಿಶ್ವಕಪ್‌ಗಾಗಿ ಅನೇಕ ಆಶ್ಚರ್ಯಗಳಿಲ್ಲದೆ ಒಂದು ಸೆಟ್ ತಂಡದೊಂದಿಗೆ ಹೋಗಿದ್ದಾರೆ. ಆದರೆ, ಶ್ರೀಶಾಂತ್ ಅವರ 15 ಸದಸ್ಯರ ತಂಡದಲ್ಲಿ ಆರಂಭಿಕ ಶುಭ್ಮನ್ ಗಿಲ್, ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.

ಅಗ್ರ ಕ್ರಮಾಂಕದ ಬ್ಯಾಟರ್‌ಗಳು
ಭಾರತದ ಅಗ್ರಕ್ರಮಾಂಕದಲ್ಲಿ ಹೆಚ್ಚಿನ ಅಚ್ಚರಿಗಳಿಲ್ಲ. ಎಸ್ ಶ್ರೀಶಾಂತ್ ಅವರು ಯುಎಸ್ಎಗೆ ವಿಮಾನ ಏರಲು ಹೆಚ್ಚು ಕಡಿಮೆ ಸಾಧ್ಯತೆಗಳಿರುವ ಆಟಗಾರರನ್ನೇ ಆಯ್ಕೆ ಮಾಡಿದರು.
ನಾಯಕ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ, ಶುಭ್ಮನ್ ಗಿಲ್ ಅವರನ್ನು ಎಸ್ ಶ್ರೀಶಾಂತ್ ತಮ್ಮ ಆಯ್ಕೆಯ ತಂಡದಿಂದ ಹೊರಗಿಟ್ಟಿದ್ದಾರೆ.
ಆಲ್‌ರೌಂಡ್ ಆಟಗಾರರು
ಆಲ್‌ರೌಂಡ್ ಸ್ಥಾನದಲ್ಲಿ ಶಿವಂ ದುಬೆ ಅವರು ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಹೆಚ್ಚು ಸುರಕ್ಷಿತ ಆಯ್ಕೆಗಳೊಂದಿಗೆ ಟಿ20 ವಿಶ್ವಕಪ್‌ಗಾಗಿ ಎಸ್ ಶ್ರೀಶಾಂತ್ ಆಯ್ಕೆಯ ತಂಡದಲ್ಲಿ ತಮ್ಮನ್ನು ಕಾಣಿಸಿಕೊಂಡಿದ್ದಾರೆ.
ವಿಕೆಟ್ ಕೀಪರ್-ಬ್ಯಾಟರ್
ಮಾಜಿ ವೇಗಿ ಎಸ್ ಶ್ರೀಶಾಂತ್ ಅವರು ರಿಷಭ್ ಪಂತ್ ಅವರನ್ನು ಭಾರತ ತಂಡದ ಉಪನಾಯಕನನ್ನಾಗಿ ನೇಮಿಸಿದ್ದು, ಆ ಸ್ಥಾನದಿಂದ ಹಾರ್ದಿಕ್ ಪಾಂಡ್ಯ ಅವರನ್ನು ಕಳೆಗಿಳಿಸಿದ್ದಾರೆ. ರಿಷಭ್ ಪಂತ್ ಜೊತೆಗೆ ಬ್ಯಾಕಪ್ ಆಯ್ಕೆಯಾಗಿ ಸಂಜು ಸ್ಯಾಮ್ಸನ್ ಎಂದು ಹೆಸರಿಸಲಾಗಿದ್ದು, ಅನುಭವಿ ಕೆಎಲ್ ರಾಹುಲ್ ಅವರಿಗೆ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.
ವೇಗದ ಬೌಲರ್‌ಗಳು
ಕೇರಳ ಎಕ್ಸ್‌ಪ್ರೆಸ್ ಎಸ್ ಶ್ರೀಶಾಂತ್ ಅವರು ತಮ್ಮ 15 ಸದಸ್ಯರ ತಂಡದಲ್ಲಿ 4 ವೇಗಿಗಳನ್ನು ಆಯ್ಕೆ ಮಾಡಿದ್ದಾರೆ. ಮೊದಲ ಆಯ್ಕೆ ಜಸ್ಪ್ರೀತ್ ಬುಮ್ರಾ ಜೊತೆಗೆ ಅರ್ಶ್‌ದೀಪ್ ಸಿಂಗ್, ಮಯಾಂಕ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿದರು.
ಸ್ಪಿನ್ ಬೌಲರ್‌ಗಳು
ಮುಂಬರುವ 2024ರ ಟಿ20 ವಿಶ್ವಕಪ್‌ಗಾಗಿ ಎಸ್ ಶ್ರೀಶಾಂತ್ ತಮ್ಮ ಆಯ್ಕೆಯ ಭಾರತ ತಂಡದಲ್ಲಿ ಇಬ್ಬರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿದ್ದು, ಯುಜ್ವೇಂದ್ರ ಚಹಾಲ್ ಮತ್ತು ಕುಲದೀಪ್ ಯಾದವ್ ಸ್ಥಾನ ಪಡೆದಿದ್ದಾರೆ.
ಟಿ20 ವಿಶ್ವಕಪ್‌ಗೆ ಎಸ್ ಶ್ರೀಶಾಂತ್ ಆಯ್ಕೆಯ 15 ಸದಸ್ಯರ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ಉಪನಾಯಕ/ ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಶಿವಂ ದುಬೆ, ಮಯಾಂಕ್ ಯಾದವ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications