For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಯ ಸ್ಥಾನವನ್ನು ಪ್ರಶ್ನಿಸುವ ಸಮಯ ಇದಲ್ಲ ಎಂದ ಮಾಜಿ ಕ್ರಿಕೆಟಿಗ ಸಬಾ ಕರೀಮ್

Former cricketer said it is too early to question Virat Kohlis place in team

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನಿಡುತ್ತಿರಯವ ಕಾರಣದಿಂದಾಗಿ ಸಾಕಷ್ಟು ಟೀಕೆಗಳು ಕೇಳಿಬರುತ್ತಿದೆ. ಸಾಕಷ್ಟು ಕ್ರಿಕೆಟಿಗರು ಕೊಹ್ಲಿ ಪರವಾಗಿ ಬೆಂಬಲಕ್ಕೆ ನಿಂತಿದ್ದರೂ ಹೆಚ್ಚಿನ ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಪಂಡಿತರು ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡಬೇಕು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸಂದರ್ಬದಲ್ಲಿ ಮಾಜಿ ಕ್ರಿಕೆಟಿಗ ಸಬಾ ಕರೀಮ್ ಕುಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ವಿರಾಟ್ ಕೊಹ್ಲಿಯ ಸ್ಥಾನವನ್ನು ಈ ಸಂದರ್ಭದಲ್ಲಿ ಪ್ರಶ್ನಿಸುವುದನ್ನು ಸರಿಯಲ್ಲ. ಇನ್ನುಷ್ಟು ಸಮಯಾವಕಾಶವನ್ನು ನೀಡಬೇಕು ಎಂದಿದ್ದಾರೆ.

ವಿರಾಟ್ ಕೊಹ್ಲಿ 2019ರಿಂದ ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಿಯೂ ಶತಕ ಗಳಿಸಲು ವಿಫಲವಾಗಿದ್ದು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಠಿಣ ಸಂದರ್ಭವನ್ನು ಎದುರಿಸುತ್ತಿದ್ದಾರೆ. ಟಿ20 ವಿಶ್ವಕಪ್ ಹತ್ತಿರದಲ್ಲಿರುವಾಗಲೇ ಅನೇಕ ಮಾಜಿ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ಈಗಲೇ ಕೊಹ್ಲಿ ಸ್ಥಾನದ ಬಗ್ಗೆ ಪ್ರಶ್ನಿಸುವುದು ಸರಿಯಲ್ಲ ಎಂದಿದ್ದಾರೆ ಸಬಾ ಕರೀಮ್.

ಖಾಸಗೀ ವಾಹಿನಿಯೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಮಾಜಿ ವಿಕೆಟ್ ಕೀಪರ್ ಸಬಾ ಕರೀಮ್ 33 ವರ್ಷ ವಿರಾಟ್ ಕೊಹ್ಲಿಗೆ ತಂಡದಲ್ಲಿ ಸ್ಥಾನವನ್ನು ಪ್ರಶ್ನಿಸಿದರೆ ಅದು ತುಂಬಾ ಆತುರಪಟ್ಟಂತಾಗುತ್ತದೆ. ಟೀಮ್ ಮ್ಯಾನೇಜ್‌ಮೆಂಟ್ ಟೀಕೆಗಳಿಗೆ ಗಮನ ಕೊಡಬಾರದು ಎಂದು ಸಬಾ ಕರೀಮ್ ಒತ್ತಾಯಿಸಿದ್ದಾರೆ.

ಟಿ20 ವಿಶ್ವಕಪ್ ಪ್ರಾರಂಭವಾಗುವ ಮೊದಲು ನಮಗೆ ಸಾಕಷ್ಟು ಸಮಯ ಇರುವ ಕಾರಣ ವಿರಾಟ್ ಕೊಹ್ಲಿ ಆಡುವ ಬಳಗದಲ್ಲಿ ಸ್ಥಾನವನ್ನು ಪ್ರಶ್ನಿಸಿದರೆ ಆತುರಪಟ್ಟಂತಾಗುತ್ತದೆ. ಅವರು ಕಳಪೆ ಫಾರ್ಮ್‌ನಿಂದ ಹೊರಬರಲು ತಮ್ಮದೇ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಟೀಮ್ ಮ್ಯಾನೇಜ್‌ಮೆಂಟ್ ಈ ರೀತಿಯ ಟೀಕೆಗಳ ಬಗ್ಗೆ ಗಮನ ನೀಡಬಾರದು. ಫಾರ್ಮ್‌ಗೆ ಮರಳುವ ಅವರ ಪ್ರಕ್ರಿಯೆಯ ಮೇಲೆ ಮ್ಯಾನೇಜ್‌ಮೆಂಟ್ ನಂಬಿಕೆಯನ್ನಿಡಬೇಕು" ಎಂದಿದ್ದಾರೆ ಸಬಾ ಕರೀಮ್.

ಮುಂದುವರಿದು ಮಾತನಾಡಿರುವ ಸಬಾ ಕರೀಮ್ "ವಿರಾಟ್‌ ಕೋಹ್ಲಿ ಓರ್ವ ಶ್ರೇಷ್ಠ ಆಟಗಾರ. ಅವರು ತಮ್ಮ ಹಿಂದಿನ ಪ್ರದರ್ಶನಗಳಲ್ಲಿ ಯಾವ ರೀತಿಯ ಗುಣಮಟ್ಟವನ್ನು ಹೊಂದಿದ್ದರು ಎಂಬುದನ್ನು ನೋಡಿದ್ದೇವೆ. ಈಗ ಅದಕ್ಕಿಂತ ಕಡಿಮೆ ಮಟ್ಟದ ಪ್ರದರ್ಶನ ಬಂದಾಗ ಈ ರೀತಿಯ ಪ್ರಶ್ಮೆಗಳು ಸಹಜವಾಗಿ ಪ್ರಶ್ನೆಗಳು ಎಲುತ್ತವೆ. ಆದರೆ ಅವರು ಈ ಟೀಕೆಗಳಿಂದ ಪ್ರಭಾವಿತರಾಗಬಾರದು. ಅವರ ಮೇಲೆ ಅದು ಪರಿಣಾಮ ಬೀರಿಲ್ಲ ಎಂಬುದನ್ನು ನಾವು ಗಮನಿಸಬೆಕಿ. ಅವರು ತಮ್ಮ ಆಟವನ್ನು ವಿಶ್ಲೇಷಿಸುತ್ತಿದ್ದಾರೆ ಮತ್ತು ತಮ್ಮ ಫಾರ್ಮ್‌ಗೆ ಮರಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ತಂಡದ ಮ್ಯಾನೇಜ್‌ಮೆಂಟ್ ಅವರಿಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಬೇಕು" ಎಂದಿದ್ದಾರೆ ಸಬಾ ಕರೀಮ್.

ಇನ್ನು ಇದೇ ಸಂದರ್ಭದಲ್ಲಿ ಮಾಜಿ ವಿಕೆಟ್ ಕೀಪರ್ ಸಬಾ ಕರೀಮ್ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯಬಾರದು ಎಂದಿದ್ದಾರೆ. ಅದರ ಬದಲಿಗೆ ಮತ್ತಷ್ಟು ಹೆಚ್ಚಿನ ಆಟಗಳನ್ನು ಆಡಬೇಕು ಇದರಿಂದಾಗಿ ಅವರ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ ಎಂದಿದ್ದಾರೆ.

"ಅವರು ತಮ್ಮ ಫಾರ್ಮ್‌ಗೆ ಮರಳಲು ಹೆಚ್ಚು ಹೆಚ್ಚು ಕ್ರಿಕೆಟ್ ಆಡುವುದು ಉತ್ತಮ ಎಂದು ನಾನು ಭಾವಿಸುತ್ತೇನೆ. ತಮಡದ ಮ್ಯಾನೇಜ್‌ಮೆಂಟ್ ಹಾಗೂ ಆಯ್ಕೆಗಾರರು ಕೊಹ್ಲಿ ಫಾರ್ಮ್‌ಗೆ ಮರಳಲು ಮತ್ತುಷ್ಟು ಹೆಚ್ಚಿನ ಅವಕಾಶಗಳನ್ನು ನೀಡಬೇಕಿ. ಅದಕ್ಕಾಗಿ ಅವರ ಪ್ರಯತ್ನಗಳಿಗೆ ಬೆಂಬಲ ನೀಡಬೇಕು ಎಂದಿದ್ದಾರೆ ಸಬಾ ಕರೀಮ್.

Story first published: Saturday, July 16, 2022, 18:34 [IST]
Other articles published on Jul 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+