'ಸ್ಯಾಡಿಸ್ಟ್' ಪದ ಬಳಸಿ ಕ್ರಿಕೆಟ್ ನಿಯಮಗಳ ವಿರುದ್ಧ ಮಂಜ್ರೇಕರ್ ಕಿಡಿ!

ನವದೆಹಲಿ: ಬಹಳ ಹಿಂದಿನಿಂದಲೂ ಕ್ರಿಕೆಟ್ ಆಟ ಬ್ಯಾಟ್ಸ್‌ಮನ್‌ಗಳ ಫೇವರ್ ಆಗಿರುವುದನ್ನು ನಾವು ಗಮನಿಸಿದ್ದೇವೆ. ಅಂಪೈರ್ಸ್ ಕಾಲ್, ಶಾರ್ಟರ್ ಫೀಲ್ಡ್ ನಿರ್ಬಂಧಗಳು, ಲೆಗ್ ಬೈಸ್, ಲಾಂಗರ್ ಫೀಲ್ಡ್ ನಿರ್ಬಂಧಗಳು, ಬೌಲರ್‌ಗಳ ಕೆಲವನ್ನು ತುಂಬಾ ಕಠಿಣವಾಗಿಸಿವೆ. ಜೊತೆಗೆ ಇದೇ ಎಲ್ಲಾ ನಿಯಮಗಳು ಬ್ಯಾಟ್ಸ್‌ಮನ್‌ಗಳಿಗೆ ರನ್ ಕದಿಯಲು ಅನುಕೂಲ ಮಾಡಿಕೊಡುತ್ತವೆ.
ಬೌಲರ್‌ಗಳು ಸಣ್ಣ ತಪ್ಪು ಕೂಡ ಮಾಡದಂತೆ ಬಹಳಷ್ಟು ನಿಯಮಗಳನ್ನು ಕ್ರಿಕೆಟ್‌ನಲ್ಲಿ ರೂಪಿಸಲಾಗಿದೆ. ಕ್ರಿಕೆಟ್‌ನಲ್ಲಿನ ಈ ನಿಯಮಗಳ ವಿರುದ್ಧ ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಂಜ್ರೇಕರ್ ಬೇಸರ ವ್ಯಕ್ತಪಡಿಸಿದ್ದಾರೆ. ಬೌಲರ್‌ಗಳಿಗೆ ಬೆಂಬಲವಾಗಿ ಮಂಜ್ರೇಕರ್ ಮಾತನಾಡಿದ್ದಾರೆ.

ಫ್ರೀ ಹಿಟ್ಟಿಗೆ ಮಂಜ್ರೇಕರ್ ಸಿಟ್ಟು
ಮುಖ್ಯವಾಗಿ ಫ್ರೀ ಹಿಟ್ ಬಗ್ಗೆ ಮಾತನಾಡಿದ ಮಂಜ್ರೇಕರ್, 'ನೋ ಬಾಲ್ ಆದಾಗ ಬೌಲರ್ ಒಂದು ಹೆಚ್ಚುವರಿ ಬೌಲ್ ಮಾಡಬೇಕಾಗಿರುತ್ತೆ. ಆದರೆ ಆ ಬಾಲ್‌ಗೆ ಬ್ಯಾಟ್ಸ್‌ಮನ್ ಔಟಾಗಲಾರ. ಆದರೆ ಅದೇ ನೋ ಬಾಲ್‌ಗೆ ಎದುರಾಳಿ ತಂಡಕ್ಕೆ ಒಂದು ಹೆಚ್ಚುವರಿ ರನ್ ನೀಡಲಾಗುತ್ತದೆ. ಜೊತೆಗೆ ಫ್ರೀ ಹಿಟ್ ಕೂಡ ನೀಡಲಾಗುತ್ತದೆ. ಇಫ್ರೀ ಹಿಟ್‌ಗೂ ಔಟ್ ಕೂಡ ಇಲ್ಲ,' ಎಂದು ಮಂಜ್ರೇಕರ್ ವಿವರಿಸಿದ್ದಾರೆ.

ಸ್ಯಾಡಿಸ್ಟ್ ಮಾಡಿದ ನಿಯಮಗಳು
'ಬೌಲರ್‌ಗಳನ್ನು ದಂಡಿಸುವ ಈ ನಿಯಮವು ಮಾಡಿದ ತಪ್ಪಿಗೆ ಕೇವಲ ದಂಡಿಸುವ ರೀತಿಯಲ್ಲಿಲ್ಲ. ಬದಲಿಗೆ ಬೌಲರ್‌ಗಳನ್ನು ದ್ವೇಷಿಸುವ ಹಿಂಸಾರಸಿಕನೊಬ್ಬ (ಸ್ಯಾಡಿಸ್ಟ್) ನಿಯಮಗಳಂತಿವೆ,' ಎಂದು ಹಿಂದುಸ್ತಾನ್ ಟೈಮ್ಸ್ ಕಾಲಮ್‌ನಲ್ಲಿ 55ರ ಮಂಜ್ರೇಕರ್ ಬರೆದುಕೊಂಡಿದ್ದಾರೆ.

ಲೆಗ್ ಬೈಸ್‌ಗೆ ಬೇಸರ
ಲೆಗ್ ಬೈಸ್ ಬಗ್ಗೆಯೂ ಮಂಜ್ರೇಕರ್ ಅಸಮಾಧಾನ ತೋರಿಕೊಂಡಿದ್ದಾರೆ. 'ಬೌಲರ್ ಒಂದೊಳ್ಳೆ ಬೌಲಿಂಗ್ ಮಾಡ್ತಾನೆ. ಬ್ಯಾಟ್ಸ್‌ಮನ್ ಅದರಿಂದ ತಪ್ಪಿಸಿಕೊಳ್ಳುತ್ತಾನೆ. ಆತ ಚೆಂಡಿಗೆ ಬ್ಯಾಟ್ ತಾಗಿಸುವುದಿಲ್ಲ. ಚೆಂಡು ಫೈನ್ ಲೆಗ್ ಬೌಂಡರಿಯತ್ತ ಸಾಗುತ್ತದೆ. ಬ್ಯಾಟಿಂಗ್ ಟೀಮ್‌ಗೆ ಫೇವರ್ ರೀತಿಯಲ್ಲಿ ಅಂಪೈರ್ ಫೋರ್ ಸಿಗ್ನಲ್ ಮಾಡ್ತಾರೆ. ಒಳ್ಳೆಯ ಬೌಲಿಂಗ್‌ಗೂ ಬ್ಯಾಟ್ಸ್‌ಮನ್‌ಗೆ ಬಹುಮಾನ, ಬೌಲರ್‌ಗೆ ಬರೀ ನಾಮ,' ಎಂದು ಮಂಜ್ರೇಕರ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications