ಆತನಂತೆ ರನ್ ಗಳಿಸುವುದು ನಂಬಲಸಾಧ್ಯ ಸಂಗತಿ ಎಂದ ಶೇನ್ ವಾಟ್ಸನ್

ಟಿ20 ವಿಶ್ವಕಪ್ 2022ರಲ್ಲಿ ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಾಗಿದೆ. ನಾಲ್ಕು ಪಂದ್ಯಗಳಲ್ಲಿ 3 ಅರ್ಧಶತಕ ಗಳಿಸಿರುವ ಕೊಹ್ಲಿ, ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ ಎನ್ನುವ ಸಾಧನೆ ಮಾಡಿದ್ದಾರೆ.
ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರ ಒಟ್ಟು 1,016 ರನ್‌ಗಳನ್ನು ಹಿಂದಿಕ್ಕಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಾಧನೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಜಯವರ್ಧನೆ 31 ಇನ್ನಿಂಗ್ಸ್‌ಗಳಿಂದ 1016 ರನ್ ಗಳಿಸಿದ್ದರೆ, ಕೊಹ್ಲಿ ಕೇವಲ 23 ಇನ್ನಿಂಗ್ಸ್‌ಗಳಲ್ಲಿ ಆ ದಾಖಲೆಯನ್ನು ಅಳಿಸಿಹಾಕಿದರು.
ಬುಧವಾರ ಬಾಂಗ್ಲಾದೇಶದ ವಿರುದ್ಧ 44 ಎಸೆತಗಳಲ್ಲಿ 64 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಬ್ಯಾಟಿಂಗ್ ನೆರವಿನಿಂದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತು. ವಿರಾಟ್ ಕೊಹ್ಲಿ ಇತ್ತೀಚಿನ ಪ್ರದರ್ಶನದ ಬಗ್ಗೆ ಶೇನ್ ವ್ಯಾಟ್ಸನ್ ವಿಸ್ಮಯಗೊಂಡಿದ್ದಾರೆ.
ಟಿ20 ಮಾದರಿಯಲ್ಲಿ ಈ ರೀತಿ ಫಾರ್ಮ್ ಉಳಿಸಿಕೊಳ್ಳುವುದು ಎಲ್ಲಾ ಆಟಗಾರರಿಗೂ ಸಾಧ್ಯವಿಲ್ಲ, ಆದರೆ ಕೊಹ್ಲಿ ಮಾತ್ರ ನಂಬಲು ಅಸಾಧ್ಯ ಎನ್ನುವಂತೆ ತಮ್ಮ ಸರಾಸರಿಯನ್ನು ಕಾಪಾಡಿಕೊಂಡಿದ್ದಾರೆ ಎಂದು ವಾಟ್ಸನ್ ಹೊಗಳಿದ್ದಾರೆ.

ಆತನ ಅಂಕಿ ಅಂಶಗಳು ನಂಬಲಸಾಧ್ಯ
"ಟಿ20 ವಿಶ್ವಕಪ್‌ಗಳಲ್ಲಿ 80 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 1000 ರನ್‌ಗಳನ್ನು ಗಳಿಸುವ ಬಗ್ಗೆ ನನಗೆ ಯೋಚನೆ ಮಾಡಲು ಸಾಧ್ಯವಿಲ್ಲ. ಟಿ 20 ಕ್ರಿಕೆಟ್ ಹೆಚ್ಚಿನ ಅಪಾಯದ ಆಟ, ಹೆಚ್ಚಿನ ಅಪಾಯದ ಬ್ಯಾಟಿಂಗ್ ಇರುತ್ತದೆ. ಆದರೂ, ಇಷ್ಟು ದೊಡ್ಡ ಮಟ್ಟದಲ್ಲಿ ರನ್ ಗಳಿಸುವುದು ಸುಲಭದ ಮಾತಲ್ಲ." ಎಂದು ವಾಟ್ಸನ್ ಹೇಳಿದ್ದಾರೆ.
ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ, ಅವರ ದೇಶಕ್ಕಾಗಿ ತುಂಬಾ ಸರಾಸರಿ ಮತ್ತು ಹಲವಾರು ಪಂದ್ಯಗಳನ್ನು ಗೆದ್ದಿದ್ದಾರೆ. ಅವರ ಅಂಕಿ ಅಂಶಗಳು ನಂಬಲಸಾಧ್ಯವಾಗಿವೆ. ನೀವು ಅಂತಹ ಹೆಚ್ಚಿನ ಅಪಾಯದ ಸ್ವರೂಪದಲ್ಲಿ ಬ್ಯಾಟ್ ಮಾಡುವುದು ಮತ್ತು ಸ್ಥಿರವಾಗಿ ಸ್ಕೋರ್ ಮಾಡುವುದು ನಂಬಲಾಗದ ಸಂಗತಿಯಾಗಿದೆ ಎಂದು ವಾಟ್ಸನ್ ಹೇಳಿದ್ದಾರೆ.
ಸೋಲುವ ಭೀತಿಯಲ್ಲಿದ್ದ ಪಂದ್ಯವನ್ನು ಭಾರತದ ಕಡೆ ತಿರುಗಿಸಿದ್ದು ಕನ್ನಡಿಗ ರಾಹುಲ್

ಬಾಂಗ್ಲಾ ವಿರುದ್ಧ ಗೆದ್ದ ಭಾರತ
ಕೊಹ್ಲಿಯ ಅಜೇಯ ನಾಕ್‌ನ ನಂತರ, ಬಾಂಗ್ಲಾದೇಶವು ಏಳು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲ 66 ರನ್ ಗಳಿಸುವ ಮೂಲಕ ಗೆಲುವಿನ ಹಾದಿಯಲ್ಲಿತ್ತು. ಆದರೆ, ಮಳೆಯಿಂದಾಗಿ ಪಂದ್ಯವು ನಾಲ್ಕು ಓವರ್‌ಗಳನ್ನು ಕಳೆದುಕೊಂಡಿತು.
16 ಓವರ್‌ಗಳಲ್ಲಿ 151 ರನ್‌ಗಳ ಪರಿಷ್ಕೃತ ಚೇಸ್‌ನಲ್ಲಿ ಬಾಂಗ್ಲಾದೇಶ ತತ್ತರಿಸಿತು. ಆರಂಭಿಕ ಆಟಗಾರ ಲಿಟನ್ ದಾಸ್ 27 ಎಸೆತಗಳಲ್ಲಿ 60 ರನ್ ಗಳಿಸಿದರು ಆದರೆ 50 ನಿಮಿಷಗಳ ಅಡಚಣೆಯ ನಂತರ ಅವರ ರನ್ ಔಟ್ ಬಾಂಗ್ಲಾದೇಶಕ್ಕೆ ಶಾಪವಾಯಿತು, 16 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 145 ರನ್ ಗಳಿಸುವ ಮೂಲಕ 5 ರನ್‌ಗಳ ಸೋಲನುಭವಿಸಿದರು.

ಸೆಮಿಫೈನಲ್ ಹಾದಿ ಸುಲಭ
ಭಾರತವು ಗ್ರೂಪ್ 2 ರಲ್ಲಿ ಅಗ್ರಸ್ಥಾನಕ್ಕೇರಿತು ಮತ್ತು ಭಾನುವಾರದ ತನ್ನ ಅಂತಿಮ ಗುಂಪು 2 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಜಯಗಳಿಸಿದರೆ ಭಾರತದ ಸೆಮಿಫೈನಲ್ ಹಾದಿ ಖಚಿತವಾಗಲಿದೆ.
ಪಾಕಿಸ್ತಾನ ದಕ್ಷಿಣ ಆಫ್ರಿಕಾ ವಿರುದ್ಧ ಸೋಲನುಭವಿಸಿ, ಬಾಂಗ್ಲಾದೇಶದ ವಿರುದ್ಧ ಜಯಗಳಿಸಿದರೂ ಭಾರತ ಜಿಂಬಾಬ್ವೆ ವಿರುದ್ಧ ಸೋತರೂ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ. ಆದರೂ, ಜಿಂಬಾಬ್ವೆ ವಿರುದ್ಧ ಭಾರತವೇ ಗೆಲ್ಲುವ ಫೇವರಿಟ್ ಆಗಿರುವುದರಿಂದ ಭಾರತ ಸೆಮಿಫೈನಲ್ ತಲುಪುವುದು ಬಹುತೇಕ ಖಚಿತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications