
ಭಾರತದ ಲೆಜೆಂಡರಿ ಬ್ಯಾಟರ್ ಸುನಿಲ್ ಗವಾಸ್ಕರ್ ಅವರು ನಡೆಯುತ್ತಿರುವ ಟಿ20 ವಿಶ್ವಕಪ್ 2022 ರ ಉಳಿದ ಪಂದ್ಯಗಳಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ತ್ವರಿತವಾಗಿ ರನ್ ಗಳಿಸಬೇಕು ಎಂದು ಸಲಹೆ ನೀಡಿದ್ದಾರೆ.
ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಉತ್ತಮವಾಗಿ ರನ್ ಗಳಿಸಲಿಲ್ಲ, 160 ರನ್‌ಗಳ ಬೆನ್ನತ್ತಿದ ಟೀಂ ಇಂಡಿಯಾ ಆರಂಭಿಕ ಕುಸಿತ ಕಂಡಿತ್ತು.
ಪಾಕಿಸ್ತಾನದ ವೇಗಿ ನಸೀಮ್ ಶಾ ಎರಡನೇ ಓವರ್‌ನಲ್ಲಿ ಕೆಎಲ್ ರಾಹುಲ್ ಅವರನ್ನು ಬೌಲ್ಡ್ ಮಾಡಿದ ನಂತರ, ಹ್ಯಾರಿಸ್ ರೌಫ್ 145 ಕಿಮೀ ಎಸೆತದಲ್ಲಿ ರೋಹಿತ್ ಶರ್ಮಾ ಮೊದಲ ಸ್ಲಿಪ್‌ನಲ್ಲಿ ಇಫ್ತಿಕರ್ ಅಹ್ಮದ್‌ಗೆ ಕ್ಯಾಚ್ ನೀಡುವ ಮೂಲಕ ಔಟಾದರು. ಆದರೂ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಬ್ಯಾಟಿಂಗ್ ನೆರವಿನ ಮೂಲಕ ಭಾರತವು ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧದ ಅಂತಿಮ ಎಸೆತದಲ್ಲಿ ಅದ್ಭುತ ಜಯ ಸಾಧಿಸಿ ಎರಡು ಅಂಕಗಳನ್ನು ಗಳಿಸಿತು.
2022 ರಲ್ಲಿ ರೋಹಿತ್ ಶರ್ಮಾ 22 ಬಾರಿ ಔಟಾಗಿದ್ದು, ಅದರಲ್ಲಿ 14 ಬಾರಿ 14 ಪವರ್‌ಪ್ಲೇನಲ್ಲಿ ಔಟಾಗಿದ್ದಾರೆ. ಈ ವರ್ಷ ಅವರು 142.12 ಸ್ಟ್ರೈಕ್ ರೇಟ್‌ನಲ್ಲಿ 388 ರನ್ ಗಳಿಸಿದ್ದಾರೆ. 2021ರಲ್ಲಿ 11 ಇನ್ನಿಂಗ್ಸ್‌ಗಳಲ್ಲಿ 151.46 ಸ್ಟ್ರೈಕ್ ರೇಟ್‌ನಲ್ಲಿ 259 ರನ್ ಗಳಿಸಿದ್ದರು. 2020ರಲ್ಲಿ 4 ಇನ್ನಿಂಗ್ಸ್‌ಗಳಲ್ಲಿ 159.18 ಸ್ಟ್ರೈಕ್ ರೇಟ್‌ನಲ್ಲಿ 78 ರನ್ ಗಳಿಸಿದ್ದರು.

ಮಧ್ಯಮ ಕ್ರಮಾಂಕದ ಮೇಲಿನ ಒತ್ತಡ ಕಡಿಮೆ ಮಾಡಿ
ಇತ್ತೀಚಿನ ದಿನಗಳಲ್ಲಿ ಭಾರತೀಯ ನಾಯಕನ ಕ್ಷೀಣಿಸುತ್ತಿರುವ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
"ಇತ್ತೀಚಿನ ದಿನಗಳಲ್ಲಿ ರೋಹಿತ್ ಶರ್ಮಾ ತಮ್ಮ ಮೊದಲಿನ ಸಾಮರ್ಥ್ಯದೊಂದಿಗೆ ಸ್ಕೋರ್ ಮಾಡಿಲ್ಲ ಎಂಬುದು ನಿಜವಾಗಿಯೂ ಕಳವಳಕಾರಿಯಾಗಿದೆ. ಅವರು ಆರಂಭದಲ್ಲಿ ಉತ್ತಮವಾಗಿ ರನ್ ಗಳಿಸಿದರೆ, ನಂತರದ ಬ್ಯಾಟರ್ ಗಳು ಸುಲಭವಾಗಿ ರನ್ ಗಳಿಸಲು ಸಹಾಯಕವಾಗುತ್ತದೆ" ಎಂದು ಅವರು ಹೇಳಿದ್ದಾರೆ.
ರೋಹಿತ್ ಮತ್ತು ರಾಹುಲ್ ಆರಂಭದಲ್ಲಿ ತಮ್ಮ ಇನ್ನಿಂಗ್ಸ್‌ನಲ್ಲಿ ವೇಗವಾಗಿ ರನ್ ಗಳಿಸುವ ಮೂಲಕ ಮಧ್ಯಮ ಕ್ರಮಾಂಕದ ಮೇಲಿನ ಒತ್ತಡ ಕಡಿಮೆ ಮಾಡಬೇಕು, ಆಗ ಮಾತ್ರ ಭಾರತ ಇನ್ನೂ ಉತ್ತಮ ರನ್ ಕಲೆಹಾಕಲು ಸಾಧ್ಯ ಎಂದು ಹೇಳಿದರು.
"ಒಳ್ಳೆಯ ಪ್ಲಾಟ್‌ಫಾರ್ಮ್ ಅನ್ನು ಎಲ್ಲರೂ ನೋಡುತ್ತಾರೆ. ನೀವು ಉತ್ತಮ ಆರಂಭ ನೀಡಿದರೆ ನಂತರ ಅದು ನಂ.4 ಅಥವಾ 5 ಅಥವಾ ನಂ.3 ರಲ್ಲಿ ಬ್ಯಾಟಿಂಗ್ ಮಾಡುವವರಿಗೆ ಹೆಚ್ಚಿನ ವೇಗದಲ್ಲಿ ರನ್ ಗಳಿಸಲು ಸುಲಭವಾಗುತ್ತದೆ" ಎಂದು ಗವಾಸ್ಕರ್ ಹೇಳಿದರು.