Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂದಿನ ಕೆಲ ವರ್ಷಗಳ ಕಾಲ ರೋಹಿತ್ ಶರ್ಮಾಗೆ ಈತನೇ ಆರಂಭಿಕ ಜೊತೆಗಾರ: ಸುನಿಲ್ ಗವಾಸ್ಕರ್

Former cricketer Sunil Gavaskar predicts next few years Shubman Gill Will Be Rohit Sharma’s Opening Partner

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾದ ಆರಂಭಿಕ ಸ್ಥಾನದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಟೀಮ್ ಇಂಡಿಯಾದ ಆರಂಭಿಕ ಸ್ಥಾನದಲ್ಲಿ ಮುಂದಿನ ಕೆಲ ವರ್ಷಗಳ ಕಾಲ ರೋಹಿತ್ ಶರ್ಮಾಗೆ ಯುವ ಆಟಗಾರ ಶುಬ್ಮನ್ ಗಿಲ್ ಸಾಥ್ ನೀಡಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ದದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶುಬ್ಮನ್ ಗಿಲ್ ಶತಕ ಸಿಡಿಸಿದ ಬಳಿಕ ಸುನಿಲ್ ಗವಾಸ್ಕರ್ ಈ ಮಾತುಗಳನ್ನಾಡಿದ್ದಾರೆ.

ಶುಬ್ಮನ್ ಗಿಲ್ ಎಲ್ಲಾ ಮಾದರಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿದ್ದು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುತ್ತಿದ್ದಾರೆ. ಕಳೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಶುಬ್ಮನ್ ಗಿಲ್ ದ್ವಿಶತಕ ಸಿಡಿಸಿದ್ದು ಈ ಸಾಧನೆಗೈದ ಅತ್ಯಂತ ಕಿತಿಯ ಆಟಗಾರ ಎನಿಸಿದ್ದಾರೆ. ಬಳಿಕ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಟೆಸ್ಟ್ ಮಾದರಿಯಲ್ಲಿಯೂ ಆರಂಭಿಕನಾಗಿ ಗಿಲ್ ಕಣಕ್ಕಿಳಿದು ಮಿಂಚಿದ್ದಾರೆ.

ಸ್ಪೋರ್ಟ್ಸ್ ತಕ್ ಜೊತೆಗೆ ಮಾತನಾಡಿರುವ ಸುನಿಲ್ ಗವಾಸ್ಕರ್ ಯುವ ಆಟಗಾರ ಶುಬ್ಮನ್ ಗಿಲ್ ಬಗ್ಗೆ ಭಾರೀ ಭರವಸೆ ವ್ಯಕ್ತಪಡಿಸಿದ್ದಾರೆ. "ಆತನಿಗಿನ್ನೂ ಕೇವಲ 23 ವರ್ಷ, ಎಲ್ಲಾ ಮಾದರಿಯಲ್ಲಿಯೂ ಆತ ಅದ್ಭುತವಾಗಿ ಪ್ರದರ್ಶನ ನೀಡಿದ್ದು ಟೆಸ್ಟ್ ಏಕದಿನ ಹಾಗೂ ಟಿ20 ಮಾದರಿಯಲ್ಲಿ ಶತಕಗಳನ್ನು ಸಿಡಿಸಿದ್ದಾರೆ. ಹೀಗಾಗಿ ಮುಂದಿನ ಕೆಲ ವರ್ಷಗಳ ಕಾಲ ಅವರು ರೋಹಿತ್ ಶರ್ಮಾ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿಯುವುದು ಖಚಿತ" ಎಂದಿದ್ದಾರೆ ಸುನಿಲ್ ಗವಾಸ್ಕರ್.

2023ರಲ್ಲಿ ಶುಬ್ಮನ್ ಗಿಲ್ ಈವರೆಗೆ ಒಟ್ಟು 2 ಟೆಸ್ಟ್, 6 ಏಕದಿನ ಹಾಗೂ 6 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಆಡಿರುವ ಮೂರು ಇನ್ನಿಂಗ್ಸ್‌ಗಳನ್ನು ಅವರು ಒಂದು ಶತಕದ ಸಹಿತ 154 ರನ್‌ಗಳಿಸಿದ್ದಾರೆ. ಏಕದಿನ ಮಾದರಿಯಲ್ಲಿ 113.40 ಸರಾಸರಿಯಲ್ಲಿ 567 ರನ್‌ಗಳನ್ನು ಗಳಿಸಿದ್ದು 3 ಶತಕ ಮತ್ತು 1 ಅರ್ಧಶತಕವನ್ನು ಸಿಡಿಸಿದ್ದಾರೆ. ಇನ್ನು ಚುಟುಕು ಮಾದರಿಯಲ್ಲಿಯೂ ಅವರು ಇಲ್ಲಿಯವರೆಗೆ 40.40 ರ ಸರಾಸರಿಯಲ್ಲಿ 202 ರನ್ ಗಳಿಸಿದ್ದು 1 ಶತಕ ಬಾರಿಸಿದ್ದಾರೆ.

ಈ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ಶುಬ್ಮನ್ ಗಿಲ್ ಭಾರತಕ್ಕೆ ಉದಯೋನ್ಮುಖ ಆರಂಭಿಕ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮುಂಬರುವ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಭಾಗವಾಗಿದ್ದು ತಮ್ಮ ಅದ್ಭುತ ಫಾರ್ಮ್ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಇನ್ನು ಸರಣಿಯು ಮಾರ್ಚ್ 17, 19 ಮತ್ತು 22 ರಂದು ಮೂರು ಪಂದ್ಯಗಳನ್ನು ವೀಕ್ಷಿಸಲಿದೆ.

Story first published: Wednesday, March 15, 2023, 18:26 [IST]
Other articles published on Mar 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+