ಅತ್ಯುತ್ತಮ ಐಪಿಎಲ್ ತಂಡ ಆಯ್ಕೆ ಮಾಡಿದ ಸೆಹ್ವಾಗ್: ಮುಖ್ಯ ಆಟಗಾರನೇ ಇಲ್ಲ!
ಐಪಿಎಲ್ 2020 ವೇಳೆಗೆ ವೀರೇಂದ್ರ ಸೆಹ್ವಾಗ್ ಸಾಕಷ್ಟು ಸಕ್ರಿಯರಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪಂದ್ಯಗಳ ಬಗ್ಗೆ ಹಾಸ್ಯಮಿಶ್ರಿತ ವಿಶ್ಲೇಷಣೆಗಳನ್ನು ನೀಡುತ್ತಿದ್ದರು. ಸೆಹ್ವಾಗ್ ಅವರ ವಿಶ್ಲೇಷಣೆ ಸಾಕಷ್ಟು ಖ್ಯಾತಿ ಗಳಿಸಿತ್ತು.
ಇದೀಗ ಐಪಿಎಲ್ ಮುಗಿದ ನಂತರ ಇಷ್ಟು ದಿನ ಎಲ್ಲಾ ಆಟಗಾರರ ಪ್ರದರ್ಶನ ಕಂಡಿರುವ ಸೆಹ್ವಾಗ್, ಇದೇ ಐಪಿಎಲ್‌ನಲ್ಲಿ ಆಡಿದ ಆಟಗಾರರನ್ನು ಸೇರಿಸಿ ತಮ್ಮದೇ ಆದ ಐಪಿಎಲ್ ತಂಡವೊಂದನ್ನು ಕಟ್ಟಿದ್ದಾರೆ.
ಸೆಹ್ವಾಗ್ ಆಯ್ಕೆ ಮಾಡಿರುವ ಐಪಿಎಲ್ ತಂಡ ಅದ್ಭುತವಾಗಿದೆ, ಪ್ರತಿಭಾಶಾಲಿ ಆಟಗಾರರು ಇದ್ದಾರೆ. ಆದರೆ ಸೆಹ್ವಾಗ್ ಭಾರತದ ಜೊತೆಗೆ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಅನ್ನೇ ತಮ್ಮ ಐಪಿಎಲ್ ತಂಡಕ್ಕ ಆಯ್ಕೆ ಮಾಡಿಕೊಂಡಿಲ್ಲ.

ಆರಂಭಿಕ ಬ್ಯಾಟ್ಸ್‌ಮನ್‌ಗಳು ಕರ್ನಾಟಕದವರು
ತಮ್ಮ ಐಪಿಎಲ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಕೆ.ಎಲ್.ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ಅನ್ನು ಆಯ್ಕೆ ಮಾಡಿದ್ದಾರೆ ಸೆಹ್ವಾಗ್. ಕೆ.ಎಲ್.ರಾಹುಲ್‌ಗೆ ಕೀಪರ್ ಜವಾಬ್ದಾರಿಯನ್ನು ಸಹ ನೀಡಿದ್ದಾರೆ ಸೆಹ್ವಾಗ್.

ವಿರಾಟ್ ಕೊಹ್ಲಿಗೆ ನಾಯಕತ್ವ
ಮೂರನೇ ಸ್ಥಾನಕ್ಕೆ ಮುಂಬೈನ ಸೂರ್ಯಕುಮಾರ್ ಯಾದವ್, ನಾಲ್ಕನೇ ಸ್ಥಾನಕ್ಕೆ ವಿರಾಟ್ ಕೊಹ್ಲಿ, ಐದನೇ ಸ್ಥಾನಕ್ಕೆ ಡೇವಿಡ್ ವಾರ್ನರ್ ಅನ್ನು ಆರಿಸಿದ್ದಾರೆ. ನಾಯಕತ್ವವನ್ನು ಯಾರಿಗೆ ನೀಡಬೇಕು ಎಂದು ಬಹುವಾಗಿ ಯೋಚಿಸಿದ ನಂತರ ಕೊಹ್ಲಿಯನ್ನೇ ತಮ್ಮ ತಂಡದ ಕ್ಯಾಪ್ಟನ್ ಮಾಡಿದ್ದಾರೆ ಸೆಹ್ವಾಗ್.

ಆರನೇ ಆಟಗಾರನಾಗಿ ಎಬಿ ಡಿವಿಲಿಯರ್ಸ್
ಆರನೇ ಸ್ಥಾನಕ್ಕೆ ಎಬಿ ಡಿವಿಲಿಯರ್ಸ್ ಅನ್ನು ಆರಿಸಿದ್ದಾರೆ. ಇದೇ ಸ್ಥಾನಕ್ಕೆ ಪೊಲಾರ್ಡ್ ಹಾಗೂ ಪಾಂಡ್ಯಾ ರನ್ನು ಆಯ್ಕೆ ಮಾಡಬಹುದಾಗಿತ್ತು. ಆದರೆ ಡಿವಿಲಿಯರ್ಸ್ ಈ ಬಾರಿಯ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು ಹಾಗಾಗಿ ಅವರನ್ನೇ ಆಯ್ಕೆ ಮಾಡಿದ್ದೇನೆ ಎಂದಿದ್ದಾರೆ ಸೆಹ್ವಾಗ್.

ಐವರು ಬೌಲರ್‌ಗಳ ಆಯ್ಕೆ
ವೇಗದ ಬೌಲರ್‌ಗಳ ಸ್ಥಾನಕ್ಕೆ ಮೊಹಮ್ಮದ್ ಶಮಿ, ಜಸ್ಪ್ರಿತ್ ಬುಮ್ರಾ, ಕಗಿಸೊ ರಬಾಡಾ ಅನ್ನು ಆಯ್ಕೆ ಮಾಡಿದ್ದಾರೆ. ಸ್ಪಿನ್ನರ್‌ಗಳಾಗಿ ಆರ್‌ಸಿಬಿಯ ಯಜುವೇಂದರ್ ಚಾಹಲ್, ಎಸ್‌ಆರ್ಎಚ್‌ನ ರಶೀದ್ ಖಾನ್ ಅನ್ನು ಆರಿಸಿದ್ದಾರೆ. ಹೆಚ್ಚುವರಿ ಆಟಗಾರರಾಗಿ ಇಶಾನ್ ಕಿಶನ್ ಹಾಗೂ ಜೊಫ್ರಾ ಆರ್ಚರ್ ಅನ್ನು ಆರಿಸಿದ್ದಾರೆ ಸೆಹ್ವಾಗ್.

ರೊಹಿತ್ ಶರ್ಮಾ ಅನ್ನು ಆಯ್ಕೆ ಮಾಡಿಲ್ಲ!
ಅತ್ಯುತ್ತಮ ಟೀಂ ಅನ್ನೇ ಆಯ್ಕೆ ಮಾಡಿರುವ ಸೆಹ್ವಾಗ್, ತಮ್ಮ ತಂಡದಲ್ಲಿ ರೋಹಿತ್ ಶರ್ಮಾ ಗೆ ಅವಕಾಶವನ್ನೇ ನೀಡಿಲ್ಲ. ವಿಶ್ವದ ಉತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ರೊಹಿತ್ ಶರ್ಮಾಗೆ ಯಾಕೆ ನಿಮ್ಮ ತಂಡದಲ್ಲಿ ಸ್ಥಾನ ನೀಡಿಲ್ಲ. ಪಡಿಕಲ್ ಬದಲಿಗೆ ರೋಹಿತ್ ಅನ್ನು ಓಪನರ್ ಮಾಡಬಹುದಿತ್ತು ಎಂದಿದ್ದಾರೆ ನೆಟ್ಟಿಗರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications