Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Team India: ಟೀಮ್ ಇಂಡಿಯಾ ಸ್ಟಾರ್ ಆಟಗಾರರ ಮೇಲೆ ಮಾಜಿ ಕ್ರಿಕೆಟಿಗ ಗರಂ

ಆಸ್ಟ್ರೇಲಿಯಾ ವಿರುದ್ಧದ 5 ಟೆಸ್ಟ್ ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ತಂಡ 1-3 ಅಂತರದ ಸೋಲನ್ನು ಎದುರಿಸಿದೆ. ಕಾಂಗರೂ ಪಡೆ ಸಿಡ್ನಿ ಟೆಸ್ಟ್‌ನಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿ ಸರಣಿ ಕೈವಶ ಮಾಡಿಕೊಂಡಿದೆ. 10 ವರ್ಷಗಳ ನಂತರ ಭಾರತ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವಲ್ಲಿ ಕಾಂಗೂರು ಪಡೆ ಯಶಸ್ವಿಯಾಗಿದೆ. ಟೀಮ್ ಇಂಡಿಯಾ ಸೋಲಿನ ಬಳಿಕ ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ಹಿರಿಯ ಆಟಗಾರರ ಮೇಲೆ ಗರಂ ಆಗಿದ್ದಾರೆ. ಈ ಸೋಲಿನೊಂದಿಗೆ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಲುಪುವ ಕನಸು ಭಗ್ನಗೊಂಡಿದೆ.

ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ಅನೇಕ ಅನುಭವಿ ಆಟಗಾರರ ಪ್ರದರ್ಶನಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಆಟಕ್ಕಿಂತ ದೊಡ್ಡ ಆಟಗಾರ ಇಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Former cricketer Yograj Singh is angry with Team India senior players

ಯೋಗರಾಜ್ ಬೇಸರ

ಟೀಮ್ ಇಂಡಿಯಾ ಕೋಚಿಂಗ್ ಮತ್ತು ಮ್ಯಾನೇಜ್ಮೆಂಟ್ ನಡುವೆ ವ್ಯತ್ಯಾಸವಿದೆ. ಕೋಚಿಂಗ್ ಎಂದರೆ ಈ ಶಾಟ್ ಆಡಬೇಡಿ ಎಂದು ಹೇಳುವುದು. ವಿರಾಟ್ ಮತ್ತು ರೋಹಿತ್‌ಗೆ ಯಾರು ಹೇಳುತ್ತಾರೆ ಎಂಬ ಪ್ರಶ್ನೆ ಉಳಿದಿದೆ?. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಟಗಾರರ ಪ್ರದರ್ಶನ ಉತ್ತಮವಾಗಿತ್ತು. ಆದರೆ ಜಸ್ಪ್ರೀತ್ ಬುಮ್ರಾ ಕಳೆದ ಪಂದ್ಯದಲ್ಲಿ ಆಡದಿರುವುದು ಸೋಲಿಗೆ ದೊಡ್ಡ ಕಾರಣ ಎಂದು ಯೋಗರಾಜ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆಫ್-ಸ್ಟಂಪ್ ಹೊರಗೆ ಚೆಂಡನ್ನು ಹೊಡೆಯದಂತೆ ವಿರಾಟ್ ಕೊಹ್ಲಿಗೆ ಹೇಳಬೇಕಾಗಿತ್ತು. ಸಚಿನ್ ತೆಂಡೂಲ್ಕರ್ ಅವರ ಉದಾಹರಣೆಯನ್ನು ನೀಡುತ್ತಾ, ಆಸ್ಟ್ರೇಲಿಯಾದಲ್ಲಿ ಸಚಿನ್ ರನ್ ಗಳಿಸಲು ಸಾಧ್ಯವಾಗದಿದ್ದಾಗ ಅವರು ಕವರ್ಡ್ರೈವ್ ಆಡುವುದನ್ನು ನಿಲ್ಲಿಸಿದ್ದರು. ಔಟಾಗದೆ 235 ರನ್‌ಗಳ ಅದ್ಭತ ಇನ್ನಿಂಗ್ಸ್ ಆಡಿದ್ದರು. ಈ ವೇಳೆ ಅವರು ಕವರ್ಡ್ರೈವ್ ಶಾಟ್ ಒಮ್ಮೆಯೂ ಆಡಿರಲಿಲ್ಲ ಎಂದು ಹೇಳಿದ್ದಾರೆ.

ಕೋಚ್ ಗೌತಮ್ ಗಂಭೀರ್ ಉತ್ತಮ ಕ್ರಿಕೆಟಿಗ. ಎಲ್ಲಿ ತಪ್ಪು ನಡೆಯುತ್ತದೆ, ಅವರು ಅದನ್ನು ಹೇಳುತ್ತಾರೆ. ಆದರೆ ನಮಗೆ ಹೇಳಬಲ್ಲ ಮ್ಯಾನೇಜ್ಮೆಂಟ್ ಬೇಕು. ನಾನು ಆಸ್ಟ್ರೇಲಿಯಾದಲ್ಲಿ ಆಡುವಾಗ ಕಪಿಲ್ ದೇವ್ ನನ್ನನ್ನು ನಾಯಕ ಎಂದು ಉಲ್ಲೇಖಿಸುತ್ತಿದ್ದರು. ಅದೇ ರೀತಿ ದೊಡ್ಡ ಆಟಗಾರರಿಗೂ ಜವಾಬ್ದಾರಿ ವಹಿಸುವಂತೆ ಹೇಳಬೇಕು. ಕೋಚ್ ಮತ್ತು ಮ್ಯಾನೇಜ್ಮೆಂಟ್ ಮಕ್ಕಳನ್ನು ಎತ್ತುವ ಮತ್ತು ಅವರು ಪ್ರದರ್ಶನ ನೀಡದಿದ್ದಾಗ ಅವರನ್ನು ಬೆಳೆಸುವ ಮಾಂತ್ರಿಕ ದಂಡಗಳು ಎಂದು ಯೋಗರಾಜ್ ತಿಳಿಸಿದ್ದಾರೆ.

Story first published: Sunday, January 5, 2025, 23:25 [IST]
Other articles published on Jan 5, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+