ಹುಟ್ಟಹಬ್ಬ ಆಚರಿಸದೆ ರೈತರ ಬೆನ್ನಿಗೆ ನಿಂತ ಸಿಕ್ಸರ್ ಕಿಂಗ್ ಯುವರಾಜ್

ನವದೆಹಲಿ: ಡಿಸೆಂಬರ್ 12ಕ್ಕೆ ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ 39ನೇ ಹರೆಯಕ್ಕೆ ಕಾಲಿರುತ್ತಿದ್ದಾರೆ. ಆದರೆ ಈ ವರ್ಷ ತಾನು ತನ್ನ ಹುಟ್ಟುಹಬ್ಬ ಆಚರಿಸುತ್ತಿಲ್ಲ. ಬದಲಿಗೆ ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ ಸಮಸ್ಯೆ ಶೀಘ್ರ ಬಗೆಹರಿಯಲಿ ಎಂದು ಬಯಸುತ್ತಿದ್ದೇನೆ ಎಂದು ಯುವರಾಜ್ ಹೇಳಿಕೊಂಡಿದ್ದಾರೆ.
ಟ್ವಿಟರ್ ಮೂಲಕ ಯುವರಾಜ್, ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ತನ್ನ ತಂದೆ ಭಾವೋದ್ವೇಗದಿಂದ ನೀಡಿದ ಹಿಂದು ವಿರೋಧಿ ಎನ್ನಲಾದ ಹೇಳಿಕೆಗೆ ತನ್ನ ಬೆಂಬಲವಿಲ್ಲ. ತಂದೆಯ ನಿಲುವು ಮತ್ತು ನನ್ನ ನಿಲುವು ಸಂಪೂರ್ಣವಾಗಿ ಬೇರೆಯೇ ಎಂದು ಬರೆದುಕೊಂಡಿದ್ದಾರೆ.
'ಹುಟ್ಟುಹಬ್ಬಗಳು ನಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಇರುವ ಅವಕಾಶ. ಈ ದಿನ ನಾನು ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿಲ್ಲ, ಸರ್ಕಾರ ಮತ್ತು ರೈತರ ನಡುವೆ ನಡೆಯುತ್ತಿರುವ ಮಾತುಕತೆಗಳು ಒಂದು ಪರಿಹಾರ ಕಾಣಲಿ. ನಿಸಂದೇಹವಾಗಿ ರೈತರೇ ನಮ್ಮ ದೇಶದ ಜೀವನಾಡಿ. ತಂದೆ ಯೋಗ್ರಾಜ್ ಹೇಳಿಕೆ ನನಗೆ ಬೇಸರ ತಂದಿದೆ. ಅವರ ನಿಲುವೇ ಬೇರೆ. ನನ್ನದೇ ಬೇರೆ,' ಎಂದು ಯುವಿ ಟ್ವೀಟ್‌ನಲ್ಲಿ ಬರೆದಿದ್ದಾರೆ.
ಕೇಂದ್ರ ಸರ್ಕಾರ ತಂದಿರುವ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ, ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ರಸ್ಲರ್‌ಗಳು, ಬಾಕ್ಸರ್‌ಗಳು, ಹಾಕಿ ಆಟಗಾರರು ಸೇರಿದಂತೆ ಅನೇಕ ಕ್ರೀಡಾಪಟುಗಳು ಬೆಂಬಲ ಸೂಚಿಸಿದ್ದರು. ಆದರೆ ಭಾರತೀಯ ಪ್ರಮುಖ ಕ್ರಿಕೆಟರ್‌ಗಳಲ್ಲಿ ಬೆಂಬಲ ಸೂಚಿಸುತ್ತಿರುವವರಲ್ಲಿ ಯುವಿ ಮೊದಲಿಗ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications