For Quick Alerts
ALLOW NOTIFICATIONS  
For Daily Alerts
 

ದ. ಆಫ್ರಿಕಾ ವಿರುದ್ಧ ಹೀನಾಯ ಸೋಲು: ಮಾಜಿ ಆಟಗಾರರ ಆಕ್ರೋಶ

ಟೀಮ್ ಇಂಡಿಯಾ ತವರಿನಲ್ಲಿ ಹೀನಾಯ ಸೋಲನ್ನು ಕಂಡಿದೆ. ಗುವಾಹಟಿಯಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ 408 ರನ್‌ಗಳ ಸೋಲು ಕಂಡಿದೆ. ಈ ಹೀನಾಯ ಸೋಲಿನ ಬಳಿಕ ಟೀಮ್ ಇಂಡಿಯಾದ ಪ್ರದರ್ಶನವನ್ನು ಮಾಜಿ ಆಟಗಾರರು ಟೀಕಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಆರ್‌ ಅಶ್ವಿನ್‌, ವೆಂಕಟೇಶ್ ಪ್ರಸಾದ್‌, ಇಂಗ್ಲೆಂಡ್‌ನ ಕೇವಿನ್‌ ಪೀಟರ್ಸನ್‌ ವರೆಗೂ ಮಾಜಿ ಆಟಗಾರರು ಟೀಮ್ ಇಂಡಿಯಾ ಪ್ರದರ್ಶನಕ್ಕೆ ಆಕ್ರೋಶಗೊಂಡಿದ್ದಾರೆ.

ಭಾರತದಲ್ಲಿ ದಕ್ಷಿಣ ಆಫ್ರಿಕಾ ನೀಡಿದ ಪ್ರದರ್ಶನವನ್ನು ಟೀಮ್ ಇಂಡಿಯಾ ಮಾಜಿ ಆಟಗಾರ ಅಶ್ವಿನ್‌ ಶ್ಲಾಘಿಸಿದ್ದಾರೆ. ಇದು ಆಫ್ರಿಕಾ ತಂಡದ ದೊಡ್ಡ ಸಾಧನೆ ಎಂದು ಬಣ್ಣಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡ ಏಕೆ ತಾವು ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಅರ್ಹರು ಎಂಬುದನ್ನು ತೋರಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Former Cricketers Slam Team India After Humiliating 408-Run Loss to South Africa in Guwahati

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್, ಟೀಮ್ ಇಂಡಿಯಾ ತವರಿನಲ್ಲಿ ಈ ರೀತಿ ಎಂದೂ ಸೋತಿರಲಿಲ್ಲ. ಎಲ್ಲಿಯ ವರೆಗೂ ಅಂದರೆ ಎದುರಾಳಿ ತಂಡದಿಂದ ಯಾರಾದರೂ ಶ್ರೇಷ್ಠ ಆಟಗಾರ ಬಂದು, ಮುಂಬೈನಲ್ಲಿ ಕೆಚ್ಚೆದೆಯ ಆಟವನ್ನು ಪ್ರದರ್ಶಿಸಬೇಕಿತ್ತು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾಕ್ಕೆ ಏನಾಗಿದೆ ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.

ತಂಡದ ಆಯ್ಕೆ ಬಗ್ಗೆ ಪ್ರಶ್ನೆ?

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಆಡಿದ ರೀತಿಯಿಂದ ನನಗೆ ನಿಜಕ್ಕೂ ನಿರಾಸೆ ಆಗಿದೆ ಎಂದು ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಆಟಗಾರರನ್ನು ದುಲೀಪ್‌ ಟ್ರೋಫಿ, ರಣಜಿ ಟ್ರೋಫಿಯಲ್ಲಿ ಆಡಿದ ಆಧಾರದ ಮೇಲೆ ಆಯ್ಕೆ ಮಾಡಬೇಕು. ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನವನ್ನು ಆಧರಿಸಿ ಆಯ್ಕೆ ಮಾಡಬಾರದು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್‌ಗಳಿಗೆ ಹೆಚ್ಚಿನ ಸ್ಥಾನ ನೀಡಲಾಯಿತು. ಇದರಿಂದ ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗುತ್ತಾರೆ ಎಂಬ ಆಸೆ. ಆದರೆ ಟೆಸ್ಟ್‌ ಕ್ರಿಕೆಟ್‌ ಸ್ಪೆಷಲಿಸ್ಟ್‌ಗಳ ಆಟ. ನಾವು ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು. ಆದರೆ ಕಳೆದ ಒಂದು ವರ್ಷದಿಂದ ಆಗುತ್ತಿರುವುದನ್ನು ಕಂಡು ಬೇಸರವಾಗುತ್ತದೆ ಎಂದಿದ್ದಾರೆ.

Former Cricketers Slam Team India After Humiliating 408-Run Loss to South Africa in Guwahati

ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿದ ಬೆನ್ನಲ್ಲೆ ವೆಂಕಟೇಶ್ ಪ್ರಸಾದ್ ಸರಣಿ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಯಶ್ ರಾಥೋಡ್, ಶುಭಮ್ ಶರ್ಮಾ, ಬಾಬಾ ಇಂದ್ರಜೀತ್‌, ಸ್ಮರಣ್‌ ರವಿಚಂದ್ರನ್ ಅವರ ಹೆಸರನ್ನು ಪ್ರಸ್ತಾಪಿಸಿದ್ದು, ಈ ಆಟಗಾರರ ಹೆಸರುಗಳನ್ನು ಹಲವರು ಕೇಳಿರುವುದಿಲ್ಲ. ಕಾರಣ ಇವರು ಆಡುವುದಿಲ್ಲ. ಆದರೆ ಇವರು ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಬಳಿಕ ಇರ್ಫಾನ್ ಪಠಾಣ್‌, ಪಂತ್‌ ಪಡೆ ಬ್ಯಾಟಿಂಗ್‌ ನಿರಾಶಾದಾಯಕವಾಗಿದೆ ಎಂದು ಹೇಳಿದ್ದಾರೆ.

Story first published: Wednesday, November 26, 2025, 23:35 [IST]
Other articles published on Nov 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+