23ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿಗೆ ಗುಡ್ ಬೈ ಹೇಳಿದ ಕಾಲಿಂಗ್ ವುಡ್

ಲಂಡನ್, ಸೆಪ್ಟೆಂಬರ್ 13: ಸರಿ ಸುಮಾರು 23 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿಗೆ ಇಂಗ್ಲೆಂಡಿನ ಆಲ್ ರೌಂಡರ್ ಪಾಲ್ ಕಾಲಿಂಗ್ ವುಡ್ ಅವರು ಪ್ರಥಮ ದರ್ಜೆ ಕ್ರಿಕೆಟ್ ನಿಂದ ನಿವೃತ್ತಿ ಹೊಂದುತ್ತಿದ್ದಾರೆ.
ಡರ್ ಹ್ಯಾಮ್ ಕೌಂಟಿ ತಂಡದ ನಾಯಕರಾಗಿರುವ ಕಾಲಿಂಗ್ ವುಡ್ ಅವರು ಈ ಸೀಸನ್ ನಂತರ ನಿವೃತ್ತರಾಗುತ್ತಿದ್ದಾರೆ. ಕಾಲಿಂಗ್ ವುಡ್ ಅವರು 304 ಪ್ರಥಮ ದರ್ಜೆ ಪಂದ್ಯಗಳಿಂದ 16,891 ರನ್ ಹಾಗೂ 164 ವಿಕೆಟ್ ಗಳಿಸಿದ್ದಾರೆ.
1996ರಲ್ಲಿ ಚೊಚ್ಚಲ ಪಂದ್ಯವಾಡಿದ ಕಾಲಿಂಗ್ ವುಡ್ ಅವರು ಎಲ್ಲಾ ಮಾದರಿ ಪಂದ್ಯಗಳನ್ನು ಸೇರಿಸಿದರೆ 900ಕ್ಕೂ ಅಧಿಕ ಪಂದ್ಯಗಳನ್ನಾಡಿದ ಅನುಭವಿ.

42 ವರ್ಷ ವಯಸ್ಸಿನ್ ಕಾಲಿಂಗ್ ವುಡ್ ಅವರು ಈ ತಿಂಗಳ ಕೊನೆಗೆ ಮಿಡ್ಲ್ ಸೆಕ್ಸ್ ವಿರುದ್ಧ ಕೊನೆ ಕೌಂಟಿ ಚಾಂಪಿಯನ್ ಶಿಪ್ ಪಂದ್ಯವಾಡಲಿದ್ದಾರೆ. 2008, 2009 ಹಾಗೂ 2013ರಲ್ಲಿ ಡರ್ ಹ್ಯಾಮ್ ತಂಡವು ಚಾಂಪಿಯನ್ ಆಗಲು ನೆರವಾಗಿದ್ದರು.
ಇಂಗ್ಲೆಂಡ್ ಪರ 68 ಟೆಸ್ಟ್, 197 ಏಕದಿನ ಪಂದ್ಯ, 36 ಟ್ವೆಂಟಿ20 ಪಂದ್ಯಗಳನ್ನಾಡಿದ್ದು, 2010ರ ವಿಶ್ವ ಟ್ವೆಂಟಿ20 ಕಪ್ ಎತ್ತಲು ನೆರವಾಗಿದ್ದರು. ಈ ಮೂಲಕ ಮೊಟ್ಟ ಮೊದಲ ಐಸಿಸಿ ಟ್ರೋಫಿಯನ್ನು ಇಂಗ್ಲೆಂಡ್ ಗೆದ್ದುಕೊಂಡಿತ್ತು.
2006ರ ಆಷ್ಯಸ್ ಸರಣಿ ವೇಳೆ 206ರನ್ ಗಳಿಸಿದ ಕಾಲಿಂಗ್ ವುಡ್ ಅವರು 70 ವರ್ಷಗಳ ಹಳೆ ದಾಖಲೆ ಮುರಿದಿದ್ದರು. ಮೂರು ಬಾರಿ ಆಷ್ಯಸ್ ಇಂಗ್ಲೆಂಡ್ ಬಳಿ ಉಳಿಯುವಂತೆ ಮಾಡಿದ್ದರು.
23 ವರ್ಷಗಳ ಕಾಲ ಡರ್ ಹ್ಯಾಮ್ ಕೌಂಟಿ ಕ್ರಿಕೆಟ್ ಕ್ಲಬ್ ಪರ ಆಡಿದ ಗೌರವದೊಂದಿಗೆ ವಿದಾಯ ಹೇಳುತ್ತಿದ್ದೇನೆ. ಎಲ್ಲಾ ಸಿಬ್ಬಂದಿ, ಸಹ ಆಟಗಾರರು, ಕೋಚ್ ಗಳು, ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಕಾಲಿಂಗ್ ವುಡ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications