ಕೌಂಟಿ ಕ್ರಿಕೆಟ್‌ನಲ್ಲಿ ಮುಂದುವರಿಯಲು ಬಯಸಿದ ಅಲೆಸ್ಟರ್ ಕುಕ್

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಆಲೆಸ್ಟರ್ ಕುಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2018ರಲ್ಲಿ ವಿದಾಯವನ್ನು ಘೋಷಿಸಿದ್ದಾರೆ. ಭಾರತದ ವಿರುದ್ಧವೇ ನಡೆದ ಸರಣಿಯಲ್ಲಿ ಓವಲ್‌ನಲ್ಲಿ ನಡೆದ ಪಂದ್ಯ ಅಲೆಸ್ಟರ್ ಕುಕ್ ಅವರ ವಿದಾಯದ ಪಂದ್ಯವಾಗಿತ್ತು. ಅಂತಿಮ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅಲೆಸ್ಟರ್ ಕುಕ್ ಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. ಆ ಸರಣಿಯನ್ನು ಇಂಗ್ಲೆಂಡ್ 4-1 ಅಂತರದಿಂದ ಗೆದ್ದು ಕುಕ್ ವಿದಾಯವನ್ನು ಸ್ಮರಣೀಯವಾಗಿಸಿತ್ತು.
ಆದರೆ ಅಲೆಸ್ಟರ್ ಕುಕ್ ಅವರ ಕ್ರಿಕೆಟ್ ಬದುಕು ಅಲ್ಲಿಗೆ ಅಂತ್ಯವಾಗಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ನಂತರವೂ ಅವರು ಕೌಂಟಿ ಕ್ರಿಕೆಟ್‌ನಲ್ಲಿ ಮುಂದುವರಿಯುವ ನಿರ್ಧಾರ ಮಾಡಿ ಎಸ್ಸೆಕ್ಸ್ ಜೊತೆಗೆ ಮೂರು ವರ್ಷಗಳ ಒಪ್ಪಂದವನ್ನು ಮಾಡಿಕೊಂಡರು. 2019ರಲ್ಲಿ ಕೌಂಟಿ ಚಾಂಪಿಯನ್‌ಶಿಪ್ ಗೆದ್ದುಕೊಂಡಿದ್ದಲ್ಲದೆ, ಬಳಿಕ ಅದೇ ವರ್ಷ ಬಾಬ್ ವಿಲ್ಸ್ ಟ್ರೋಫಿ ಕೂಡ ಜಯಿಸಿದರು. ಆದರೆ ಈಗ ಕುಕ್ ಅವರ ಮೂರು ವರ್ಷಗಳ ಒಪ್ಪಂದ ಅಂತ್ಯವಾಗುವ ಸನಿಹದಲ್ಲಿದೆ.
ಆದರೆ ಹಿರಿಯ ಆಟಗಾರ ಕೌಂಟಿ ಕ್ರಿಕೆಟ್‌ನಲ್ಲಿ ಮತ್ತಷ್ಟು ಕಾಲ ಕ್ರಿಕೆಟ್ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. 36ರ ಹರೆಯದ ಅಲೆಸ್ಟರ್ ಕುಕ್ ನಾನು ಎದುರಿಸುತ್ತಿರುವ ಚೆಂಡುಗಳು ಇನ್ನು ಕೂಡ ಬ್ಯಾಟ್‌ನ ಉತ್ತಮ ಭಾಗಕ್ಕೆ ತಗುಲುತ್ತಿದ್ದು ಪ್ಯಾಡ್‌ಗಿಂತ ಹೆಚ್ಚಾಗಿ ಬ್ಯಾಟ್‌ನ ಮಧ್ಯ ಭಾಗಕ್ಕೆ ಸಂಪರ್ಕವಾಗುತ್ತಿದೆ. ಈ ಕಾರಣದಿಂದಾಗಿ ಎಸ್ಸೆಕ್ಸ್ ಜೊತೆಗೆ ಮತ್ತಷ್ಟು ಕಾಲ ಮುಂದುವರಿಯಲು ಬಯಸುವುದಾಗಿ ಹೇಳಿಕೊಂಡಿದ್ದಾರೆ.
"ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಪರೀಕ್ಷೆ ಹಾಗೂ ಒತ್ತಡಗಳು ಇಲ್ಲದೆ ನಾನು ಎಸ್ಸೆಕ್ಸ್‌ನಲ್ಲಿ ಇರುವುದನ್ನು ಆನಂದಿಸಿದ್ದೇನೆ" ಎಂದು ತಮ್ಮ ಅನುಭವವನ್ನು ಕುಕ್ ಹಂಚಿಕೊಂಡಿದ್ದಾರೆ. ನನಗೆ ಇನ್ನು ಕೂಡ ಎಸ್ಸೆಕ್ಸ್ ಕಡೆಯಿಂದ ಉತ್ತಮ ಬೆಂಬಲ ದೊರೆಯುತ್ತಿದೆ. ಪ್ಯಾಡ್‌ಗಿಂತಲೂ ಹೆಚ್ಚಿನದಾಗಿ ನಾನು ಇನ್ನು ಕೂಡ ಬ್ಯಾಟ್‌ನ ಮಧ್ಯ ಭಾಗದಿಂದ ಬಾರಿಸುತ್ತಿದ್ದೇನೆ. ನಾನು ಮುಂದುವರಿಯುತ್ತೇನೆ" ಎಂದು ಕುಕ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications