Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿ ಹೇಳಿಕೆಗೆ ಇಂಗ್ಲೆಂಡ್ ಮಾಜಿ ಕ್ರಿಕೆಟರ್ ಡೇವಿಡ್ ಲಾಯ್ಡ್ ಕಿಡಿ!

Former England cricketer David Lloyd slams Virat Kohli

ಪೂಣೆ: 'ಅಂಪೈರ್ಸ್ ಕಾಲ್' ನಿಯಮದ ವಿರುದ್ಧ ಹೇಳಿಕೆ ನೀಡಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ, ಮಾಜಿ ಕೋಚ್ ಮತ್ತು ಮಾಜಿ ಅಂಪೈರ್ ಡೇವಿಡ್ ಲಾಯ್ಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಥ ಹೇಳಿಕೆಗಳ ಮೂಲಕ ಕೊಹ್ಲಿ ಆನ್ ಫೀಲ್ಡ್ ಅಂಪೈರ್‌ಗೆ ಒತ್ತಡ ಉಂಟು ಮಾಡುತ್ತಿದ್ದಾರೆ, ಅವರಿಗೆ ಅಗೌರವ ತೋರುತ್ತಿದ್ದಾರೆ ಎಂದು ಲಾಯ್ಡ್ ದೂರಿದ್ದಾರೆ.

ಈಗ 72ರ ಹರೆಯದವರಾಗಿರುವ ಡೇವಿಡ್ ಲಾಯ್ಡ್ ಇಂಗ್ಲೆಂಡ್ ಪರ 9 ಟೆಸ್ಟ್ ಪಂದ್ಯಗಳಲ್ಲಿ 552 ರನ್, 1 ಶತಕ, 1 ದ್ವಿಶತಕ, 8 ಏಕದಿನ ಪಂದ್ಯಗಳಲ್ಲಿ 285 ರನ್, 1 ಶತಕದ ದಾಖಲೆ ಹೊಂದಿದ್ದಾರೆ. ಈಗ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆಂಗ್ಲರು ಅಂಪೈರ್‌ಗೆ ಒತ್ತಡ ಹಾಕಿರಲಿಲ್ಲ

ಆಂಗ್ಲರು ಅಂಪೈರ್‌ಗೆ ಒತ್ತಡ ಹಾಕಿರಲಿಲ್ಲ

'ನಾಲ್ಕನೇ ಟಿ20ಐ ಪಂದ್ಯದಲ್ಲಿ ಡೇವಿಡ್ ಮಲಾನ್ ಅವರು ಲೋ ಕ್ಯಾಚ್ ಪಡೆದಾಗ ಇಂಗ್ಲೆಂಡ್ ಆಟಗಾರರು ಸಾಫ್ಟ್‌ ಸಿಗ್ನಲ್ ನೀಡುವಂತೆ ಅಂಪೈರ್‌ಗೆ ಒತ್ತಡ ಹೇರುತ್ತಿದ್ದರು ಎಂಬಂತೆ ಕೊಹ್ಲಿ ಹೇಳಿಕೆ ನೀಡಿದ್ದರು. ಮೊದಲನೆಯದಾಗಿ, ಅಧಿಕೃತವಾಗಿ ತೀರ್ಮಾನಿಸಲು ಸಾಧ್ಯವಾಗದಾಗ ಅಂಥ ಸಂದರ್ಭದಲ್ಲಿ ಆನ್ ಫೀಲ್ಡ್ ಅಂಪೈರ್ ಅವರ ಸಾಫ್ಟ್‌ ಸಿಗ್ನರ್ ಅನ್ನು ಬಳಿಸಿಕೊಳ್ಳುವ ಇರಾದೆಯಿದೆ. ಅಹ್ಮದಾಬಾದ್‌ನಲ್ಲಿ ನಿತಿನ್ ಮೆನನ್ ಮೇಲೆ ಇಂಗ್ಲೆಂಡ್ ಆಟಗಾರರು ಒತ್ತಡ ಹೇರುತ್ತಿದ್ದರು ಎಂದು ನನಗನ್ನಸುತ್ತಿಲ್ಲ. ನನಗನ್ನಿಸುವಂತೆ ಈ ಪ್ರವಾಸದುದ್ದಕ್ಕೂ ಕೊಹ್ಲಿ ಅಂಪೈರ್‌ಗೆ ಒತ್ತಡ ಹೇರುತ್ತಿದ್ದಾರೆ, ಅಗೌರವ ತೋರುತ್ತಿದ್ದಾರೆ' ಎಂದು ಡೈಲಿಮೇಲ್‌ನಲ್ಲಿ ಲಾಯ್ಡ್ ಬರೆದಿದ್ದಾರೆ.

ಐಸಿಸಿ ಮೇಲೂ ಲಾಯ್ಡ್ ಗುಡುಗು

ಐಸಿಸಿ ಮೇಲೂ ಲಾಯ್ಡ್ ಗುಡುಗು

ಆಟಗಾರರ ನಡುವಿನ ಮೈದಾನದ ವಾಗ್ವಾದಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಲು ವಿಫಲವಾದ ಕಾರಣ ಲಾಯ್ಡ್ ಅವರು ಐಸಿಸಿಯ ಮೇಲೆಯೂ ಬೇಸರ ತೋರಿಕೊಂಡಿದ್ದಾರೆ. ಮಂಗಳವಾರವೂ (ಮಾರ್ಚ್ 23ರಂದು) ಇಂಥದ್ದೇ ಒಂದು ಘಟನೆ ನಡೆಯಿತು (ಕೃನಾಲ್ ಪಾಂಡ್ಯ vs ಟಾಮ್ ಕರನ್). ನೀವು ಮೈದಾನದಲ್ಲಿ ಪ್ರತಿಪಕ್ಷದ ಆಟಗಾರನನ್ನು ಎದುರಿಸಬಾರದು. ಆದರೆ ಈ ವಿಚಾರದಲ್ಲಿ ಐಸಿಸಿ ಬಾಯಿಯಿಲ್ಲದಂತೆ ವರ್ತಿಸುತ್ತಿದೆ ಎಂದು ಲಾಯ್ಡ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನೀಡಿದ್ದ ಹೇಳಿಕೆ

ವಿರಾಟ್ ಕೊಹ್ಲಿ ನೀಡಿದ್ದ ಹೇಳಿಕೆ

'ನನ್ನ ಪ್ರಕಾರ ಅಂಪೈರ್ಸ್ ಕಾಲ್ ಸಾಕಷ್ಟು ಗೊಂದಲಗಳನ್ನು ನಿರ್ಮಿಸುತ್ತಿದೆ. ನೀವೊಬ್ಬ ಬ್ಯಾಟ್ಸ್‌ಮನ್‌ ಅನ್ನು ಬೌಲ್ಡ್ ಮಾಡಿದಾಗ ನೀವು ಚೆಂಡು ಸ್ಟಂಪನ್ನು 50 ಶೇ.ಗಿಂತ ಹೆಚ್ಚು ತಾಗಿದೆ ಎಂದು ಪರಿಗಣಿಸಿದ ಬಳಿಕ ಅದನ್ನು ಔಟ್ ಎಂದು ತೀರ್ಮಾನಿಸುವುದಕ್ಕಾಗಲ್ಲ. ಕ್ರಿಕೆಟ್‌ನ ಮೂಲ ಜ್ಞಾನ ಇದ್ದಾಗ ಅದರಲ್ಲಿ ಯಾವುದೇ ಚರ್ಚೆ ಇರುತ್ತದೆ ಎಂದು ನನಗನ್ನಿಸುತ್ತಿಲ್ಲ. ಯಾಕೆಂದರೆ ಚೆಂಡು ಸ್ಟಂಪ್‌ಗೆ ಕೊಂಚ ತಾಗಿದರೂ ಔಟೇ,' ಎಂದು ಕೊಹ್ಲಿ ಈ ಮೊದಲು ಹೇಳಿಕೆ ನೀಡಿದ್ದರು. ಇದಕ್ಕೆ ಈಗ ಲಾಯ್ಡ್ ಪ್ರತಿಕ್ರಿಯಿಸಿದ್ದಾರೆ.

Story first published: Wednesday, March 24, 2021, 18:09 [IST]
Other articles published on Mar 24, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+