Eoin Morgan Retires : ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಇಂಗ್ಲೆಂಡ್ ಮಾಜಿ ನಾಯಕ ಇಯಾನ್ ಮೊರ್ಗನ್

2019ರ ಏಕದಿನ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕರಾಗಿದ್ದ ಇಯಾನ್ ಮೊರ್ಗನ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಫೆಬ್ರವರಿ 13 ರಂದು ಅವರು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ಟ್ವಿಟರ್ ನಲ್ಲಿ ಘೋಷಿಸಿದ್ದಾರೆ.
ಇಯಾನ್ ಮಾರ್ಗನ್ 2019ರಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಇಸಿದ್ದರು. ನಂತರ ವಿಶ್ವದ ವಿವಿಧ ಲೀಗ್‌ಗಳಲ್ಲಿ ಆಡಿದ್ದರು. ಭಾನುವಾರ ಮುಕ್ತಾಯವಾದ ದಕ್ಷಿಣ ಆಫ್ರಿಕಾದ ಎಸ್‌ಎ 20 ಲೀಗ್‌ನಲ್ಲಿ ಪರ್ಲ್ ರಾಯಲ್ಸ್ ಪರವಾಗಿ ಇಯಾನ್ ಮಾರ್ಗನ್ ಆಡಿದ್ದರು.
ಇಯಾನ್ ಮಾರ್ಗನ್ ಕ್ರಿಕೆಟ್ ವೃತ್ತಿಜೀವನವನ್ನು ಆರಂಭಿಸಿದ್ದು ಐರ್ಲೆಂಡ್ ದೇಶದ ಪರವಾಗಿ ಆದರೆ ನಂತರ ಇಂಗ್ಲೆಂಡ್ ತಂಡಕ್ಕೆ ಸೇರ್ಪಡೆಯಾಗಿದ್ದಲ್ಲದೆ ಇಂಗ್ಲೆಂಡ್ ವಿಶ್ವಕಪ್ ಬರವನ್ನು ನೀಗಿಸಿದರು. ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಹೊಂದಿದರೂ ಕ್ರಿಕೆಟ್ ನಂಟನ್ನು ಸಂಪೂರ್ಣವಾಗಿ ಬಿಡುವುದಿಲ್ಲ ಎಂದು ಮೊರ್ಗನ್ ಹೇಳಿದ್ದಾರೆ.
ಕಾಮೆಂಟೇಟರ್ ಆಗಿ, ಕ್ರಿಕೆಟ್ ಎಕ್ಸ್‌ಪರ್ಟ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ವಿಶ್ವದ ವಿವಿಧ ಲೀಗ್‌ಗಳಲ್ಲಿ ಭಾಗವಹಿಸುತ್ತೇನೆ ಎಂದು ಇಯಾನ್ ಮಾರ್ಗನ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ತಿಳಿಸಿದ್ದಾರೆ.

ಎಲ್ಲರಿಗೂ ಧನ್ಯವಾದ ತಿಳಿಸಿದ ಮೊರ್ಗನ್
2005ರಲ್ಲಿ ಮಿಡಲ್‌ಸೆಕ್ಸ್ ಪರವಾಗಿ ಆಡಲು ಆರಂಭಿಸಿದಾಗಿನಿಂದ ಇತ್ತೀಚೆಗೆ ಮುಕ್ತಾಯವಾದ ಎಸ್‌ಎ 20 ಟೂರ್ನಿಯಲ್ಲಿ ಪಾರ್ಲ್ ರಾಯಲ್ಸ್ ಪರವಾಗಿ ಆಡುವವರೆಗೂ ಸಾಕಷ್ಟು ಸ್ಮರಣೀಯ ಕ್ರಣಗಳಿವೆ ಎಂದು ಮೊರ್ಗನ್ ಹೇಳಿದ್ದಾರೆ.
ಕ್ರಿಕೆಟಿಗನಾಗಿ ನಾನು ವೃತ್ತಿಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದೇನೆ. ಎಲ್ಲಾ ವೇಳೆಯಲ್ಲಿ ನನಗೆ ಬೆಂಬಲಿಸಿದ ನನ್ನ ಹೆಂಡತಿ ತಾರಾ, ನನ್ನ ಕುಟುಂಬ, ನನ್ನ ಸ್ನೇಹಿತರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಮೊರ್ಗಾನ್ ಹೇಳಿದ್ದಾರೆ. ನನ್ನ ನಿವೃತ್ತಿಯ ನಂತರ ಹೆಚ್ಚಿನ ಸಮಯವನ್ನು ಕುಟುಂಬದ ಸದಸ್ಯರ ಜೊತೆ ಕಳೆಯುತ್ತೇನೆ ಎಂದು ಮೊರ್ಗನ್ ಹೇಳಿದ್ದಾರೆ.

ಮೊರ್ಗನ್ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದ ಇಂಗ್ಲೆಂಡ್
2019ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಮೊದಲ ಬಾರಿಗೆ ಇಯಾನ್ ಮೊರ್ಗನ್ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು. ತಂಡಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.
ವಿಶ್ವದ ವಿವಿಧ ಲೀಗ್‌ಗಳಲ್ಲಿ ಮೊರ್ಗನ್ ಆಡಿದ್ದಾರೆ ಐಪಿಎಲ್‌ನಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಕೂಡ ಆಡಿದ್ದಾರೆ. ಕೌಂಟಿ, ಬಿಗ್ ಬ್ಯಾಷ್ ಲೀಗ್, ಪಾಕಿಸ್ತಾನ ಸೂಪರ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications