4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಮಾನದಂಡ ಏನೆಂದು ಬಾಯ್ಬಿಟ್ಟ ಬಂಗಾರ್

ನವದೆಹಲಿ, ಸೆಪ್ಟೆಂಬರ್ 11: ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಸ್ಥಾನದಿಂದ ಕೆಳಗಿಳಿಸಲ್ಪಟ್ಟ ನಂತರ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಕೋಚ್ ಸಂಜಯ್ ಬಂಗಾರ್, ಭಾರತ ತಂಡ ನಿರ್ವಹಣಾ ಸಮಿತಿಯು 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಮಾನದಂಡವನ್ನಿಟ್ಟಿರುವ ಬಗ್ಗೆ ತುಟಿ ಬಿಚ್ಚಿದ್ದಾರೆ.
ನೂತನ ಬ್ಯಾಟಿಂಗ್ ಕೋಚ್ ಆಗಿ ವಿಕ್ರಮ್ ರಾತೋರ್ ಜವಾಬ್ದಾರಿ ವಹಿಸಿಕೊಳ್ಳುವುದಕ್ಕೂ ಮುನ್ನ ತಂಡಕ್ಕೆ ಮಾರ್ಗದರ್ಶಕರಾಗಿದ್ದ ಬಂಗಾರ್, ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಸೋತಾಗ ಕ್ರಿಕೆಟ್ ಪರಿಣಿತರ ಕೋಪಕ್ಕೆ ಗುರಿಯಾಗಿದ್ದರು. ಏಕದಿನದಲ್ಲಿ ಭಾರತದ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಸ್ಥಿರ ಆಟಗಾರ ಇಲ್ಲದಿದ್ದುದು ಮುನಿಸಿಗೆ ಕಾರಣವಾಗಿತ್ತು.
ತಂಡವೊಂದರಲ್ಲಿ 4ನೇ ಬ್ಯಾಟಿಂಗ್ ಕ್ರಮಾಂಕ ತುಂಬಾ ಪ್ರಮುಖವಾದುದು. ಪಂದ್ಯದ ಗತಿ ತಿರುಗಿಸಬಲ್ಲ ಶಕ್ತಿ ಆ ಬ್ಯಾಟಿಂಗ್ ಕ್ರಮಾಂಕದಲ್ಲಿನ ಆಟಗಾರನಿರುತ್ತದೆ. ಹೀಗಾಗಿ 4ನೇ ಕ್ರಮಾಂಕಕ್ಕೆ ಸ್ಥಿರ ಬ್ಯಾಟ್ಸ್‌ಮನ್ ಕಂಡುಕೊಳ್ಳುವ ಬಗ್ಗೆ ತಂಡ ಸಮಿತಿ ಗಂಭೀರವಾಗಿ ಯೋಚಿಸುತ್ತಿದೆ.

ಅದೃಷ್ಟ ಪರೀಕ್ಷಿಸಿದ್ದ ರಾಹುಲ್
ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ ಕ್ರಿಕೆಟ್ 2019ರಲ್ಲಿ ಭಾರತದಿಂದ ಕೆಎಲ್ ರಾಹುಲ್ 4ನೇ ಕ್ರಮಾಂಕದಲ್ಲಿ ಇಳಿದಿದ್ದರು. ಆದರೆ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಗಾಯಗೊಂಡಿದ್ದರಿಂದ ರಾಹುಲ್, ಟಾಪ್ ಬ್ಯಾಟಿಂಗ್ ಆರ್ಡರ್‌ನತ್ತ ಸ್ಥಾನ ಬದಲಿಸಿದ್ದರು.

ರಿಷಬ್ ಪಂತ್‌ಗೂ ಅವಕಾಶ
ರಾಹುಲ್ ಬಳಿಕ 4ನೇ ಕ್ರಮಾಂಕಕ್ಕೆ ಆಲ್ ರೌಂಡರ್ ವಿಜಯ್ ಶಂಕರ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಶಂಕರ್ ಉತ್ತಮ ಪ್ರದರ್ಶನ ತೋರಲಿಲ್ಲ, ಆ ಕ್ರಮಾಂಕದಲ್ಲಿ ನೆಲೆಯೂರುವಂತ ಪ್ರಭಾವವೇನೂ ಬೀರಿರಲಿಲ್ಲ. ಹೀಗಾಗಿವಿಶ್ವಕಪ್ ಟೂರ್ನಿಯ ಕೊನೇ ಕ್ಷಣದಲ್ಲಿ ರಿಷಬ್ ಪಂತ್ ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು.

4ನೇ ಕ್ರಮಾಂಕಕ್ಕೆ ಮಾನದಂಡ
ಕ್ರಿಕ್‌ಬಝ್ ಜೊತೆ ಮಾತನಾಡಿದ ಬಂಗಾರ್, 'ಇಡೀ ತಂಡ ನಿರ್ವಹಣಾ ಸಮಿತಿ 4ನೇ ಬ್ಯಾಟಿಂಗ್ ಕ್ರಮಾಂಕ ನಿರ್ಧರಿಸುವಲ್ಲಿ ಪಾತ್ರವಹಿಸುತ್ತದೆ. ಆತ ಲೆಫ್ಟ್ ಹ್ಯಾಂಡರ್ ಆಗಿರಲಿ, ಆಲ್ ರೌಂಡರ್ ಆಗಿರಲಿ ಆಟಗಾರನ ಸದ್ಯದ ಫಾರ್ಮ್, ಫಿಟ್ನೆಸ್ ಮಾನದಂಡವಾಗಿಸಿ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಆಯ್ಕೆ ನಡೆಯುತ್ತದೆ,' ಎಂದು ವಿವರಿಸಿದರು.

ಕೂಡಲೇ ಕೆಲಸಕ್ಕೆ ಸೇರಲಾರೆ
ಐದು ವರ್ಷಗಳ ಕಾಲ ಟೀಮ್ ಇಂಡಿಯಾಕ್ಕೆ ಬ್ಯಾಟಿಂಗ್ ಕೋಚ್ ಆಗಿದ್ದ ಬಂಗಾರ್ ಮಾತು ಮುಂದುವರೆಸಿ, '5 ವರ್ಷಗಳ ಕಾಲ ವಿದೇಶದಲ್ಲಿರುವುದಕ್ಕಾಗಿ ನಾನು ಪ್ರಯಾಣಿಸುವುದರಲ್ಲಿದ್ದೇನೆ. ಆದರೆ ವಿದೇಶದಲ್ಲಿ ಈ ಕೂಡಲೇ ಕೋಚ್ ಆಗಿ ಕೆಲಸಕ್ಕೆ ಸೇರಲಿದ್ದೇನೆ ಎಂದು ನನಗನ್ನಿಸುತ್ತಿಲ್ಲ,' ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications