Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಪಿಲ್‌ ದೇವ್ ಆಲ್‌ ಟೈಮ್ ಒಡಿಐ XIನಲ್ಲಿ ಪ್ರಮುಖ ಆಟಗಾರನಿಲ್ಲ!

Former India Captain Kapil Dev picked his all-time ODI XI

ನವದೆಹಲಿ: ಭಾರತ ಕ್ರಿಕೆಟ್ ತಂಡ 1983ರಲ್ಲಿ ಚೊಚ್ಚಲ ವಿಶ್ವಕಪ್‌ ಟ್ರೋಫಿ ಗೆದ್ದು ಮಿನುಗಿದ್ದಾಗ ತಂಡದ ನಾಯಕರಾಗಿದ್ದ ಕಪಿಲ್‌ ದೇವ್ ಏಕದಿನ ಕ್ರಿಕೆಟ್‌ನಲ್ಲಿ ತನ್ನ ನೆಚ್ಚಿನ ಸಾರ್ವಕಾಲಿಕ ಭಾರತ ತಂಡ ಪ್ರಕಟಿಸಿದ್ದಾರೆ. ಇದರಲ್ಲಿ ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ ಒಬ್ಬರ ಹೆಸರಿಲ್ಲ.

ಕಪಿಲ್‌ ದೇವ್ ಪ್ರಕಟಿಸಿರುವ ಆಲ್ ಟೈಮ್ ಒಡಿಐ XIನಲ್ಲಿ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್, ಜಸ್‌ಪ್ರೀತ್‌ ಬೂಮ್ರಾ ಇಂಥ ಪ್ರಮುಖ ಆಟಗಾರರಿದ್ದಾರೆ. ಆದರೆ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹೆಸರಿಲ್ಲ. ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಇಲ್ಲ.

ಏಕದಿನ ಕ್ರಿಕೆಟ್‌ನಲ್ಲಿ ವೈಯಕ್ತಿಕ ಅತ್ಯಧಿಕ ರನ್ ವಿಶ್ವದಾಖಲೆಯಿರುವುದು ರೋಹಿತ್ ಶರ್ಮಾ ಹೆಸರಿನಲ್ಲಿ. 264 ರನ್ ಬಾರಿಸಿರುವ ರೋಹಿತ್ ಈ ದಾಖಲೆ ನಿರ್ಮಿಸಿದ್ದರು. ಜೊತೆಗೆ ಏಕದಿನದಲ್ಲಿ 29 ಶತಕ, 3 ದ್ವಿಶತಕ ಮತ್ತು 43 ಅರ್ಧ ಶತಕಗಳ ದಾಖಲೆ ಶರ್ಮಾ ಹೆಸರಿನಲ್ಲಿದೆ. ಆದರೂ ಕಪಿಲ್, ತನ್ನ ನೆಚ್ಚಿನ ಏಕದಿನ ತಂಡದಲ್ಲಿ ರೋಹಿತ್ ಪರಿಗಣಿಸಿಲ್ಲ.

ಕಪಿಲ್‌ದೇವ್ ನೆಚ್ಚಿನ ಸಾರ್ವಕಾಲಿಕ ಭಾರತ ಏಕದಿನ ತಂಡ
ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್, ಎಂ.ಎಸ್. ಧೋನಿ, ಜಾವಗಲ್ ಶ್ರೀನಾಥ್, ಜಹೀರ್ ಖಾನ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಜಸ್ಪ್ರೀತ್ ಬೂಮ್ರಾ (ಬಹುಶಃ ಧೋನಿ ತಂಡದ ನಾಯಕ).

Story first published: Wednesday, November 25, 2020, 11:53 [IST]
Other articles published on Nov 25, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+