ಗಿಲ್ ಮಾಡಿದ ತಪ್ಪಿಗೆ ರವಿ ಶಾಸ್ತ್ರಿ ಅಸಮಾಧಾನ
ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ವಿಕೆಟ್ ಪಡೆಯಲು ಪರದಾಟ ನಡೆಸಿದರು. ಈ ವೇಳೆ ನೂತನ ನಾಯಕ ಮಾಡಿದ ತಪ್ಪುಗಳನ್ನು ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ಎತ್ತಿ ತೋರಿಸಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ಎಡವಿದ್ದು ಎಲ್ಲಿ ಎಂಬ ಬಗ್ಗೆ ತಿಳಿಸಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನ ಟೀಮ್ ಇಂಡಿಯಾ ಕೇವಲ ಐದು ವಿಕೆಟ್‌ಗಳನ್ನು ಪಡೆಯುವಲ್ಲಿ ಮಾತ್ರ ಸಫಲವಾಗಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಈಗಾಗಲೇ ಭಾರೀ ಮುನ್ನಡೆ ಸಾಧಿಸಿದ್ದು, ಬೃಹತ್ ಮುನ್ನಡೆಯತ್ತ ದಾಪುಗಾಲು ಇಟ್ಟಿದೆ. ಮೂರನೇ ದಿನದಾಟದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ವಿಕೆಟ್ ಪಡೆಯುವಲ್ಲಿ ಪರದಾಟ ನಡೆಸಿದ್ದಾರೆ. ಈ ವೇಳೆ ರವಿ ಶಾಸ್ತ್ರಿ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಎಡವಿದ್ದು ಎಲ್ಲಿ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ರವಿ ಶಾಸ್ತ್ರಿ ಅವರು ಗಿಲ್ ತಮ್ಮ ಬೌಲರ್‌ಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ದೂರಿದ್ದಾರೆ. ಇವರು ಈ ಬಗ್ಗೆ ಮಾತನಾಡುತ್ತಾ ಗಿಲ್ ತಮ್ಮ ವೇಗದ ಬೌಲರ್‌ಗಳ ಮೇಲೆ ಹೆಚ್ಚಿನ ಗಮನ ಹರಿಸಿದರು. ಆದರೆ ಸ್ಪಿನ್ ಬೌಲರ್‌ಗಳತ್ತ ಗಮನ ಹರಿಸಲಿಲ್ಲ. ಕಳೆದ ಪಂದ್ಯದಲ್ಲಿ ಭಾರತದ ಪರ ನಾಲ್ಕು ವಿಕೆಟ್ ಕಬಳಿಸಿದ್ದ ಸ್ಪಿನ್ ಬೌಲರ್ ವಾಷಿಂಗ್ಟನ್ ಸುಂದರ್ ಅವರಿಗೆ ತಡವಾಗಿ ಬೌಲಿಂಗ್‌ಗೆ ತಂದ್ರು. ನಾಯಕನಾಗಿ ಸ್ಪಿನ್ ಬೌಲರ್‌ಗಳ ಮೇಲೂ ಭರವಸೆ ಈಡಬೇಕಾಗುತ್ತದೆ. ಅವರು ಸಹ ಜವಾಬ್ದಾರಿಯನ್ನು ಹೊರಲು ಸಿದ್ಧರಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ರವಿ ಶಾಸ್ತ್ರಿ ಹೇಳಿದ್ದೇನು?
ಮುಂದೆ ಮಾತನಾಡಿರುವ ರವಿ ಶಾಸ್ತ್ರಿ, ನಾಯಕ ಗಿಲ್ ಸ್ಪಿನ್ ಬೌಲರ್‌ಗಳಿಗೆ ದೊಡ್ಡ ಸ್ಪೆಲ್ ನೀಡಲೇ ಇಲ್ಲ. ಚಿಕ್ಕ ಚಿಕ್ಕ ಸ್ಪೆಲ್‌ಗಳಲ್ಲಿ ಬೌಲಿಂಗ್ ಮಾಡಿಸಿದರು. ಇದರ ಬದಲಿಗೆ ಅವರ ಮೇಲೂ ಹೆಚ್ಚಿನ ನಂಬಿಕೆ ಇಟ್ಟಿದರೆ ಒಳ್ಳೆಯದಿತ್ತು. ವಾಷಿಂಗ್ಟನ್ ಸುಂದರ್ ಮೂರನೇ ದಿನದಾಟದ ಎರಡನೇ ಅವಧಿಯಲ್ಲಿ ಬೌಲಿಂಗ್ ಮಾಡಲು ಬಂದರು. ಇವರು ಒಲಿ ಪೋಪ್‌ಗೆ ಖೆಡ್ಡಾ ತೋಡಿ ಮಿಂಚಿದರು ಇವರಿಗೆ ಮೊದಲೇ ತರಬೇಕಿತ್ತು ಎಂದು ಶಾಸ್ತ್ರಿ ತಿಳಿಸಿದ್ದಾರೆ.

ಇನ್ನು ಟೀಮ್ ಇಂಡಿಯಾದ ದಿನದಾಟಾದ ಆರಂಭವನ್ನು ಉತ್ತಮವಾಗಿ ಮಾಡಿತು. ನಮ್ಮ ಬೌಲರ್‌ಗಳು ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಬ್ಯಾಟರ್‌ಗಳಿಗೆ ಉತ್ತಮ ಪಿಚ್‌ನಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಎಂಬ ಬಗ್ಗೆ ಅರಿವಿದ್ದ ಬೌಲರ್ಸ್ ಮೊದಲ ಒಂದು ಗಂಟೆಯಲ್ಲಿ ಉತ್ತಮ ಬೌಲಿಂಗ್ ನಡೆಸಿದ್ದಾರೆ ಎಂದು ಶಾಸ್ತ್ರು ಹೇಳಿದ್ದಾರೆ.
ನಾಲ್ಕನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 544 ರನ್ ಸೇರಿಸಿದೆ. ಅಲ್ಲದೆ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 186 ರನ್‌ಗಳ ಮುನ್ನಡೆ ಸಾಧಿಸಿದೆ. ಬೆನ್ ಸ್ಟೋಕ್ಸ್ (ಅಜೇಯ 77) ಹಾಗೂ ಲಿಯಾಮ್ ಡಾಸನ್ (ಅಜೇಯ 21) ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications