Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ಚೇತನ್ ಶರ್ಮಾ ಆಯ್ಕೆ

Former India fast bowler Chetan Sharma appointed BCCI chairman of selectors

ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥನಾಗಿ ಆಯ್ಕೆಯಾಗಿದ್ದಾರೆ. ಮದನ್‌ಲಾಲ್ ನೇತೃತ್ವದ ಕ್ರಿಕೆಟ್ ಅಡ್ವೈಸರಿ ಕಮಿಟಿ(ಸಿಎಸಿ) ಈ ಆಯ್ಕೆಯನ್ನು ಮಾಡಿದೆ. ಸಿಎಸಿ ಅಭ್ಯರ್ಥಿಗಳನ್ನು ವರ್ಚುವಲ್ ಭೇಟಿಯಾಗಿ ಆಲ್‌ಇಂಡಿಯಾ ಸೀನಿಯರ್ ಸೆಲೆಕ್ಷನ್ ಕಮಿಟಿಯ ಮೂವರು ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ಈವರೆಗೆ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಕರ್ನಾಟಕ ಮಾಜಿ ಸ್ಪಿನ್ನರ್ ಸುನಿಲ್ ಜೋಶಿ ಕರ್ತವ್ಯದಲ್ಲಿದ್ದರು. ಈಗ ಅವರ ಸ್ಥಾನವನ್ನು ಚೇತನ್ ಶರ್ಮಾ ವಹಿಸಿಕೊಳ್ಳಲಿದ್ದಾರೆ. ಚೇತನ್ ಶರ್ಮಾ ಟೀಮ್ ಇಂಡಿಯಾ ವನ್ನು 23 ಟೆಸ್ಟ್ ಪಂದ್ಯಗಳಲ್ಲಿ ಹಾಗೂ 65 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಚೇತನ್ ಶರ್ಮಾ ಜೊತೆಗೆ ದೆಬಾಶಿಶ್ ಮೊಹಾಂತಿ ಹಾಗೂ ಅಭಯ್ ಕುರುವಿಲ್ಲ ಕೂಡ ಆಯ್ಕೆ ಸಮಿತಿಗೆ ಸೇರ್ಪಡೆಗೊಂಡಿದ್ದಾರೆ.

"ಮೊದಲಿಗೆ ಚೇತನ್ ಶರ್ಮಾ ಅವರನ್ನು ಆಯ್ಕೆ ಸಮಿತಿಯ ಪ್ಯಾನಲ್‌ಗೆ ಆಯ್ಕೆ ಮಾಡಲಾಯಿತು. ಬಳಿಕ ಟೆಸ್ಟ್ ತಂಡದಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಿದ ಆಧಾರದಲ್ಲಿ ಸೀನಿಯರ್ ಎಂದು ಪರಿಗಣಿಸಿ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ನೇಮಿಸಲಾಗಿದೆ. ಸಿಎಸಿ ಒಂದು ವರ್ಷದ ಅವಧಿಯ ನಂತರ ಅಭ್ಯರ್ಥಿಗಳನ್ನು ಪರಾಮರ್ಶಿಸಿ ಬಳಿಕ ಬಿಸಿಸಿಐಗೆ ಶಿಫಾರಸ್ಸಿ ಮಾಡಲಿದೆ" ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಆಯ್ಕೆ ಸಮಿತಿಯಲ್ಲಿ ಸುನಿಲ್ ಜೋಷಿ ಹಾಗೂ ಹರ್ವಿಂದರ್ ಸಿಂಗ್ ಸದಸ್ಯರಾಗಿ ಮುಂದುವರಿಯಲಿದ್ದು ಅವರೊಂದಿಗೆ ಹೊಸ ಸದಸ್ಯರು ಸೇರ್ಪಡೆಗೊಳ್ಳಲಿದ್ದಾರೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸ್ಥಾನಕ್ಕಾಗಿ ಬಿಸಿಸಿಐ ಒಟ್ಟು 11 ಆಟಗಾರರನ್ನು ಅಂತಿಮಹಂತಕ್ಕೆ ಆಯ್ಕೆ ಮಾಡಿತ್ತು.

ಪಶ್ಚಿಮ ವಲಯದಿಂದ ಅಜಿತ್ ಅಗರ್ಕರ್, ಅಬೆ ಕುರುವಿಲ್ಲಾ ಮತ್ತು ನಯಾನ್ ಮೊಂಗಿಯಾ ಅರ್ಜಿ ಸಲ್ಲಿಸಿದ್ದರೆ, ಚೇತನ್ ಶರ್ಮಾ, ಮನಿಂದರ್ ಸಿಂಗ್, ವಿಜಯ್ ದಹಿಯಾ, ಅಜಯ್ ರಾತ್ರಾ ಮತ್ತು ನಿಖಿಲ್ ಚೋಪ್ರಾ ಅವರು ಉತ್ತರ ವಲಯದಿಂದ ಅರ್ಜಿ ಸಲ್ಲಿಸಿದ್ದರು ಮತ್ತು ಶಿವ ಸುಂದರ್ ದಾಸ್, ದೇಬಾಶಿಶ್ ಮೊಹಂತಿ ಮತ್ತು ರಣದೇಬ್ ಬೋಸ್ ಪೂರ್ವದಿಂದ ಅರ್ಜಿ ಸಲ್ಲಿಸಿದ್ದರು.

Story first published: Thursday, December 24, 2020, 22:16 [IST]
Other articles published on Dec 24, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+