ಲಂಕಾ ಪ್ರೀಮಿಯರ್ ಲೀಗ್‌ನ 'ಕ್ಯಾಂಡಿ' ಸೇರಿದ ಇರ್ಫಾನ್ ಪಠಾಣ್

ಕೊಲಂಬೊ: ಶ್ರೀಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ತಾನು ಕ್ಯಾಂಡಿ ಟಸ್ಕರ್ಸ್ ಫ್ರಾಂಚೈಸಿ ಪರ ಆಡುವುದಾಗಿ ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಹೇಳಿದ್ದಾರೆ. ಕ್ಯಾಂಡಿ ಮೂಲದ ಕ್ಯಾಂಡಿ ಟಸ್ಕರ್ಸ್ ಫ್ರಾಂಚೈಸಿಯಲ್ಲಿ ಲಂಕಾ ಮಾಜಿ ನಾಯಕ ಹಶನ್ ತಿಲಕರತ್ನೆ ಕೂಡ ಕೋಚಿಂಗ್ ಸಿಬ್ಬಂದಿ ವಿಭಾಗದಲ್ಲಿದ್ದಾರೆ.
ಕ್ಯಾಂಡಿ ತಂಡದಲ್ಲಿ ವೆಸ್ಟ್ ಇಂಡೀಸ್ ದಂತಕತೆ ಕ್ರಿಸ್ ಗೇಲ್, ಲಂಕಾ ಸ್ಟಾರ್ ಕುಸಾಲ್ ಪೆರೆರಾ, ಟಿ20 ಪರಿಣಿತ ಕುಸಾಲ್ ಮೆಂಡಿಸ್, ನುವಾನ್ ಪ್ರದೀಪ್ ಮತ್ತು ಇಂಗ್ಲೆಂಡ್ ಬಲಗೈ ವೇಗದ ಬೌಲರ್ ಲಿಯಾಮ್ ಪ್ಲಂಕೆಟ್ ಕೂಡ ಆಡುತ್ತಿದ್ದಾರೆ.
36ರ ಹರೆಯದ ಇರ್ಫಾನ್ ಪಠಾಣ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ಪರ ಪಠಾಣ್ 29 ಟೆಸ್ಟ್ ಪಂದ್ಯಗಳು, 120 ಏಕದಿನ ಪಂದ್ಯಗಳು ಮತ್ತು 24 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇನ್ನು ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊಳ್ಳುವತ್ತ ಪಠಾಣ್ ಯೋಚಿಸುತ್ತಿದ್ದಾರೆ.
'ಎಲ್‌ಪಿಎಲ್‌ನಲ್ಲಿ ಪಾಲ್ಗೊಳ್ಳಲು ನಾನು ಬಹಳ ಉತ್ಸುಕನಾಗಿದ್ದೇನೆ. ನಮ್ಮ ತಂಡದಲ್ಲಿ ಅದ್ಭುತ ಆಟಗಾರರ ಹೆಸರುಗಳಿವೆ. ಈ ಹೊಸ ಅನುಭವಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ,' ಎಂದು ಬರೋಡಾ ಮೂಲದ ಪಠಾಣ್ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications