ರಿಷಭ್ ಪಂತ್, ವೃದ್ಧಿಮಾನ್ ಸಾಹ ಮಧ್ಯೆ ಬೆಸ್ಟ್ ವಿಕೆಟ್ ಕೀಪರ್ ಹೆಕ್ಕಿದ ಅಜಯ್ ರಾತ್ರ

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಬದಲಿಗೆ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡಿದ್ದಾಗಿನಿಂದಲೂ ಕೀಪಿಂಗ್ ವಿಚಾರದಲ್ಲಿ ಇಬ್ಬರಲ್ಲಿ ಯಾರು ಶ್ರೇಷ್ಠ ಎನ್ನುವ ಮಾತುಕತೆ ನಡೆಯುತ್ತಲೇ ಇದೆ.
ಕೆಲ ಕ್ರಿಕೆಟ್ ಪಂಡಿತರು ವೃದ್ಧಿಮಾನ್ ಸಾಹ ಕಡೆ ವಾಲಿದರೆ ಇನ್ನು ಕೆಲವರು ರಿಷಭ್ ಪಂತ್‌ಗೆ ಅವಕಾಶ ನೀಡೋದೇ ಒಳ್ಳೇದು ಎಂದು ಅಭಿಪ್ರಾಯಿಸಿದ್ದರು. ಅಸಲಿ ಸಂಗತಿಯೆಂದರೆ ಪಂತ್ ವಿಕೆಟ್ ಕೀಪಿಂಗ್ ವಿಚಾರದಲ್ಲಿ ಬೆಳೆಯುತ್ತಿದ್ದಾರೆ. ಬ್ಯಾಟಿಂಗ್ ವಿಚಾರದಲ್ಲಂತೂ ಪಂತ್ ಬೆಸ್ಟ್ ಅನ್ನೋದಕ್ಕೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯೇ ಸಾಕ್ಷಿ ಹೇಳುತ್ತದೆ.
ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಅಜಯ್ ರಾತ್ರ ಕೂಡ ವಿಕೆಟ್ ಕೀಪಿಂಗ್ ವಿಚಾರದಲ್ಲಿ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ. 2021ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮಾರ್ಗದರ್ಶಕರಾಗಿ ಪಂತ್ ಜೊತೆ ಕೆಲಸ ಮಾಡಿದ ಅನುಭವ ಹೊಂದಿರುವ ಅಜಯ್ ಸ್ಪೋರ್ಟ್ಸ್‌ಕೀಡಾ ಜೊತೆಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ನನಗೆ ಹೆಚ್ಚಿನ ಹೋಲಿಕೆಗಳಲ್ಲಿ ನಂಬಿಕೆಯಿಲ್ಲ. ಇಬ್ಬರೂ ಉತ್ತಮ ಆಟಗಾರರೆ. ವಿಭಿನ್ನ ಶೈಲಿಯ ವಿಚಾರದಲ್ಲಿ ಇಬ್ಬರೂ ಬಲಿಷ್ಠ ಆಟಗಾರರೇ. ವೃದ್ಧಿಮಾನ್ ಸಾಹ ಹೆಚ್ಚು ಸಾಂಪ್ರದಾಯಿಕ ಆಟಗಾರ. ಅದೆ ರಿಷಭ್ ಪಂತ್ ಅವರು ವೀರೇಂದ್ರ ಸೆಹ್ವಾಗ್ ರೀತಿ ಬಿಂದಾಸ್ ಆಟಗಾರ,' ಎಂದು ರಾತ್ರ ಹೇಳಿದ್ದಾರೆ. ಪಂತ್ ಒಳ್ಳೆಯ ಆಯ್ಕೆ ಎಂಬರ್ಥದಲ್ಲಿ ರಾತ್ರ ಮಾತನಾಡಿದ್ದಾರೆ.
ಮಾತು ಮುಂದುವರೆಸಿದ ರಾತ್ರ, 'ಇಬ್ಬರಿಗೂ ವಿಭಿನ್ನ ಶೈಲಿಯಿದೆ. ಸಾಹ ಹೆಚ್ಚು ಅನುಭವಿ ಆಟಗಾರ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಪಂತ್ ಕೂಡ ಕೀಪಿಂಗ್‌ನಲ್ಲಿ ಸುಧಾರಿಸುತ್ತಿದ್ದಾರೆ. ಮುಖ್ಯವಾಗಿ ಬ್ಯಾಟಿಂಗ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಇದರರ್ಥ ಸಾಹ ತಾನು ಒಳ್ಳೆಯ ಬ್ಯಾಟ್ಸ್‌ಮನ್ ಅನ್ನೋದನ್ನು ಯಾರಿಗೂ ಸಾಭೀತುಪಡಿಸಬೇಕಾಗಿಲ್ಲ,' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications