For Quick Alerts
ALLOW NOTIFICATIONS  
For Daily Alerts
 

KL Rahul: ಕೆಎಲ್‌ಗೆ 'ರಾಹು' ಕಾಟ: ಕನ್ನಡಿಗನ ಬಗ್ಗೆ ಆಕಶ್‌ ಚೋಪ್ರಾ ಹೇಳಿದ್ದೇನು?

ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಸರಣಿಯ ಎರಡನೇ ಪಂದ್ಯ ಫೆಬ್ರವರಿ 2 ರಿಂದ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಆದರೆ ಇದಕ್ಕೂ ಮುನ್ನ ಇನ್ ಫಾರ್ಮ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗಾಯಗೊಂಡು ಪಂದ್ಯದಿಂದ ಹೊರಗುಳಿದಿದ್ದು, ಭಾರತ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.

ಕೆಎಲ್ ರಾಹುಲ್ ಅವರ ಬಲ ರ್ಭುಜಕ್ಕೆ ಗಾಯವಾಗಿದೆ. ಇದೀಗ ರಾಹುಲ್ ಗಾಯದ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕಳವಳ ವ್ಯಕ್ತಪಡಿಸಿದ್ದಾರೆ. ಕೆಎಲ್ ರಾಹುಲ್‌ಗೆ ದುರಾದೃಷ್ಟವಂತ ಆಟಗಾರ ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ. ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ ಅವರ ಜಾತಕದಲ್ಲಿ ರಾಹುವನ್ನು ಇರಿಸಲಾಗುತ್ತದೆ. ಆಗ ಏನೋ ತಪ್ಪಾಗುತ್ತಿದೆ ಎಂದು ಹೇಳಿದ್ದಾರೆ.

Former Indian cricketer Aakash Chopra considers injuries as the biggest thorn of KL Rahuls career

ರಾಹುಲ್ ಬಗ್ಗೆ ಚೋಪ್ರಾ ಹೇಳಿದ್ದೇನು?

ಕನ್ನಡಿಗ ರಾಹುಲ್‌ ಅವರಿಗೆ ಯಾವುದೋ ಒಂದು ಕಾಟ ಬೆನ್ನು ಬಿದ್ದಿದೆ. ಅವನ ಜಾತಕದಲ್ಲಿ ರಾಹು ಇದ್ದಾನೆ ಎಂದು ನಾನು ಭಾವಿಸುತ್ತೇನೆ. ಆಟಗಾರ ಒಳ್ಳೆಯ ದಿಕ್ಕಿನಲ್ಲಿ ಸಾಗಲು ಪ್ರಾರಂಭಿಸುತ್ತಿದ್ದಂತೆ, ಸಹೋದರನಿಗೆ ಏನಾದರೂ ಸಂಭವಿಸುತ್ತದೆ. ಅದೇ ವಿಷಯ ಮತ್ತೆ ಮತ್ತೆ ಸಂಭವಿಸುತ್ತದೆ ಎಂದು ತಿಳಿಸಿದ್ದಾರೆ.

ಕೆಎಲ್ ರಾಹುಲ್ ತಮ್ಮ ದಶಕದ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಹಲವು ಗಾಯಗಳನ್ನು ಅನುಭವಿಸಬೇಕಾಯಿತು. ಈ ಬಗ್ಗೆ ಆಕಾಶ್ ಚೋಪ್ರಾ, "ಕೆಎಲ್ ರಾಹುಲ್ ಅವರ ವೃತ್ತಿಜೀವನದಲ್ಲಿ ಅನೇಕ ಬಾರಿ ಗಾಯಗಳು ಅಥವಾ ಅನಾರೋಗ್ಯ ಬಹುವಾಗಿ ಕಾಡಿದೆ. ಇವುಗಳು ಹಲವು ಬಾರಿ ಅವರ ಕ್ರಿಕೆಟ್‌ಗೆ ಪೆಟ್ಟು ನೀಡಿವೆ. ಎಲ್ಲವೂ ಸರಿಯಾಗಿದೆ ಎಂದು ತೋರುತ್ತಿರುವಾಗ ಗಾಯವು ರಾಹುಲ್‌ ಅವರಿಗೆ ಕಾಟ ನೀಡಿದೆ ಎಂದಿದ್ದಾರೆ.

Former Indian cricketer Aakash Chopra considers injuries as the biggest thorn of KL Rahuls career

ಮೊದಲು ಡೆಂಗ್ಯೂ, ನಂತರ ಕೋವಿಡ್ ಬಂದಿತು ಎಂದು ರಾಹುಲ್ ಅವರ ಆರೋಗ್ಯದ ಸ್ಥಿತಿಯನ್ನು ಆಕಾಶ್ ಚೋಪ್ರಾ ಅವಲೋಕಿಸಿದ್ದಾರೆ.

ಭರ್ಜರಿ ಕಮ್‌ಬ್ಯಾಕ್ ಮಾಡಿದ್ದ ರಾಹುಲ್

ಕಳೆದ ವರ್ಷ ಐಪಿಎಲ್ ವೇಳೆ ಗಾಯಗೊಂಡಿದ್ದ ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಬ್ಬರದ ಮೂಲಕ ಕಮ್‌ಬ್ಯಾಕ್‌ ಮಾಡಿದ್ದಾರೆ. ಸುಮಾರು ಆರು ತಿಂಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದ ರಾಹುಲ್ ಏಷ್ಯಾಕಪ್‌ನಲ್ಲಿ ಮರಳಿದ್ದರು. ಅಂದಿನಿಂದ ರಾಹುಲ್ ತಮ್ಮ ಸ್ಫೋಟಕ ಪ್ರದರ್ಶನದಿಂದ ಎಲ್ಲರ ಮನ ಗೆದ್ದಿದ್ದರು. ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ನಂತರ, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಇದೇ ಕಾರಣಕ್ಕೆ ರಾಹುಲ್ ಗಾಯಗೊಂಡಿರುವುದು ಭಾರತ ತಂಡಕ್ಕೆ ದೊಡ್ಡ ಹೊಡೆತ ಎಂದು ಪರಿಗಣಿಸಲಾಗಿದೆ.

ಮೊದಲ ಟೆಸ್ಟ್‌ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದರು. ಇವರು ಮೊದಲ ಇನ್ನಿಂಗ್ಸ್‌ನಲ್ಲಿ 123 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 86 ರನ್ ಬಾರಿಸಿ ಟೀಮ್ ಇಂಡಿಯಾ ಇನ್ನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೈದರಾಬಾದ್‌ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲೂ ರಾಹುಲ್‌ ಭರ್ಜರಿಯಾಗಿ ಆಡುವ ಸೂಚನೆ ನೀಡಿದ್ದರು. ಆದರೆ ಜೋ ರೂಟ್‌ ಎಸೆತವನ್ನು ತಪ್ಪಾಗಿ ಅರ್ಥಹಿಸಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.

Story first published: Wednesday, January 31, 2024, 12:49 [IST]
Other articles published on Jan 31, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+