Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮತದಾನದ ಹಕ್ಕು ಚಲಾಯಿಸಿದ ಕುಂಬ್ಳೆ, ವೋಟ್‌ ಮಾಡಿದ ಕ್ರಿಕೆಟಿಗರೆಷ್ಟು?

Anil Kumble poses for photograph after casting his vote in Bengaluru South

ಬೆಂಗಳೂರು, ಏಪ್ರಿಲ್‌ 18: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಅನಿಲ್‌ ಕುಂಬ್ಳೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ, ಇತರರಿಗೂ ಮತದಾನ ಮಾಡುವಂತೆ ಪ್ರೇರೇಪಿಸಿ ಟ್ವೀಟ್‌ ಮಾಡಿದ್ದಾರೆ.

ಟೀಮ್‌ ಇಂಡಿಯಾದ ಮಾಜಿ ಕೋಚ್‌ ಜಂಬೊ ಖ್ಯಾತಿಯ ಅನಿಲ್‌ ಕುಂಬ್ಳೆ, ಗುರುವಾರ ಬೆಳಗ್ಗೆ 11ರ ಸುಮಾರಿಗೆ ಬೆಂಗಳೂರು ದಕ್ಷಿಣದಲ್ಲಿ ತಮ್ಮ ಮತ ಚಲಾಯಿಸಿ, ಬೆರಳಿಗೆ ಗುರುತು ಹಾಕಿಸಿಕೊಂಡಿರುವ ಫೋಟೊದೊಂದಿಗೆ, "ನಾನು ವೋಟ್‌ ಮಾಡಿದ್ದೇನೆ, ನೀವು ಮಾಡಿದ್ದೀರಾ?'' ಎಂದು ಟ್ವೀಟ್‌ ಮಾಡಿ ಮತದಾನದ ಕುರಿತಾಗಿ ಜಾಗೃತಿ ಮೂಡಿಸಿದ್ದಾರೆ.

Anil Kumble poses for photograph after casting his vote in Bengaluru South

ಮತ್ತೊಂದೆಡೆ ಕುಂಬ್ಳೆ ಸಮಕಾಲೀನರಾದ 'ದಿ ವಾಲ್‌' ಖ್ಯಾತಿಯ ರಾಹುಲ್‌ ದ್ರಾವಿಡ್‌ ಅವರಿಗೆ ಈ ಬಾರಿ ಮತದಾನದ ಭಾಗ್ಯ ಇಲ್ಲವಾಗಿದೆ. ತಮ್ಮ ನಿವಾಸ ಬದಲಾಯಿಸಿದ ಬಳಿಕ ಮತದಾರರ ಪಟ್ಟಿಗೆ ಹೆಸರು ಸೇರಿಸಲು ತೆಗೆದುಕೊಳ್ಳಬೇಕಿದ್ದಅಗತ್ಯದ ಕ್ರಮಗಳನ್ನುತೆಗೆದುಕೊಳ್ಳದ ಕಾರಣ ದ್ರಾವಿಡ್‌ ಈ ಬಾರಿ ವೋಟ್‌ ಮಾಡದೇ ಇರುವಂತಾಗಿದೆ. ಮತದಾನದ ಕುರಿತಾಗಿ ಜಾಗೃತಿ ಮೂಡಿಸಿದ ದ್ರಾವಿಡ್‌ ಅವರೇ ವೋಟ್‌ ಮಾಡದಂತಾಗಿರುವುದು ವಿಪಯರ್ಯಾಸವೇ ಸರಿ.

ಇನ್ನು ಐಪಿಎಲ್‌ನಲ್ಲಿ ಆಡುತ್ತಿರುವ ರಾಜ್ಯದ ಬಹುತೇಕ ಆಟಗಾರರು ಕೂಡ ಮತದಾನದಿಂದ ವಂಚಿತರಾಗಿದ್ದಾರೆ. ವಿವಿಧ ಫ್ರಾಂಚೈಸಿ ತಂಡಗಳ ಪರ ವಿವಿಧ ನಗರಗಳಲ್ಲಿ ಪಂದ್ಯಗಳನ್ನು ಆಡುತ್ತಿರುವ ಕಾರಣ, ಆಟಗಾರರಿಗೆ ತಮ್ಮ ತವರಿಗೆ ಹಿಂದಿರುಗಿ ಮತ ಚಲಾಯಿಸಲು ಸಾಧ್ಯವಾಗಿಲ್ಲ.

ಮನಸ್ಸು ಮಾಡಿದ್ದರೆ ವೋಟ್‌ ಮಾಡಬಹುದಿತ್ತು

ಗುರುವಾರ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಮುಂಬಯಿ ಇಂಡಿಯನ್ಸ್‌ ನಡುವಣ ಪಂದ್ಯವಿದ್ದು, ಕನ್ನಡಿಗೆ ಜೆ. ಸುಚಿತ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿದ್ದಾರೆ. ಹೀಗಾಗಿ ಸುಚಿತ್‌ ಹೊರತಾಗಿ ವಿವಿಧ ಫ್ರಾಂಚೈಸಿಗಳಲ್ಲಿರುವ ಆಟಗಾರರು ವೋಟ್‌ ಮಾಡುವ ಸಲುವಾಗಿ ಕೊಂಚ ಶ್ರಮ ವಹಿಸಿ ಮನೆಗೆ ಹಿಂದಿರುಗಬಹುದಿತ್ತು. ಆದರೆ, ಯಾವ ಆಟಗಾರರು ಈ ಸವಾಲು ಸ್ವೀಕರಿಸಿದಂತಿಲ್ಲ.

Story first published: Thursday, April 18, 2019, 16:50 [IST]
Other articles published on Apr 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+