ಕುಲ್‌ದೀಪ್‌ಗೆ ತಂಡದಲ್ಲಿ ಸ್ಥಾನ ಲಭಿಸಿದ ಬಗ್ಗೆ ಅಶ್ವಿನ್ ಬೇಸರ
ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಬಗ್ಗೆ ಹಲವು ಜನ ಅಸಾಮಾಧಾನ ಹೊರ ಹಾಕಿದ್ದಾರೆ. ಈಗ ಈ ಸಾಲಿಗೆ ಟೀಮ್ ಇಂಡಿಯಾದ ಮಾಜಿ ದಿಗ್ಗಜ ಆಟಗಾರ ರವಿಚಂದ್ರನ್ ಅಶ್ವಿನ್ ಸಹ ಸೇರಿದ್ದಾರೆ.
ಅಶ್ವಿನ್ ಇಂಗ್ಲೆಂಡ್ ಪ್ರವಾಸದಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಕುಲ್‌ದೀಪ್ ಯಾದವ್ ಅವರಿಗೆ ಅವಕಾಶ ನೀಡದೇ ಇರುವ ಬಗ್ಗೆ ಪ್ರಶ್ನೆಗಳು ಎದ್ದಿವೆ. ಅಶ್ವಿನ್ ಸಹ ಇವರಿಗೆ ಏಕೆ ಅವಕಾಶ ನೀಡಲಿಲ್ಲ ಎಂದು ಕಿಡಿಕಾರಿದ್ದಾರೆ. ಟೀಮ್ ಇಂಡಿಯಾ ತನ್ನ ಬ್ಯಾಟಿಂಗ್ ಲೈನ್ ಅಪ್ ಬಲ ಪಡಿಸಿಕೊಳ್ಳುವ ಭರದಲ್ಲಿ ಬೌಲಿಂಗ್ ವಿಭಾಗವನ್ನು ಕಡೆಗಣಿಸಿದಂತೆ ಕಂಡು ಬರುತ್ತಿದೆ. 20, 30 ರನ್ ಹೆಚ್ಚಿಸಿಕೊಳ್ಳುವ ಭರದಲ್ಲಿ ಟೀಮ್ ಇಂಡಿಯಾ ತಪ್ಪು ಮಾಡಿದೆ. ಈ ರನ್‌ಗಳನ್ನು ನೋಡುವ ಭರದಲ್ಲಿ ಬೌಲಿಂಗ್ ಬೌಲಿಂಗ್ ವಿಭಾಗಕ್ಕೆ ಪೆಟ್ಟು ಬಿದ್ದಿತು ಎಂದು ತಮ್ಮ ಯೂಟ್ಯೂಬ್ ಚಾನೆಲ್‌ಗೆ ತಿಳಿಸಿದ್ದಾರೆ.

ಭಾರತದ 7ನೇ ಹಾಗೂ 8ನೇ ಕ್ರಮಾಂಕದ ಆಟಗಾರರು ತಲಾ 30 ರನ್ ಕಾಣಿಕೆ ನೀಡಿದ್ದರೆ ಸಹಾಯವಾಗುತ್ತಿತ್ತು. ಕುಲ್‌ದೀಪ್ ಯಾದವ್ ತಂಡಕ್ಕೆ ಸೇರಿಸಿಕೊಂಡಿದ್ದರೆ ಅನುಕೂಲವಾಗುತ್ತಿತ್ತು. ಅಲ್ಲದೆ ಬೌಲರ್‌ಗಳಿಗೆ ಪಿಚ್ ಸಹಾಯ ನೀಡುತಿತ್ತು. ಈ ಸುವರ್ಣ ಅವಕಾಶವನ್ನು ಟೀಮ್ ಇಂಡಿಯಾ ಮಿಸ್ ಮಾಡಿದೆ. ಕುಲ್‌ದೀಪ್ ಯಾದವ್ ಆಡಿದ್ದರೆ 5 ವಿಕೆಟ್‌ಗಳನ್ನು ಪಡೆಯುತ್ತಿದ್ದರು ಎಂದು ನಾನು ಹೇಳಲಾರೆ, ಆದರೆ ಅವರು ಪರಿಣಾಮಕಾರಿ ಆಗುತ್ತಿದ್ದರು ಎಂಬುದನ್ನು ಹೇಳಬಹುದಾಗಿದೆ.
ಕುಲ್‌ದೀಪ್ ಏಕೆ ಆಡಬೇಕಿತ್ತು?
ಕುಲ್‌ದೀಪ್ ಯಾದವ್ ಆಡಿದ್ದರೆ, ಬ್ಯಾಟರ್‌ಗಳಿಗೆ ಕಾಟ ನೀಡಬಹುದಾಗಿತ್ತು. ಕುಲ್‌ದೀಪ್ ಯಾದವ್ ಫ್ಲ್ಯಾಟ್ ಪಿಚ್‌ಗಳಲ್ಲಿ ಅಮೋಘ ಬೌಲಿಂಗ್ ನಡೆಸಿದ್ದರು. ಕಳೆದ ವರ್ಷ ಭಾರತದಲ್ಲಿ ಇದೇ ರೀತಿಯ ವಿಕೆಟ್‌ಗಳು ಇದ್ದವು. ಇಂತಹ ಪಿಚ್‌ಗಳಲ್ಲಿ ಕುಲ್ದೀಪ್ ಚೆನ್ನಾಗಿ ಬೌಲಿಂಗ್ ಮಾಡಿದ್ದರು. ಇವರು ತಂಡದಲ್ಲಿ ಇದ್ದಿದ್ದರೆ ಬ್ಯಾಟರ್‌ಗಳಿಗೆ ಭಯ ಇರುತ್ತಿತ್ತು. ಇವರ ಎಸೆತಗಳನ್ನು ಎದುರಿಸುವುದು ಬ್ಯಾಟರ್‌ಗಳಿಗೆ ಕಠಿಣವಾಗಿತ್ತು. ಇವರ ಎಸೆತಗಳನ್ನು ಗುರುತಿಸುವುದು ಬ್ಯಾಟರ್‌ಗಳಿಗೆ ಕಠಿಣವಾಗುತ್ತಿತ್ತು. ಇವರನ್ನು ಬಳಸಿಕೊಳ್ಳುವಲ್ಲಿ ಭಾರತ ವಿಫಲವಾಗಿದೆ ಎಂದು ಅಶ್ವಿನ್ ದೂರಿದ್ದಾರೆ.

ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಒತ್ತಡದಲ್ಲಿದೆ. ಹೀಗಾಗಿ ಕುಲ್‌ದೀಪ್ ಯಾದವ್ ಆಡಿದ್ದರೆ ಉತ್ತಮ ಇರುತ್ತಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಪಂದ್ಯದಲ್ಲಿ ಭಾರತ ಜಯ ಸಾಧಿಸಿದಲ್ಲಿ ಸರಣಿ ಗೆಲುವಿನ ಆಸೆ ಜೀವಂತವಾಗಿರುತ್ತದೆ. ಆಂಡರ್ಸರ್, ತೆಂಡುಲ್ಕರ್ ಸರಣಿಯಲ್ಲಿ ಈಗಾಗಲೇ ಮೂರು ಪಂದ್ಯಗಳನ್ನು ಆಡಲಾಗಿದ್ದು, ಆತಿಥೇಯ ತಂಡ 2-1 ರಿಂದ ಮುನ್ನಡೆ ಸಾಧಿಸಿದೆ. ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ಗೆದ್ದು ಟೀಮ್ ಇಂಡಿಯಾ ಪುಟಿದೇಳುವ ಕನಸು ಕಾಣುತ್ತಿದೆ. ಹೀಗಾಗಿ ಈ ಪಂದ್ಯ ಗಿಲ್ ಪಡೆಗೆ ಮುಖ್ಯವಾಗಿದೆ. ಈ ಪಂದ್ಯದ ಮಹತ್ವವನ್ನು ಅರಿತು ಟೀಮ್ ಮ್ಯಾನೇಜ್ಮೆಂಟ್ ಜಸ್ಪ್ರೀತ್ ಬುಮ್ರಾ ಅವರನ್ನು ಸಹ ಈ ಟೆಸ್ಟ್‌ನಲ್ಲಿ ಕಣಕ್ಕೆ ಇಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications