Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ರಾಜೀನಾಮೆ ವದಂತಿ: ವರದಿ ತಳ್ಳಿ ಹಾಕಿದ ಜಯ್ ಶಾ

Former Indian Cricketer Sourav Ganguly resigns as BCCI president
ಕ್ರಿಕೆಟ್ ಲೋಕಕ್ಕೆ ಗುಡ್ ಬೈ ಹೇಳಿದ ಗಂಗೂಲಿ | Oneindia Kannada

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಇಂದು (ಜೂನ್ 1) ಸೌರವ್ ಗಂಗೂಲಿ ಬಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವದಂತಿ ಹಬ್ಬಿದೆ. ಆದರೆ ಈ ಸುದ್ದಿಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಳ್ಳಿ ಹಾಕಿದ್ದಾರೆ. ಸೌರವ್ ಗಂಗೂಲಿ ರಾಜೀನಾಮೆ ಸುದ್ದಿ ಕೇವಲ ವದಂತಿ ಎಂದಿದ್ದಾರೆ ಎಂದು ಜಯ್ ಶಾ ಹೇಳಿಕೆಯನ್ನು ಎಎನ್‌ಐ ವರದಿ ಮಾಡಿದೆ.

ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು 30 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಟ್ವೀಟ್‌ವೊಂದನ್ನು ಮಾಡಿದ್ದು ಇದರಲ್ಲಿ ತಾನು ಹೊಸದಾಗಿ ಯೋಜನೆಯೊಂದನ್ನು ಹಾಕಿಕೊಳ್ಳುತ್ತಿದ್ದು ಇದರಿಂದಾಗಿ ಹೆಚ್ಚಿನ ಜನರಿಗೆ ನೆರವಾಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ 2019ರ ಏಕದಿನ ವಿಶ್ವಕಪ್‌ನ ಬಳಿಕ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರಿದ್ದರು. 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಅವರ ಮೂರು ವರ್ಷಗಳ ಅಧಿಕಾರಾವಧಿ ಅಂತ್ಯವಾಗಲಿದೆ. ಆದರೆ ಅದಕ್ಕೂ ಮುನ್ನವೇ ಸೌರವ್ ಗಂಗೂಲಿ ರಾಜೀನಾಮೆ ನೀಡುವ ಸುದ್ದಿ ಹರಿದಾಡಿದೆ

ನಿಗೂಢಾರ್ಥದ ಟ್ವೀಟ್ ಮಾಡಿರುವ ಗಂಗೂಲಿ: ಸೌರವ್ ಗಂಗೂಲಿ ಬುಧವಾರ ಸಂಜೆ ಟ್ವೀಟ್‌ವೊಂದನ್ನು ಮಾಡಿದ್ದು ಇದರಲ್ಲಿ ನೇರವಾಗಿ ತಾನು ರಾಜೀನಾಮೆ ನೀಡಿದ್ದೇನೆ ಎಂದು ಎಲ್ಲೂ ಉಲ್ಲೇಖಿಸಿಲ್ಲ. ಹೀಗಾಗಿ ಈ ಬಗ್ಗೆ ಕುತೂಹಲ ಮೂಡಿಸಿದೆ.

"1992ರಲ್ಲಿ ಕ್ರಿಕೆಟ್ ಬದುಕು ಆರಂಭಿಸಿರುವ ನಾನು 2022ರಲ್ಲಿ 30 ವರ್ಷಗಳನ್ನು ಪೂರೈಸಿದ್ದೇನೆ. ಅಂದಿನಿಂದಲೂ ನನಗೆ ಕ್ರಿಕೆಟ್ ಸಾಕಷ್ಟು ನೀಡಿದೆ. ಅದೆಲ್ಲದಕ್ಕಿಂತ ಹೆಚ್ಚಿನದಾಗಿ ನಿಮ್ಮೆಲ್ಲರಿಂದ ನನಗೆ ಬೆಂಬಲವನ್ನು ನೀಡಿದೆ. ನನ್ನ ಈ ಪ್ರಯಾಣದಲ್ಲಿ ಭಾಗಿಯಾಗಿರುವ, ಬೆಂಬಲಿಸಿರುವ, ಈ ಸ್ಥಾನಕ್ಕೇರಲು ನನಗೆ ಸಹಾಯ ಮಾಡಿರುವ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಸಲ್ಲಿಸುತ್ತಿದ್ದೇನೆ. ಇಂದು ನಾನು ಹೊಸ ಯೋಜನೆಯೊಂದನ್ನು ಹಾಕಿಕೊಳ್ಳುತ್ತಿದ್ದು ಇದರಿಂದಾಗಿ ಸಾಕಷ್ಟು ಜನರಿಗೆ ನೆರವಾಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಈ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ ಸೌರವ್ ಗಂಗೂಲಿ.

Story first published: Thursday, June 2, 2022, 9:37 [IST]
Other articles published on Jun 2, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+