Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ilyas Pasha Passed Away: ಕರ್ನಾಟಕದ ಸ್ಟಾರ್ ಫುಟ್ಬಾಲ್ ಆಟಗಾರ ನಿಧನ

ಭಾರತದ ಮಾಜಿ ಫುಟ್ಬಾಲ್ ಆಟಗಾರ ಇಲ್ಯಾಸ್ ಪಾಷಾ ನಿಧನರಾಗಿದ್ದಾರೆ. ಇವರು 1990 ರ ದಶಕದಲ್ಲಿ ಈಸ್ಟ್ ಬೆಂಗಾಲ್ ಪರ ಆಡಿದ್ದ ಇವರು ಹಲವು ಸ್ಮರಣೀಯ ಪಂದ್ಯಗಳನ್ನು ಆಡಿದ್ದಾರೆ. ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಇಲ್ಯಾಸ್ ಪಾಷಾ ಗುರುವಾರ (ಜನವರಿ 22) ನಿಧನರಾಗಿದ್ದಾರೆ.

ಪಾಷಾ ಅವರು ತಮ್ಮ ಫುಟ್ಬಾಲ್‌ ವೃತ್ತಿಯನ್ನು ಬೆಂಗಳೂರಿನಿಂದ ಆರಂಭಿಸಿದರು. ಇವರು ನಗರದ ವೈಯಾಲಿ ಕಾವಲ್‌ನಲ್ಲಿರುವ ವಿನಾಯಕ್ ಫುಟ್ನಾಲ್ ಕ್ಲಬ್‌ ಪರ ಆಡಿ ಸೈ ಎನಿಸಿಕೊಂಡಿದ್ದರು. ಪಾಷಾ ಅವರು ತಮ್ಮ ಅಮೋಘ ಕಾಲ್ಚಳಕದ ಮೂಲಕವೇ ಹೆಸರು ಮಾಡಿದ್ದ ಆಟಗಾರ. ಇವರ ರಕ್ಷಣಾ ಆಟಕ್ಕೆ ಅಭಿಮಾನಿಗಳು ಮನಸೋತಿದ್ದರು. ಇವರು ಭಾರತ ತಂಡವನ್ನು 1987 ಪ್ರತಿನಿಧಿಸಿದರು.

Former Indian Footballer Ilyas Pasha Passes Away A Tribute to the Legendary Defender

ಪಾಷಾ ಅವರು 1990ರಲ್ಲಿ ಮೊಹಮ್ಮದನ್ ಸ್ಪೋರ್ಟಿಂಗ್‌ನಿಂದ ಸೇರಿ ಮಿಂಚು ಹರಿಸಿದರು. ಇವರು 17ನೇ ಜೆರ್ಸಿಯನ್ನು ತೊಟ್ಟು ಕಣಕ್ಕೆ ಇಳಿಯುತ್ತಿದ್ದರು. ಇವರು ರೈಟ್‌ ವಿಂಗ್‌ಗೆ ಬಲ ತುಂಬಿದ್ದ ಆಟಗಾರ. ದಶಕಗಳ ಕಾಲ ಇವರು ಈಸ್ಟ್ ಬಂಗಾಳ ತಂಡದ ರಕ್ಷಣಾ ವಿಭಾಗದ ಸ್ಟಾರ್ ಆಟಗಾರ ಎಂದೇ ಗುರುತಿಸಲಾಗಿತ್ತು.

ಪಾಷಾ ಒಬ್ಬ ಉತ್ತಮ ರಕ್ಷಣಾ ಆಟಗಾರ ಅಷ್ಟೇ ಅಲ್ಲ ಬೆಸ್ಟ್ ನಾಯಕ ಸಹ ಆಗಿದ್ದರು. ಇವರ ನಾಯಕತ್ವದಲ್ಲಿ ಈಸ್ಟ್ ಬೆಂಗಾಲ್ ತಂಡವು 1993ರಲ್ಲಿ ವಿನ್ನರ್ಸ್ ಕಪ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಇವರ ಮುಂದಾಳತ್ವದ ತಂಡ 6-2 ಅಂತರದಿಂದ ಇರಾಕ್‌ನ ಅಲ್-ಜವ್ರಾ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಇದೇ ವರ್ಷ ತಂಡ ನೇಪಾಳದಲ್ಲಿ ನಡೆದಿದ್ದ ವೈ-ವೈ ಟ್ರೋಫಿಯನ್ನು ಸಹ ಗೆದ್ದಿತ್ತು.

ಪಾಷಾ ಸಾಧನೆ

ಪಾಷಾ ಅವರ ನಾಯಕತ್ವದಲ್ಲಿ ತಂಡ ಹಲವು ಪ್ರಶಸ್ತಿಗಳನ್ನು ಗೆದ್ದು ಬೀಗಿದೆ. ಇದರಲ್ಲಿ ಐದು ಕಲ್ಕತ್ತಾ ಲೀಗ್ ಪ್ರಶಸ್ತಿ, ನಾಲ್ಕು ಡ್ಯುರಾಂಡ್ ಕಪ್‌, ಐದು ಶೀಲ್ಡ್‌ಗಳು, ಎರಡು ರೋವರ್ಸ್ ಕಪ್‌, ನಾಲ್ಕು ಏರ್‌ಲೈನ್ಸ್ ಗೋಲ್ಡ್ ಕಪ್‌, ಫೆಡರೇಶನ್ ಕಪ್, ಬೋರ್ಡೊಲಾಯ್ ಟ್ರೋಫಿ, ಸೂಪರ್ ಕಪ್, ಮೆಕ್‌ಡೊವೆಲ್ ಕಪ್, ಎಸ್‌ಎಸ್‌ಎಸ್ ಟ್ರೋಫಿ ಸೇರಿದಂತೆ ಹಲವು ಪ್ರತಿಷ್ಠಿತ ಟೂರ್ನಿಗಳನ್ನು ಗೆದ್ದು ಬೀಗಿದೆ.

ಇಲ್ಯಾಸ್ ಪಾಷಾ ಅವರ ಸಾಧನೆಯನ್ನು ಈಸ್ಟ್ ಬೆಂಗಾಲ್ ತಂಡ ಹಲವು ಬಾರಿ ಸ್ಮರಿಸಿ ಗೌರವಿಸಿದೆ. 2012ರಲ್ಲಿ ನಡೆದಿದ್ದ ಕ್ಲಬ್‌ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಅಲ್ಲದೆ 2019ರಲ್ಲೂ ಮಾಜಿ ನಾಯಕರೊಂದಿಗೆ ಇವರಿಗೆ ಕ್ಲಬ್‌ ಗೌರವಿಸಿತ್ತು. ಭಾರತೀಯ ಫುಟ್‌ಬಾಲ್‌ನ ದಂತಕಥೆಯಾಗಿದ್ದ ಪಾಷಾ ಅವರ ನಿಧನಕ್ಕೆ ಎಐಎಫ್‌ಎಫ್ ಸಹ ಸಂತಾಪ ಸೂಚಿಸಿತು.

Story first published: Thursday, January 22, 2026, 20:18 [IST]
Other articles published on Jan 22, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+