Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಾರಾಟಕ್ಕಿದೆ ಐಪಿಎಲ್ ಚಾಂಪಿಯನ್ ಆರ್‌ಸಿಬಿ, ಕನ್ನಡಿಗರ ನೆಚ್ಚಿನ ತಂಡದ ಕುರಿತು ಬಾಂಬ್ ಸಿಡಿಸಿದ ಮೋದಿ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಅತ್ಯಂತ ಹೆಸರಾಂತ ತಂಡಗಳಲ್ಲಿ ಆರ್‌ಸಿಬಿ ತಂಡವೂ ಒಂದು. ಈ ತಂಡಕ್ಕೆ ದೇಶ ಹಾಗೂ ವಿದೇಶದಲ್ಲೂ ಅಭಿಮಾನಿಗಳ ಬಳಗವೇ ಇದೆ. ಕಳೆದ 17 ವರ್ಷಗಳಿಂದ ಕಪ್‌ ಗೆಲ್ಲದೇ ನಿರಾಸೆಯನ್ನು ಅನುಭವಿಸಿದ್ದ ಆರ್‌ಸಿಬಿ, 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ಮೂಲಕ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿತ್ತು. ಆದರೆ ಈ ಖುಷಿ ಹೆಚ್ಚು ಹೊತ್ತು ಅಭಿಮಾನಿಗಳ ಮನಸ್ಸಿನಲ್ಲಿ ಇರಲಿಲ್ಲ. ಜೂನ್ 4 ರಂದು ನಡೆದ ಕಪ್‌ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತ ಸಂಭವಿಸಿ 11 ಅಭಿಮಾನಿಗಳು ಸಾವನ್ನಪ್ಪಿದ್ದರು. ಇದು ಆರ್‌ಸಿಬಿಗೆ ಕಪ್ಪು ಚುಕ್ಕೆ ಇಟ್ಟಂತೆ ಆಗಿತ್ತು. ಇದರಿಂದ ಬೇಸತ್ತ ಆರ್‌ಸಿಬಿ ತಂಡವನ್ನು ಮಾರಾಟ ಮಾಡಲಿದೆ ಎಂಬ ಚರ್ಚೆಗಳು ಆರಂಭವಾಗಿದ್ದವು.

ಆರ್‌ಸಿಬಿ ತಂಡ ಮಾರಾಟಕ್ಕಿದೆ ಎಂಬ ಸುದ್ದಿ ಸಾಮಾಜಿಕ ತಾಣದಲ್ಲಿ ವ್ಯಾಪಕವಾಗಿ ಹಬ್ಬಿತು. ಆದರೆ ಈ ಸುದ್ದಿಯ ಬಗ್ಗೆ ಸ್ಪಷ್ಟತೆ ನೀಡಿರುವ ಆರ್‌ಸಿಬಿ ಮ್ಯಾನೇಜ್ಮೆಂಟ್‌ ಅಂತಹ ಯಾವುದೇ ಯೋಚನೆ ಇಲ್ಲ ಎಂದು ಸ್ಪಷ್ಟ ಪಡಿಸಿತ್ತು. ಆದರೆ ಈಗ ಮತ್ತೆ ಆರ್‌ಸಿಬಿ ತಂಡ ಮಾರಾಟಕ್ಕಿದೆ ಎಂಬ ಸುದ್ದಿ ಬಹುವಾಗಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

Former IPL Chief Lalit Modi Fuels Speculation Is Royal Challengers Bangalore RCB Up for Sale

ಈ ಬಗ್ಗೆ ಐಪಿಎಲ್‌ ಮಾಜಿ ಅಧ್ಯಕ್ಷ ಲಲಿತ್ ಮೋದಿ ಸಾಮಾಜಿಕ ತಾಣದಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ ಈಗ ಸಖತ್ ವೈರಲ್ ಆಗುತ್ತಿದೆ. ಐಪಿಎಲ್‌ನ ಒಂದು ತಂಡ ಮಾರಾಟಕ್ಕಿರುವುದಾಗಿ ಮಾತುಗಳು ಕೇಳಿ ಬರುತ್ತಿವೆ. ಆರ್‌ಸಿಬಿ ತಂಡ ಮಾರಾಟಕ್ಕಿದೆ ಎಂಬ ಚರ್ಚೆಗಳು ಆರಂಭವಾಗಿವೆ. ಇನ್ನ ಆರ್‌ಸಿಬಿ ಮ್ಯಾನೇಜ್ಮೆಂಟ್‌ ತಮ್ಮ ಬ್ಯಾಲೆನ್ಸ್ ಶೀಟ್‌ನಿಂದ ತೆಗೆದು, ತಂಡವನ್ನು ಮಾರಾಟ ಮಾಡಲಿದೆ ಎಂದು ಲಲಿತ್ ಮೋದಿ ತಿಳಿಸಿದ್ದರು.

ಮಾರಾಟಕ್ಕಿದೆ ಆರ್‌ಸಿಬಿ

ವಿಶ್ವದಲ್ಲೇ ಅತಿ ಹೆಚ್ಚು ಅಭಿಮಾನಿಗಳ ಬಳಗವನ್ನು ಹೊಂದಿರುವ ಆರ್‌ಸಿಬಿ, ಕಳೆದ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ತಂಡ ನಿಜಕ್ಕೂ ಒಳ್ಳೆಯ ಟೀಮ್ ಮ್ಯಾನೇಜ್ಮೆಂಟ್‌ ಹೊಂದಿದೆ. ಇನ್ನು ವಿಶ್ವದಲ್ಲೇ ಹಣವಂತರು ಈ ತಂಡವನ್ನು ಖರೀದಿಸುತ್ತಾರೆ ಎಂಬ ನಂಬಿಕೆ ಅಚಲವಾಗಿದೆ. ಅವರಿಗೆ ಇದಕ್ಕಿಂತ ಉತ್ತಮ ಸ್ಥಳದಲ್ಲಿ ಹಣ ಹೂಡಲು ಸಿಗುವಿದಿಲ್ಲ. ಇನ್ನು ಈ ತಂಡ ಮಾರಾಟವಾದಲ್ಲಿ ಹೊಸ ದಾಖಲೆಯನ್ನು ಬರೆಯಲಿದೆ ಎಂದು ಮೋದಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Former IPL Chief Lalit Modi Fuels Speculation Is Royal Challengers Bangalore RCB Up for Sale

ಆದರೆ ಇಂತಹದ್ದೆ ಸುದ್ದಿ ಕಳೆದ ಕೆಲವು ತಿಂಗಳುಗಳ ಹಿಂದೆ ಬಂದಾಗ ಆರ್‌ಸಿಬಿಯ ಮಾಲಿಕತ್ವವನ್ನು ಹೊಂದಿರುವ ಡಿಯಾಜಿಯೊ ಕಂಪನಿ ನಿರಾಕರಿಸಿತ್ತು. ಈಗ ಲಲಿತ್ ಮೋದಿ ಈ ಬಗ್ಗೆ ಹೇಳಿರುವುದು ಚರ್ಚೆಗೆ ಗ್ರಾಸ ಮಾಡಿದೆ. ಈ ಬಗ್ಗೆ ಮೋದಿ ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌ ನಡೆಸುವ ಪೋಡಕಾಸ್ಟ್‌ನಲ್ಲಿ ಮಾತನಾಡಿದ್ದು, ಇದೇ ವರ್ಷ ಈ ಕಂಪನಿ ಸೇಲ್‌ ಆದಲ್ಲಿ 2 ಮಿಲಿಯನ್ ಡಾಲರ್‌ಗೆ ಮಾರಾಟವಾಗುತ್ತದೆ. ಇನ್ನು ಮುಂದಿನ ವರ್ಷ ಈ ತಂಡವನ್ನು ಮಾರಾಟ ಮಾಡಲು ಹೋದರೆ ಇದರ ಬೆಲೆ 2.5 ಬಿಲಿಯನ್ ಡಾಲಾರ್ ಆಗುತ್ತದೆ ಎಂದು ಮೋದಿ ತಿಳಿಸಿದ್ದಾರೆ. ಇಂಗ್ಲೆಂಡ್‌ನ ಡಿಯಾಜಿಯೊ ಕಂಪನಿ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಎಂಬ ಆಲ್ಕೋಹಾಲ್ ಕಂಪನಿಯ ಮೂಲಕ ಆರ್‌ಸಿಬಿ ಮ್ಯಾನೇಜ್ಮೆಂಟ್‌ ಮಾಡುತ್ತಿದೆ.

Story first published: Tuesday, September 30, 2025, 15:24 [IST]
Other articles published on Sep 30, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+