Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಾಸ್ಕರ್ ಚಾಲಕ ಗ್ರೆಗ್ ಬಿಫಲ್ ವಿಮಾನ ದುರಂತದಲ್ಲಿ ಸಾವು

ಅಮೆರಿಕದ ಉತ್ತರ ಕೆರೊಲಿನಾದ ಸ್ಟೇಟ್ಸ್‌ವಿಲ್ಲೆಯಲ್ಲಿರುವ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಅಪಘಾತ ಸಂಭವಿಸಿದೆ. ಈ ನಿಲ್ದಾಣದಲ್ಲಿ ಜೆಟ್‌ ವಿಮಾನ ಅಪಘಾತಕ್ಕೆ ಈಡಾಗಿದೆ. ಈ ಅಪಘಾತದಲ್ಲಿ ಮಾಜಿ ನಾಸ್ಕರ್‌ (NASCAR) ಚಾಲಕ ಗ್ರೆಗ್‌ ಬಿಫಲ್‌ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಬಿಫಲ್‌ ಕುಟುಂಬದವರು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ.

ಗ್ರೆಗ್ ಬಿಫಲ್ ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ಲ್ಯಾಂಡ್ ಮಾಡುವ ವೇಳೆ ಜೆಟ್‌ ವಿಮಾನ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿವೆ. ಗುರುವಾರ ಬೆಳಿಗ್ಗೆ 10:20 ರ ಸುಮಾರಿಗೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವಾಗ ಸೆಸ್ನಾ C550 ಅಪಘಾತಕ್ಕೆ ಈಡಾಗಿದೆ. ಫ್ಲೋರಿಡಾಕ್ಕೆ ಹಾರುತ್ತಿದ್ದ ಸೆಸ್ನಾ C550 ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ಹಿಂತಿರುಗಲು ಪ್ರಯತ್ನಿಸಿದಾಗ, ದುರಂತ ಸಂಭವಿಸಿದೆ. ಮೃತರ ಗುರುತುಗಳನ್ನು ಇನ್ನು ನಿಖರವಾಗಿ ಪತ್ತೆ ಹಚ್ಚಲು ಆಗಿಲ್ಲ.

Former NASCAR Driver Greg Biffle and Family Killed in North Carolina Plane Crash

ಕೆಟ್ಟ ಹವಾಮಾನ ಅಥವಾ ತಾಂತ್ರಿಕ ದೋಷವು ವಿಮಾನವನ್ನು ಹಿಂದಕ್ಕೆ ತಿರುಗಿಸಲು ಕಾರಣವೇ ಎಂದು ತಿಳಿಯಲು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆಗೆ ಮುಂದಾಗಿದೆ. ಗ್ರೆಗ್ ಬಿಫಲ್ ಮಾಜಿ ನಾಸ್ಕರ್‌ ಚಾಲಕ. ಇವರು 50 ಕ್ಕೂ ಹೆಚ್ಚು ರೇಸ್‌ಗಳನ್ನು ಗೆದ್ದ ಹಿರಿಮೆ ಹೊಂದಿದ್ದಾರೆ. ಇವರ ನಿಧನದ ಬಗ್ಗೆ ನಾಸ್ಕರ್ ಸಂತಾಪ ವ್ಯಕ್ತಪಡಿಸಿದೆ. ಇವರು ಕ್ರೀಡೆಯ ಮೇಲೆ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದು ಹೇಳಿದೆ.

Story first published: Friday, December 19, 2025, 15:51 [IST]
Other articles published on Dec 19, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+