ನ್ಯೂಜಿಲೆಂಡ್ ಮಾಜಿ ಆಲ್ ರೌಂಡರ್ ಕ್ರಿಸ್ ಕೇರ್ನ್ಸ್‌ಗೆ ಪಾರ್ಶ್ವವಾಯು

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಮಾಜಿ ಆಲ್ ರೌಂಡರ್ ಕ್ರಿಸ್ ಕೇರ್ನ್ಸ್ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಹೃದಯ ಶಸ್ತ್ರ ಚಿಕಿತ್ಸೆಯ ಬಳಿಕ ಕೇರ್ನ್ಸ್ ಸ್ಥಿತಿ ಗಂಭೀರವಾಗಿತ್ತು. ಶಸ್ತ್ರ ಚಿಕಿತ್ಸೆಯ ಬಳಿಕ ಕೇರ್ನ್ಸ್ ಕಾಲುಗಳು ಪಾರ್ಶ್ವವಾಯುಗೀಡಾಗಿದೆ ಎಂದು ತಿಳಿದು ಬಂದಿದೆ.
51ರ ಹರೆಯದ ಕ್ರಿಸ್ ಕೇರ್ನ್ಸ್ ಅವರು ವಾಸವಾಗಿರುವ ಆಸ್ಟ್ರೇಲಿಯಾದ ಕ್ಯಾನ್ಬೆರಾಕ್ಕೆ ವಾಪಸ್ಸಾಗಿದ್ದಾರೆ. ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ಕೇರ್ನ್ಸ್ ಚೇತರಿಸಿಕೊಳ್ಳಲು ಸುದೀರ್ಘ ಸಮಯ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಅವರನ್ನು ಲೈಫ್ ಸಪೋರ್ಟ್‌ನೊಂದಿಗೆ ಸಿಡ್ನಿಯ ಸೇಂಟ್ ವಿನ್ಸೆಂಟ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಸಿಡ್ನಿಯಲ್ಲಿ ಜೀವ ಉಳಿಸುವ ತುರ್ತು ಹೃದಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕ್ರಿಸ್ ಕೇರ್ನ್ಸ್ ಬೆನ್ನುಮೂಳೆಯಲ್ಲಿ ಪಾರ್ಶ್ವವಾಯು ಉಂಟಾಗಿದೆ. ಇದು ಅವರ ಕಾಲುಗಳಲ್ಲಿ ಪಾರ್ಶ್ವವಾಯುವಿಗೆ ಕಾರಣವಾಗಿದೆ"ಎಂದು ಕೇರ್ನ್ಸ್ ವಕೀಲ ಆ್ಯರನ್ ಲಾಯ್ಡ್ ಸ್ಟಫ್.ಕೊ.ಎನ್‌ಝಡ್. ಜೊತೆ ಹೇಳಿಕೆ ನೀಡಿದ್ದಾರೆ.
"ಈ ಕಾರಣದಿಂದಾಗಿ ಕ್ರಿಸ್ ಆಸ್ಟ್ರೇಲಿಯಾದ ಬೆನ್ನುಮೂಳೆ ಚಿಕಿತ್ಸೆಗೆ ಸ್ಪೆಷಾಲಿಸ್ಟ್‌ಗಳಿರುವ ಆಸ್ಪತ್ರೆಯಲ್ಲಿ ಚೇತರಿಕೆಗಾಗಿ ಪ್ರಮುಖ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ," ಎಂದು ಆ್ಯರನ್ ಲಾಯ್ಡ್ ಮಾಹಿತಿ ನೀಡಿದ್ದಾರೆ. ಬ್ಯಾಟಿಂಗ್ ಆಲ್ ರೌಂಡರ್ ಆಗಿದ್ದ ಕ್ರಿಸ್, ನ್ಯೂಜಿಲೆಂಡ್ ಪರ 62 ಟೆಸ್ಟ್ ಪಂದ್ಯಗಳಲ್ಲಿ 3320 ರನ್, 218 ವಿಕೆಟ್, 215 ಏಕದಿನ ಪಂದ್ಯಗಳಲ್ಲಿ 4950 ರನ್, 201 ವಿಕೆಟ್ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications