For Quick Alerts
ALLOW NOTIFICATIONS  
For Daily Alerts
 

ಜೀವರಕ್ಷಕಗಳ ಸಹಾಯದಿಂದ ಹೊರಬಂದ ನ್ಯೂಜಿಲೆಂಡ್ ಮಾಜಿ ಕ್ರಿಕೆಟರ್ ಕ್ರಿಸ್ ಕೇರ್ನ್ಸ್

Former New Zealand cricketer Chris Cairns off life support

ಬೆಂಗಳೂರು, ಆಗಸ್ಟ್ 20: ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಜೀವರಕ್ಷಕಗಳ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ ನ್ಯೂಜಿಲೆಂಡ್ ಮಾಜಿ ಆಲ್‌ರೌಂಡರ್ ಕ್ರಿಸ್ ಕೇರ್ನ್ಸ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಕ್ರಿಸ್ ಕೇರ್ನ್ಸ್ ಅವರು ಈಗ ಜೀವರಕ್ಷಕಗಳ ಸಹಾಯದಿಂದ ಹೊರಬಂದಿದ್ದು ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಕ್ರಿಸ್ ಕೇರ್ನ್ಸ್ ಅವರ ವಕೀಲರು ಶುಕ್ರವಾರ ತಿಳಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ವಾಸವಾಗಿರುವ 51ರ ಹರೆಯದ ಕ್ರಿಸ್ ಕೇರ್ನ್ಸ್ ಎದೆ ನೋವಿನಿಂದ ತಮ್ಮ ಮನೆಯಲ್ಲಿ ಕುಸಿದು ಬಿದ್ದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಏಯೋರ್ಟಿಕ್ ಡಿಸೆಕ್ಷನ್‌ ಸಮಸ್ಯೆಗೆ ಅವರು ತುತ್ತಾಗಿರುವ ಕಾರಣದಿಂದಾಗಿ ಅದಕ್ಕೆ ಪೂರಕವಾದ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಸದ್ಯ ಕ್ರಿಸ್ ಕೇರ್ನ್ಸ್ ಚೇತರಿಕೆಯ ಹಾದಿಯಲ್ಲಿದ್ದು ಜೀವರಕ್ಷಕಗಳ ಸಹಾಯದಿಂದಲೂ ಹೊರಬಂದಿದ್ದಾರೆ ಎಂದು ಕೇರ್ನ್ಸ್ ಪರ ವಕೀಲ ಆರೋನ್ ಲಾಯ್ಡ್ ತಿಳಿಸಿದ್ದಾರೆ.

"ಕ್ರಿಸ್ ಕೇರ್ನ್ಸ್ ಈಗ ಜೀವ ರಕ್ಷಕಗಳ ಸಹಾಯದಿಂದ ಹೊರಬಂದಿದ್ದಾರೆ ಎಂದು ತಿಳಿಸಲು ನಾನು ಸಂತಸಪಡುತ್ತಿದ್ದೇನೆ. ಸಿಡ್ನಿಯಲ್ಲಿರುವ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದು ಅವರ ಕುಟುಂಬಸ್ಥರೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತಿದೆ. ಅವರು ಹಾಗೂ ಅವರ ಕುಟುಂಬ ಎಲ್ಲರ ಬೆಂಬಲಕ್ಕೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಈಗ ಅವರು ಖಾಸಗೀತನವನ್ನು ಬಯಸುತ್ತಿದ್ದಾರೆ. ಚೇತರಿಕೆಯನ್ನು ಕಾಣುತ್ತಿರುವುದರಿಂದ ಅವರು ಎಲ್ಲರ ಪ್ರಾರ್ಥನೆ ಹಾಗೂ ಹಾರೈಕೆಗಳನ್ನು ಇದೇ ರೀತಿ ಮುಂದುವರಿಸಲು ಬಯಸುತ್ತಾರೆ" ಎಂದು ಆರೋನ್ ಲಾಯ್ಡ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಆಟಗಾರ ಕ್ರಿಸ್ ಕ್ರೈನ್ಸ್‌ಗೆ ನ್ಯೂಜಿಲೆಂಡ್ ತಂಡದ ಪರವಾಗಿ ಸುಂದರ ಕ್ರಿಕೆಟ್ ವೃತ್ತಿಜೀವನವನ್ನು ಹೊಂದಿದ್ದಾರೆ. ನ್ಯೂಜಿಲೆಂಡ್ ತಂಡದ ಪರವಾಗಿ ಅವರು 62 ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿದ್ದಾರೆ. ಅಲ್ಲದೆ 215 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿಯೂ ನ್ಯೂಜಿಲೆಂಡ್ ತಂಡದಲ್ಲಿ ಕಣಕ್ಕಿಳಿದಿದ್ದಾರೆ. 1989ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟರ್‌ಗೆ ಪದಾರ್ಪಣೆ ಮಾಡಿದ ಕ್ರಿಸ್ ಕ್ರೈನ್ಸ್ 2006ರಲ್ಲಿ ನಿವೃತ್ತಿಯನ್ನು ಪಡೆದುಕೊಂಡಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ 33ಕ್ಕೂ ಅಧಿಕ ಸರಾಸರಿಯಲ್ಲಿ 3,320 ರನ್‌ಗಳನ್ನು ಗಳಿಸಿರುವ ಕ್ರಿಸ್ ಕ್ರೈನ್ಸ್ 29.40 ಸರಾಸರಿಯಲ್ಲಿ 218 ವಿಕೆಟ್ ಪಡೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 29.46ರ ಸರಾಸರಿಯಲ್ಲಿ 4950 ರನ್‌ಗಳಿಸಿ ಮಿಂಚಿರುವ ಕೇರ್ನ್ಸ್ ಇದೇ ಮಾದರಿಯಲ್ಲಿ ಬೌಲಿಂಗ್‌ನಲ್ಲಿ 201 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ನಿವೃತ್ತಿಯ ಬಳಿಕ ಅವರು ಸ್ಕೈ ಸ್ಪೋರ್ಟ್ಸ್‌ನಲ್ಲಿ ವೀಕ್ಷಕ ವಿವರಣೆಕಾರನಾಗಿಯೂ ಮಿಂಚಿದ್ದರು.

2000ನೇ ಇಸವಿಯಲ್ಲಿ ಕ್ರಿಸ್ ಕ್ರೈನ್ಸ್ 5 ಕ್ರಿಕೆಟರ್‌ಗಳೊಂದಿಗೆ ವಿಸ್ಡನ್ ಆಟಗಾರನಾಗಿಯೂ ಹೆಸರಿಲ್ಪಟ್ಟಿದ್ದರು. 2000ನೇ ಇಸವಿಯಲ್ಲಿ ಐಸಿಸಿ ನಾಕ್‌ಔಟ್ ಟ್ರೋಫಿಯಲ್ಲಿ ನ್ಯೂಜಿಲೆಮಡ್‌ನ ಗೆಲುವಿನಲ್ಲಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು. ನೈರೋಬಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕಿವೀಸ್ ಪಡೆಯ ಈ ಬಲಗೈ ಬ್ಯಾಟ್ಸ್‌ಮನ್ ಭಾರತದ ವಿರುದ್ಧ ಅಜೇಯ 102 ರನ್‌ಗಳನ್ನು ಬಾರಿಸಿದ್ದರು. ಈ ಪ್ರದರ್ಶನದ ಸಹಾಯದಿಂದ ಭಾರತದ ನೀಡಿದ್ದ 265 ರನ್‌ಗಳ ಗುರಿಯನ್ನು ನ್ಯೂಜಿಲೆಂಡ್ ತಲುಪಿ ಗೆದ್ದುಕೊಂಡಿತ್ತು. ತಮ್ಮ ಸಮಕಾಲೀನ ಆಟಗಾರರ ಪೈಕಿ ನ್ಯೂಜಿಲೆಂಡ್‌ನ ಆಲ್‌ರೌಂಡರ್ ಕ್ರಿಸ್ ಕ್ರೈನ್ಸ್ ಅತ್ಯುತ್ತಮ ಆಲ್‌ರೌಂಡರ್ ಆಟಗಾರನಾಗಿ ಗುರುತಿಸಿಕೊಂಡಿದ್ದರು.

ಕಳೆದ ಹಲವಾರು ವರ್ಷಗಳಿಂದ ನ್ಯೂಜಿಲೆಂಡ್ ತಂಡದ ಈ ಮಾಜಿ ಆಲ್‌ರೌಂಡರ್ ಆಸ್ಟ್ರೇಲಿಯಾದಲ್ಲಿ ಕುಟುಂಬದ ಜೊತೆ ವಾಸಿಸುತ್ತಿದ್ದಾರೆ. ಅಲ್ಲಿಯೇ ಅನಾರೋಗ್ಯಕ್ಕೆ ತುತ್ತಾಗಿರುವ ಅವರು ಈಗ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಚೇತರಿಕೆಯ ಹಾದಿಯಲ್ಲಿರುವ ಸುದ್ದಿ ಈಗ ಅವರ ಅಭಿಮಾನಿಗಳಿಗೆ ಸಮಾಧಾನ ನೀಡಿದೆ.

ಇನ್ನು ಕ್ರಿಸ್ ಕ್ರೈನ್ಸ್ ಭಾರತದ ಪ್ರಖ್ಯಾತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್‌(IPL)ನಲ್ಲಿಯೂ ಪಾಲ್ಗೊಂಡಿದ್ದರು. 2007ರಿಂದ 2009ರವರೆಗೆ ಐಪಿಎಲ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಬಳಿಕ ನ್ಯೂಜಿಲೆಂಡ್ ತಂಡದ ಈ ಆಲ್‌ರೌಂಡರ್ ಮ್ಯಾಚ್ ಫಿಕ್ಸಿಂಗ್‌ಗೆ ಒಳಗಾಗಿದ್ದಾರೆ ಎಂದು ಆರೋಪಿಸಿ ಐಪಿಎಲ್ ಹರಾಜಿನಿಂದ ಅವರನ್ನು ಬಳಿಕ ಹೊರಗಿಡಲಾಗಿತ್ತು. ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕ್‌ಕಲಮ್ ಹಾಗೂ ಆರಂಭಿಕ ಆಟಗಾರ ಲೌ ವಿನ್ಸೆಂಟ್ ವಿನ್ಸೆಂಟ್ ಕೂಡ ಇವರ ವಿರುದ್ಧ ಕಳ್ಳಾಟದ ಆರೋಪವನ್ನು ಮಾಡಿದ್ದರು. ಆದರೆ 2015ರಲ್ಲಿ ಲಂಡನ್ ಕೋರ್ಟ್‌ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಕ್ರಿಸ್ ಕೈರ್ನ್ಸ್ ನಿರ್ದೋಶಿ ಎಂದು ತೀರ್ಪು ನೀಡಿತ್ತು.

Story first published: Friday, August 20, 2021, 14:28 [IST]
Other articles published on Aug 20, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+