Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಡಿಶಾ ಮಾಜಿ ನಾಯಕ ಪ್ರಶಾಂತ್ ಮೋಹಪಾತ್ರ ಕೋವಿಡ್-19ಗೆ ಬಲಿ

Former Odisha captain Prashant Mohapatra dies of Covid-19

ಭುವನೇಶ್ವರ: ಒಡಿಶಾ ಕ್ರಿಕೆಟ್ ತಂಡದ ಮಾಜಿ ನಾಯಕ ಪ್ರಶಾಂತ್ ಮೋಹಪಾತ್ರ ಕೋವಿಡ್-19ನಿಂದಾಗಿ ಸಾವನ್ನಪ್ಪಿದ್ದಾರೆ. ಭುವನೇಶ್ವರ್‌ನ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಶಾಂತ್, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ (ಮೇ 19) ಕೊನೆಯುಸಿರೆಳೆದಿದ್ದಾರೆ.

47ರ ಹರೆಯದ ಮೋಹಪಾತ್ರ ಅವರು ಬುಧವಾರ 7.51 am ಹೊತ್ತಿಗೆ ಪ್ರಾಣಬಿಟ್ಟಿದ್ದಾರೆ. ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಪ್ರಶಾಂತ್ ಸಾವನ್ನಪ್ಪಿದರು ಎಂದು ಭುವನೇಶ್ವರ್ ಏಮ್ಸ್‌ನ ಅಧೀಕ್ಷಕ ಡಾ.ಎಸ್‌ಎನ್ ಮೊಹಾಂತಿ ಮಾಹಿತಿ ನೀಡಿದ್ದಾರೆ.

ಪ್ರಶಾಂತ್ ಅವರ ತಂದೆ ರಾಜ್ಯಸಭಾ ಎಂಪಿ ಮತ್ತು ಪದ್ಮವಿಭೂಷನ್ ಪ್ರಶಸ್ತಿ ವಿಜೇತ ರಘುನಾಥ್ ಮೋಹಪಾತ್ರ ಕೂಡ ಕೋವಿಡ್ ಕಾರಣದಿಂದಾಗಿ ಮೇ 9ರಂದು ಅಸುನೀಗಿದ್ದರು. ಪ್ರಶಾಂತ್ ಸ್ಥಿತಿ ಗಂಭೀರಗೊಂಡಾಗ ಅವರನ್ನು ವೆಂಟಿಲೇಟರ್ ಬೆಂಬಲದಲ್ಲಿ ಇಡಲಾಗಿತ್ತು.

ಪ್ರಶಾಂತ್ ಅವರು 45 ಪ್ರಥಮದರ್ಜೆ ಪಂದ್ಯಗಳಲ್ಲಿ 30.08ರ ಸರಾಸರಿಯಂತೆ 2,196 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕ, 11 ಅರ್ಥ ಶತಕಗಳು ಸೇರಿವೆ. ಪ್ರಶಾಂತ್ ಸಾವಿಗೆ ಮಾಜಿ ಆಲ್ ರೌಂಡರ್ ಸುರೇಶ್ ರೈನಾ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

Story first published: Wednesday, May 19, 2021, 17:38 [IST]
Other articles published on May 19, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+