Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್ ಆಸ್ಟ್ರೇಲಿಯಾ ನಾನ್-ಎಕ್ಸಿಕ್ಯುಟಿವ್ ಡೈರೆಕ್ಟರ್ ಕಾಸ್ಪ್ರೊವಿಕ್ ರಾಜೀನಾಮೆ

Former pacer Michael Kasprowicz resigns as Non-executive director of Cricket Australia

ಸಿಡ್ನಿ, ಜುಲೈ 23: ಕ್ರಿಕೆಟ್ ಆಸ್ಟ್ರೇಲಿಯಾದ ನಾನ್-ಎಕ್ಸಿಕ್ಯುಟಿವ್ ಡೈರೆಕ್ಟರ್ ಸ್ಥಾನಕ್ಕೆ ಮಾಜಿ ವೇಗಿ ಮೈಕಲ್ ಕಾಸ್ಪ್ರೊವಿಕ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಬೋರ್ಡ್‌ನ ಅಧ್ಯಕ್ಷ ಅರ್ಲ್ ಎಡ್ಡಿಂಗ್ಸ್ ತಿಳಿಸಿದ್ದಾರೆ. ಕಾಸ್ಪ್ರೊವಿಕ್ ದೀರ್ಘ ಕಾಲ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಸೇವೆ ಸಲ್ಲಿಸಿದ್ದರು.

ಮಾಜಿ ಸಿಇಒ ಕೆವಿನ್ ರೋಬರ್ಟ್ಸ್‌ ರಾಜೀನಾಮೆ ನೀಡಿದ ಒಂದು ತಿಂಗಳ ಬಳಿಕ 48ರ ಹರೆಯದ ಮೈಕಲ್ ಕಾಸ್ಪ್ರೊವಿಕ್ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಈ ವಿಚಾರವನ್ನು ಅರ್ಲ್ ಎಡ್ಡಿಂಗ್ಸ್ ಬುಧವಾರ (ಜುಲೈ 22) ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.

'ಮಾಜಿ ಅಂತಾರಾಷ್ಟ್ರೀಯ ಆಟಗಾರನಾಗಿ, ಎಸಿಎ ಅಧ್ಯಕ್ಷರಾಗಿ, ಕ್ವೀನ್ಸ್‌ಲ್ಯಾಂಡ್ ಕ್ರಿಕೆಟ್‌ನ ಹಂಗಾಮಿ ಸಿಇಒ ಆಗಿ ಮತ್ತು ಬೋರ್ಡ್‌ನ ಸದಸ್ಯರಾಗಿ ಕಳೆದ ಎಂಟು ವರ್ಷಗಳಿಂದ ಮೈಕಲ್ ಅವರು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಸೇವೆ ಸಲ್ಲಿಸಿದ್ದಾರೆ. ಕ್ರಿಕೆಟ್ ಕುಟುಂಬದ ದೀರ್ಘ ಕಾಲದ ಸದಸ್ಯರಾಗಿರುವ ಮೈಕಲ್‌ ಸೇವೆಗಾಗಿ ನಾವು ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ,' ಎಂದು ಅರ್ಲ್ ಎಡ್ಡಿಂಗ್ಸ್ ಹೇಳಿದ್ದಾರೆ.

ನಿರ್ದೇಶಕರಾಗಿ ಆಯ್ಕೆಯಾಗುವ ಮುನ್ನ ಕಾಸ್ಪ್ರೊವಿಕ್ ಅವರು ಕ್ರಿಕೆಟ್ ಆಸ್ಟ್ರೇಲಿಯಾ ಪರ 38 ಟೆಸ್ಟ್ ಪಂದ್ಯಗಳು, 43 ಏಕದಿನ ಪಂದ್ಯಗಳು ಮತ್ತು 2 ಟಿ20 ಪಂದ್ಯಗಳಲ್ಲಿ ಆಡಿದ್ದರು. ಟೆಸ್ಟ್‌ನಲ್ಲಿ 113 ವಿಕೆಟ್‌ಗಳು, ಏಕದಿನದಲ್ಲಿ 67 ವಿಕೆಟ್‌ಗಳು, ಟಿ20ಐನಲ್ಲಿ 5 ವಿಕೆಟ್‌ ದಾಖಲೆ ಕಾಸ್ಪ್ರೊವಿಕ್ ಹೆಸರಿನಲ್ಲಿದೆ.

Story first published: Thursday, July 23, 2020, 16:58 [IST]
Other articles published on Jul 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+