Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆತನ ಆಟವನ್ನು ನಂಬುವುದು ಅಸಾಧ್ಯ: ವಿರಾಟ್ ಕೊಹ್ಲಿ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗನ ಮಾತು

Former Pakistan Batsman Says Virat Kohli Is ‘Best Across Formats’

ವಿರಾಟ್ ಕೊಹ್ಲಿ ಸದ್ಯ ವಿಶ್ವದ ಕ್ರಿಕೆಟ್‌ನಲ್ಲಿ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿರುವ ಆಟಗಾರ. ತನ್ನ ಅಮೋಘ ಆಟದಿಂದ ಕೋಟ್ಯಂತರ ಅಭಿಮಾನಿಗಳನ್ನು ಕೊಹ್ಲಿ ಸಂಪಾದಿಸಿದ್ದಾರೆ. ವಿಶ್ವದ ಯಾವುದೇ ಕ್ರೀಡಾಂಗಣಕ್ಕೆ ಹೋದರು ಅಲ್ಲಿ ವಿರಾಟ್ ಬ್ಯಾಟಿಂಗ್‌ಗೆ ಇಳಿದಾಗ "ಕೊಹ್ಲಿ ಕೊಹ್ಲಿ" ಎಂಬ ಧ್ವನಿ ಕೇಳಿ ಬಂದೇ ಬರುತ್ತದೆ.

ಇಂತಾ ಅದ್ಭುತ ಆಟಗಾರನ ಬಗ್ಗೆ ಪಾಕಿಸ್ತಾನದ ಆಟಗಾರರೂ ಕೂಡ ಅನೇಕ ಸಂದರ್ಭಗಳಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈಗ ಮತ್ತೋರ್ವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್ ವಿರಾಟ್ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆತನ ಆಟದ ರೀತಿ ನಿಜಕ್ಕೂ ನಂಬಲು ಕಷ್ಟ ಎಂದು ಅವರು ಹೇಳಿದ್ದಾರೆ.

ಎಲ್ಲಾ ಮಾದರಿಯಲ್ಲೂ ಶ್ರೇಷ್ಠ

ಎಲ್ಲಾ ಮಾದರಿಯಲ್ಲೂ ಶ್ರೇಷ್ಠ

ಪ್ರಸಕ್ತ ಸಂದರ್ಭದಲ್ಲಿ ಕ್ರಿಕೆಟ್‌ನಲ್ಲಿ ಹಲವಾರು ಉತ್ಕೃಷ್ಟ ಮಟ್ಟದ ಆಟಗಾರರಿದ್ದಾರೆ. ರೋಹಿತ್ ಶರ್ಮಾ, ಜೋ ರೂಟ್, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್ ರಂತಾ ಆಟಗಾರರಿದ್ದಾರೆ. ಆದರೆ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಅತ್ಯಂತ ಉನ್ನತ ಮಟ್ಟದ ಕ್ರಿಕೆಟಿಗ ಎಂದು ಮೊಹಮದ್ ಯೂಸುಪ್ ಹೇಳಿದ್ದಾರೆ.

ಒತ್ತಡ ನಿಭಾಯಿಸುವ ರೀತಿ

ಒತ್ತಡ ನಿಭಾಯಿಸುವ ರೀತಿ

ಆತ ಬ್ಯಾಟಿಂಗ್ ಮಾಡುವ ಶೈಲಿ, ಪ್ರತಿ ಇನ್ನಿಂಗ್ಸ್‌ನಲ್ಲೂ ಒತ್ತಡವನ್ನು ನಿಭಾಯಿಸುವ ರೀತಿ ಶತಕಗಳನ್ನು ಭಾರಿಸುವ ರೀತಿ ಅಥವಾ ಆಡುವ ಬಗೆ ನಿಜಕ್ಕೂ ನಂಬುವುದು ಕಷ್ಟ ಎಂದು ಮೊಹಮದ್ ಯೂಸುಫ್ ಹೇಳಿದ್ದಾರೆ. ಹೀಗೆ ವಿರಾಟ್ ಕೊಹ್ಲಿ ಆಟವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಬಗ್ಗೆ ಮನಸಾರೆ ಮಾತನಾಡಿದ್ದಾರೆ.

ಬಾಬರ್ ಜೊತೆ ಹೋಲಿಕೆ ಬೇಡ

ಬಾಬರ್ ಜೊತೆ ಹೋಲಿಕೆ ಬೇಡ

ಇನ್ನು ಇದೇ ಸಂದರ್ಭದಲ್ಲಿ ಯೂಸುಫ್ ಕೊಹ್ಲಿ ಮತ್ತು ಬಾಬರ್ ಅಜಂ ಹೋಲಿಕೆಯ ಬಗ್ಗೆಯೂ ಮಾತನಾಡಿದ್ದಾರೆ. ಈ ಹೋಲಿಕೆ ನಿಜಕ್ಕೂ ನ್ಯಾಯಯುತ ಅಲ್ಲ. ವಿರಾಟ್ ಕೊಹ್ಲಿ ಸಾಕಷ್ಟು ಅನುಭವ ಇರುವ ಆಟಗಾರ, ಆತ 2008-09 ರಿಂದಗಲೂ ಕ್ರಿಕೆಟ್ ಆಡುತ್ತಿದ್ದಾರೆ. ಆಡಿದ ಪಂದ್ಯಗಳ ಸಂಖ್ಯೆಯಲ್ಲೂ ವಿರಾಟ್ ಸಾಕಷ್ಟು ಅನುಭವಿಯಾಗಿದ್ದಾರೆ. ಆದರೆ ಬಾಬರ್ ಕೂಡ ಸಾಕಷ್ಟು ಪ್ರತಿಭೆಯನ್ನು ಹೊಂದಿರುವ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮೊಹಮದ್ ಯೂಸುಫ್ ಹೇಳಿದ್ದಾರೆ.

Story first published: Wednesday, May 13, 2020, 20:33 [IST]
Other articles published on May 13, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+